ಏಪ್ರಿಲ್ 1 ರಿಂದ ಈ ಸುರಕ್ಷಾ ಸಾಧನ ನೀವು ಸಂಚರಿಸುವ ಓಲಾ ಉಬೆರ್-ನಲ್ಲಿ ಇಲ್ಲಾಂದ್ರೆ ನೀವು ಅದರಲ್ಲಿ ಸಂಚರಿಸಬೇಡಿ ಮತ್ತು complaint ಮಾಡಿ!!

0
420

ಕೇಂದ್ರ ಸರ್ಕಾರ ಕೆಲವು ಹೊಸ ಸಂಚಾರ ನಿಯಮಗಳನ್ನು ಜಾರಿಗೆ ತಂದಿದ್ದು ಭಾರತದಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಈ ನಿಯಮ ಜಾರಿಗೆ ಮಾಡಲಾಗಿದೆ. ಈ ನಿಯಮದ ಪ್ರಕಾರ ಪ್ರತಿಯೊಂದು ಸಾರ್ವಜನಿಕ ಸಾರಿಗೆಗಳಲ್ಲಿ ಕಡ್ಡಾಯವಾಗಿ VLTs ಮತ್ತು ಪ್ಯಾನಿಕ್ ಬಟನ್​ ಅನ್ನು ಅಳವಡಿಸಬೇಕೆಂದು ತಿಳಿಸಲಾಗಿದೆ. ಏಕೆಂದರೆ ಇತ್ತಿಚ್ಚಿಗೆ ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯ, ಅತ್ಯಾಚಾರ ಅಪಹರಣ ಕೇಸ್ ಹೆಚ್ಚಾಗಿ ಕೇಳಿಬರುತ್ತಿದು ಅವುಗಳನ್ನು ಹತ್ತೋಟಗೆ ತರುವ ಸಲುವಾಗಿ ಈ ನಿಯಮ ಜಾರಿ ಮಾಡಲಾಗಿದೆ.

Also read: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್-ಗಳು ಇರೋದಿಲ್ಲ, ಹಾಗಂತ ಖುಷಿ ಪಡಬೇಡಿ ಉಚಿತ ಸಂಚಾರ ಇರೋಲ್ಲ, ಹೊಸ ರೀತಿ ದುಡ್ಡು ತಗೋತಾರೆ!!

ಎಪ್ರಿಲ್ ಒಳಗೆ ಜಪ್ತಿಯಾಗುತ್ತ?

ಹೌದು ಕೇಂದ್ರ ಸರ್ಕಾರದ ಹೊಸ ನಿಯಮ ಕಡ್ಡಾಯವಾಗಿದ್ದು ಹೊಸ ವರ್ಷದಿಂದ ಜಾರಿಯಲ್ಲಿದ್ದು, ಏಪ್ರಿಲ್​ 1, 2019 ರೊಳಗೆ ಹಳೆಯ ವಾಹನಗಳಲ್ಲಿ ಪ್ಯಾನಿಕ್​ ಬಟನ್​ ಅಳವಡಿಸಲು ಗಡುವು ನೀಡಲಾಗಿದೆ. ಒಂದು ವೇಳೆ ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ನಿಮ್ಮ ವಾಹನವನ್ನು ಜಪ್ತಿ ಮಾಡಲಾಗುತ್ತೆ. ಮತ್ತು ಪರವಾನಗಿಯನ್ನು ರದ್ದು ಮಾಡಲಾಗುತ್ತೆ.

ಏನಿದು ಪ್ಯಾನಿಕ್ ಬಟನ್?

ಒಬ್ಬರೆ ಮಹಿಳೆಯರು ಬಾಡಿಗೆ ವಾಹನ ಅಥವಾ ಇನ್ಯಾವುದೋ ವಾಹನಗಲ್ಲಿ ಪ್ರಯಾಣಿಸುವಾಗ ತೊಂದರೆಗೆ ಒಳಗಾದವರಿಗೆ ಅನುಕೂಲವಾಗಲು ಈ AIS140 ಮಾನದಂಡಗಳನ್ನು ಸಂಪೂರ್ಣವಾಗಿ ಮಹಿಳೆಯರ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ವಾಹನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದರೆ, ಪ್ರಯಾಣಿಕರು ಪ್ಯಾನಿಕ್ ಬಟನ್​ ಅನ್ನು ಒತ್ತಬಹುದು. ಅಷ್ಟೇ ಅಲ್ಲದೆ ವಾಹನಗಳ ವೇಗವನ್ನು ನಿಯಂತ್ರಿಸಲು ಕೂಡ ಸಹಕಾರಿಯಾಗಲಿದೆ. ವಾಹನವು ಅನಿಯಮಿತ ವೇಗದಿಂದ ಚಲಿಸುತ್ತಿದ್ದರೆ ಬಟನ್​ ಒತ್ತುವ ಮೂಲಕ ಸೂಚನೆ ನೀಡಬಹುದು. ಈ ಗುಂಡಿಯನ್ನು ಒತ್ತುತ್ತಿದ್ದಂತೆ ತಕ್ಷಣವೇ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ಇದರಿಂದ ವಾಹನಗಳ ಟ್ರಾಕಿಂಗ್ ಮಾಡಿ ತೊಂದರೆಗೆ ಒಳಗಾದವರನ್ನು ರಕ್ಷಿಸಲಾಗುತ್ತೆ.


Also read: ಕಳ್ಳರು ಈಗ ATM ಕಾರ್ಡ್ ನಿಮ್ಮ ಜೇಬಿನಲ್ಲಿ ಇರುವಾಗಲೇ ಅದರ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದಾರೆ, ಅದನ್ನು ತಪ್ಪಿಸುವ ಮಾಹಿತಿ ಹೇಳ್ತೀವಿ ಓದಿ!!

ಇದರ ನಿಯಂತ್ರಣ ಹೇಗೆ?

ಪ್ರತಿ ರಾಜ್ಯದಲ್ಲೂ ಇದರ ಕಾರ್ಯಾಚರಣೆಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅದರಂತೆಯೇ VLT-ಗೆ ಸೇರಿದ ವಾಹನಗಳನ್ನು ರಾಜ್ಯ ಸರ್ಕಾರ ನಿಯಂತ್ರಿಸಲಿದೆ. ಪ್ಯಾನಿಕ್​ ಗುಂಡಿಗಳನ್ನು ಒತ್ತಿದಾಗ ತಕ್ಷಣವೇ ಕಾರ್ಯಾಚರಣೆ ಕೇಂದ್ರದಲ್ಲಿ ಮಾಹಿತಿ ತಲುಪುತ್ತದೆ. ಇದರಿಂದ ವಾಹನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಒಂದು ಬಾರಿ ಬಟನ್​ ಕ್ಲಿಕ್ ಮಾಡಿದರೆ, ಆ ಪ್ರದೇಶದ ಪೊಲೀಸ್​ ಠಾಣೆಗಳಿಗೆ ಅಥವಾ ಭದ್ರತಾ ಸಿಬ್ಬಂದಿಗಳಿ ಮಾಹಿತಿ ರವಾನೆಯಾಗಲಿದೆ. ಏಪ್ರಿಲ್​ 1 ರ ನಂತರ ಪ್ಯಾನಿಕ್ ಬಟನ್​ಗಳನ್ನು ಅಳವಡಿಸದ ಸಾರ್ವಜನಿಕ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

Also read: ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಿಸಿದವರಿಗೆ ಬಿಗ್ ಶಾಕ್; 7,700 ಅನಧಿಕೃತ ಕಟ್ಟಡಗಳಿಗೆ ಫೆಬ್ರವರಿಯೊಳಗೆ ಬೀಗ ಹಾಕುವಂತೆ ಜಿ ಪರಮೇಶ್ವರ ಆದೇಶ..

ಪ್ಯಾನಿಕ್ ಬಟನ್ ಅಳವಡಿಸುವುದು ಹೇಗೆ?

AIS140 ಅನ್ನು ನವೀಕರಿಸಲು ಹಲವು ಆಯ್ಕೆಗಳಿವೆ ಹಳೆಯ ವಾಹನಗಳಲ್ಲಿ ವಾಹನಗಳ ಮಾಲೀಕರು ಆಫ್ಟರ್ ಮಾರ್ಕೆಟ್​ ಡಿವೈಸ್​ ವೆಂಡರ್​, ಒಇಎಂ ಅನ್ನು ಅಪ್​ಡೇಟ್​ ಮಾಡಿಕೊಳ್ಳಬಹುದು. ಅಲ್ಲದೆ ಆರ್​ಟಿಓ ಅನ್ನು ಸಂಪರ್ಕಿಸುವ ಮೂಲಕ ಬಟನ್​ ಅಳವಡಿಕೆಯ ಸಂಪೂರ್ಣ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅಥವಾ ಯಾವುದಾದರೂ ಟ್ರಾನ್ಸ್​ಪೋರ್ಟ್​ ಎಂಡ್​ ಲಾಜಿಸ್ಟಿಕ್ ಕಂಪೆನಿಯ ಮೂಲಕ ಈ ಬಟನ್​ಗಳನ್ನು ಅಳವಡಿಸಿಕೊಳ್ಳಬಹುದು.