ಬೆಳ್ಳಿ ಗೆದ್ದ ಸಿಂಧೂಗೆ ಮೂರು ವರ್ಷಕ್ಕೆ 50 ಕೋಟಿ ಡೀಲ್ !

0
629

ಹೈದರಾಬಾದ್:ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಪ್ರಸ್ತುತ ಭಾರತದಾದ್ಯಂತ ಶ್ಲಾಘನೆಗೆ ಪಾತ್ರರಾಗಿರುವ ಪಿವಿ ಸಿಂಧೂ ಅವರ ಜೀವನದ ಕೆಲ ಪ್ರಮುಖ ಘಟ್ಟ ತಲುಪಿದ್ದಾರೆ. ಇದೀಗ  ಇವರು ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ಬೇಸ್ಲೈನ್ನೊಂದಿಗೆ ಮೂರು ವರ್ಷಗಳಿಗೆ 50 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ,

ಸಿಂಧು ಅವರದ್ದು ದೊಡ್ಡ ಡೀಲ್. ಕ್ರಿಕೆಟಿಗರನ್ನು ಹೊರತುಪಡಿಸಿದರೆ ಇತರ ಆಟಗಾರರಿಗೆ ಸಿಕ್ಕಿದ ದೊಡ್ಡ ಡೀಲ್ ಇದಾಗಿದೆ. ಬೇಸ್ಲೈನ್ ಕಂಪನಿಯ ಆಡಳಿತ ನಿರ್ದೇಶಕ ತುಹಿನ್ ಮಿಶ್ರಾ ಅವರು ಸಿಂಧು ಅವರು ಮಾಡಿಕೊಂಡಿರುವ ಡೀಲ್ನ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿಂಧು ಅವರ ಹೆಚ್ಚುತ್ತಿರುವ ಜನಪ್ರಿಯತೆ ಹಲವು ಕಂಪನಿಗಳ ಗಮನ ಸೆಳೆದಿದೆ. ಮುಂದಿನ ಮೂರು ವರ್ಷಗಳ ಕಾಲ ಅವರ ಜಾಹೀರಾತು ವೌಲ್ಯವನ್ನು ಹೆಚ್ಚಿಸಲು ಬೇಸ್ಲೈನ್ ಕಂಪನಿ ಪ್ರಯತ್ನಿಸಲಿದೆ. ಅವರ ಅಪೂರ್ವ ಯಶಸ್ಸು ,ಸೌಜನ್ಯ ಮತ್ತು ವೌಲ್ಯಗಳ ಮೂಲಕ ಮಹಿಳೆಯರಿಗೆ ಶಕ್ತಿ ತಂದುಕೊಟ್ಟಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ಬೇಸ್ಲೈನ್ ಮುಂದೆ ಸಿಂಧು ಅವರ ಬ್ರಾಂಡ್ ಪ್ರೊಫೈಲಿಂಗ್, ಪರವಾನಿಗೆ, ಒಡಂಬಡಿಕೆ ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳಲಿದೆ. 16 ಕಂಪನಿಗಳು ಸಿಂಧು ಜೊತೆ ಜಾಹೀರಾತು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದೆ. ಈಗಾಗಲೇ 9 ಕಂಪನಿಗಳ ಜೊತೆ ಒಪ್ಪಂದ ಅಂತಿಮ ಹಂತದಲ್ಲಿದೆ. ಅವರಿ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿ ತವರಿಗೆ ವಾಪಸಾದ ಬಳಿಕ ಹಲವು ಕಂಪನಿಗಳು ಅವರನ್ನು ಭೇಟಿಯಾಗಿ ಜಾಹೀರಾತು ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದೆ.

ಇಂತಹ ಕಠಿ ಪರಿಶ್ರಮದಿಂದಲೇ ಪಿವಿ ಸಿಂಧೂ 2013ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಆ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಒಂಬ ಕೀರ್ತಿಗೆ ಸಿಂಧೂ ಭಾಜನರಾಗಿದ್ದರು. ಅರ್ಜುನ ಪ್ರಶಸ್ತಿ ಸ್ವೀಕರಿಸಿದಾಗ ಸಿಂಧೂಗೆ ಕೇವಲ 18 ವರ್ಷಗಳಾಗಿದ್ದವು. ಕೇವಲ ಇದು ಮಾತ್ರವಲ್ಲದೇ ಅತೀ ಚಿಕ್ಕ ವಯಸ್ಸಿನಲ್ಲೇ ಪದ್ಮಶ್ರೀ ಪುರಸ್ಕಾರ ಪಡೆದ ದೇಶದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೂ ಸಿಂಧೂ ಭಾಜನರಾಗಿದ್ದರು. 2015ರಲ್ಲಿ ಸಿಂಧೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಆಗ ಅವರ ವ.ಸ್ಸು ಕೇವಲ 20 ವರ್ಷಗಳಾಗಿತ್ತು. ಇನ್ನು ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿಯಾಗಬೇಕು ಎಂಬ ಮಹದಾಸೆ ಹೊಂದಿರುವ ಪಿವಿ ಸಿಂಧು ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಬ್ಯಾಡ್ಮಿಂಟನ್ ತರಬೇತಿಗೆ ಎಂದೂ ಚಕ್ಕರ್ ಹೊಡೆದಿರಲಿಲ್ಲವಂತೆ. ಈ ಪರಿಶ್ರಮವೇ ಇವರ ಯಶಸ್ಸಿಗೆ ಕಾರಣವಾಗಿದೆ.