ಖ್ಯಾತ ಗಾಯಕಿ ಗಾನಕೋಗಿಲೆ ಲತಾಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ. ಆಸ್ಪತ್ರೆಗೆ ದಾಖಲು.!

0
245

ಬಾಲಿವುಡ್ ಹಿರಿಯ ಖ್ಯಾತ ಗಾಯಕಿ ಗಾನಕೋಗಿಲೆ ಲತಾಮಂಗೇಶ್ಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಸ್ವರೂಪದಲ್ಲಿ ಉಸಿರಾಟದ ತೊಂದರೆ ಎದುರಾಗಿ ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು. ಲತಾ ಅವರನ್ನು ಮಧ್ಯಾಹ್ನ 2ಕ್ಕೆ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸ್ಥಿತಿ ಸದ್ಯಕ್ಕೆ ಗಂಭೀರವಾಗಿದೆ. ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಬ್ರೀಚ್ ಕ್ಯಾಂಡ್ ಆಸ್ಪತ್ರೆ ಮೂಲಗಳು ಪಿಟಿಐ ವರದಿ ಮಾಡಿದೆ.

ಹೌದು ಕಳೆದ ತಿಂಗಳು 90ನೇ ಜನ್ಮದಿನವನ್ನು ಆಚರಿಸಿಕೊಂಡ ಗಾನಕೋಗಿಲೆ ಲತಾಮಂಗೇಶ್ಕರ್ ಮಧುರವಾದ ಗೀತೆಗಳಿಂದಲೇ ಲಕ್ಷಾಂತರ ಸಂಗೀತ ಪ್ರೇಮಿಗಳ ಮನಗೆದ್ದ ಲತಾ ಇಂದಿಗೂ ಹೊಸ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ. ಸತತ 70 ವರ್ಷಗಳ ಕಾಲ ಸಂಗೀತ ಸಾಮಾಜ್ಞಿಯಾಗಿ ಆಳಿದ ಲತಾ ಮಂಗೇಶ್ಕರ್, ದೇಶದ ಪ್ರತಿಷ್ಠಿತ ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲತಾ ಮಂಗೇಶ್ಕರ್ 1929ರಲ್ಲಿ ಜನಿಸಿದ್ದರು. ಮರಾಠಿ ಗಾಯಕರಾಗಿದ್ದ ಪಂಡಿತ್ ದೀನನಾಥ್ ಮಂಗೇಶ್ಕರ್ ಹಾಗು ಸೇವಂತಿ ದಂಪತಿಯ ಹಿರಿಯ ಪುತ್ರಿ ಲತಾ. ತನ್ನ 5ನೇ ವಯಸ್ಸಿನಲ್ಲಿಯೇ ತಂದೆಯಿಂದ ಸಂಗೀತ ಪಾಠ ಕಲಿತು, 1942ರಲ್ಲಿಯೇ ತಮ್ಮ ಸಂಗೀತ ಯಾನವನ್ನು ಆರಂಭಿಸಿದ್ದರು.

ಹಿಂದಿ ಭಾಷೆಯೊಂದರಲ್ಲೇ ಸುಮಾರು 1 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಲತಾಮಂಗೇಶ್ವರ್ ಅವರು ಧ್ವನಿ ನೀಡಿದ್ದು, ಭಾರತದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಯನ್ನು 2001 ರಲ್ಲಿ ಪಡೆದಿದ್ದಾರೆ. ಒಟ್ಟಾರೆ ವಿವಿಧ ಭಾಷೆಯಲ್ಲಿ ಲತಾಮಂಗೇಶ್ಕರ್ ಅವರು 36 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ 3 ರಾಷ್ಟ್ರೀಯ ಪ್ರಶಸ್ತಿ, 6 ಫಿಲ್ಮ ಫೇರ್ ಪ್ರಶಸ್ತಿ, ಪದ್ಮವಿಭೂಷಣ್, ಪದ್ಮಭೂಷಣ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭಿಸಿದೆ. ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರು ಕೂಡ ಗಾಯಕರಾಗಿದ್ದು, ತಾಯಿ ಅವರು ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಪರಿಣಾಮ ಅವರಿಗೆ ಗಾಯನ ಸಹಜವಾಗಿ ಒಲಿದು ಬಂದಿತ್ತು. 60 ದಶಕದಲ್ಲಿ ಲತಾಮಂಗೇಶ್ಕರ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು. ಇವರು ಹಾಡಿರುವ ಹಲವು ಡ್ಯುಯೆಟ್ ಹಾಡುಗಳು ಇಂದಿಗೂ ಸೂಪರ್ ಹಿಟ್ ಸಾಲಿನಲ್ಲಿ ನಿಂತಿವೆ.

ಅಷ್ಟೇ ಅಲ್ಲದೆ ದೇಶ-ವಿದೇಶದಲ್ಲಿವೂ ಅಭಿಮಾನಿಗಳನ್ನು ಹೊಂದಿದ್ದಾರೆ, ಈ ಎಲ್ಲ ಅಭಿಮಾನಿಗಳು ಆದಷ್ಟು ಬೇಗನೆ ಲತಾಮಂಗೇಶ್ಕರ್ ಅವರ ಅರೋಗ್ಯ ಚೇತರಿಸಿಕೊಳ್ಳಲಿ ಅಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.