ಮುಸ್ಲಿಂ ಸಮುದಾಯದಿಂದ ಮತ್ತೊಬ್ಬ ಯುವ ಗಾಯಕಿಗೆ ಫತ್ವಾ!!!

0
495

ಕನ್ನಡ ರಿಯಾಲಿಟಿ ಶೋ ಒಂದರಲ್ಲಿ ಸುಹಾನಾ ಸಯ್ಯದ್‍ ಅವರು ಹಿಂದೂ ದೇವರ ಹಾಡು ಹಾಡಿದ್ದೂ ಎಲ್ಲರಿಗೂ ಗೊತ್ತೆ ಇದೆ. ಇನ್ನು ಅವರ ವಿರುದ್ಧ ಅಭಿಯಾನ ಹಾಗೂ ಬೆದರಿಕೆ ನೀಡಿರುವ ವಿಷಯ ದೇಶವಾಸಿಗಳ ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಇಂತಹದೇ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಎಸ್. ಅಸ್ಸಾಂನ ಉದೋನ್ಮುಖ ಗಾಯಕಿ ನಹೀದ್‍ ಅಫ್ರೀನ್‍. ಹಿಂದಿ ರಿಯಾಲಿಟಿ ಶೋನಲ್ಲಿ ಇವರು ತಮ್ಮ ತಾಕತ್ತಿನಿಂದಲೇ ರನ್ನರ್‍ ಅಪ್‍ ಪ್ರಶಸ್ತಿ ಪಡೆದು ಬೀಗಿದ್ದರು. ಅಲ್ಲದೆ ಎಲ್ಲರಿಂದಲೂ ಮೆಚ್ಚುಗೆ ಪಡೆದ ಗಾಯಕಿ. ನಾಹೀದ್‍ ಅವರು ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಹಾಡುಗಳನ್ನು ಹಾಡಿ ಸುದ್ದಿ ಮಾಡಿದ್ದರು. ಇದಕ್ಕೆ ಅವರದ್ದೇ ರಾಜ್ಯದ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದರೆ.

ಭಿನ್ನಮತ ಏಕೆ? ನಹೀದ್ ಅವರು ಇದೆ ತಿಂಗಳ 25 ರಂದು ಅಸ್ಸಾಂ ಕಾಲೇಜೊಂದರಲ್ಲಿ ಕಾರ್ಯಕ್ರಮ ನಿಗದಿ ಪಡೆಸಿದ್ದರು. ಆದರೆ ಈ ಸಭೆ ಶರಿಯಾದ ಚೌಕಟ್ಟಿಗೆ ವಿರುದ್ಧ ಎಂದು ಆಪ್ರೀನ್ ಫತ್ವಾ ಪ್ರಕಟಣೆ ಹೊರಡಿಸಿದೆ.

ನಡೆದಿದ್ದು ಏನು? ನಹೀದ್ ಅವರು ಸಾರ್ವಜನಿಕ ಸಭೆಯಲ್ಲಿ ಭಯೋತ್ಪಾದಕ ಸಂಘಟನೆ ನಡೆಸುತ್ತಿರುವವರ ವಿರುದ್ಧ ಗೀತೆಗಳನ್ನು ಹಾಡಿದ್ದರು. ಇದರಿಂದ ತೀವ್ರ ಬೇಸರಗೊಂಡ ಮೌಲ್ವಿಗಳು ನಹೀದ್ ಅವರಿಗೆ ಬಹಿರಂಗ ಸಂಗೀತ ಕಾರ್ಯಕ್ರಮ ನೀಡದಂತೆ ತಾಕತ್ತು ಮಾಡಿದ್ದಾರೆ.

ಆದರೆ ಸುಹಾನಾಳಂತೆ ಬೆದರಿಕೆಗೆ ಬಗ್ಗದ ನಹೀದ್, ಸಂಗೀತ ಕಾರ್ಯಕ್ರಮ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕೊನೆಯ ಉಸಿರು ಇರುವವರೆಗೂ ಹಾಡನ್ನು ಹಾಡುವದನ್ನು ನಿಲ್ಲಿಸುವುದಿಲ್ಲ. ಯಾವುದೇ ಬೆದರಿಕೆ ನನ್ನ ಸಾಧನೆಗೆ ಅಡ್ಡಿ ಆಗದು ಎಂದು ತಿಳಿಸಿದ್ದಾರೆ. ಇನ್ನು ನಹೀದ್ ಅವರ ಬೆಂಬಲಕ್ಕೆ ಅಸ್ಸಾಂ ಸಿಎಂ ನಿಂತಿದ್ದಾರೆ. ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ.