ಏನಿದು ಅಕ್ಕ ಸಮ್ಮೇಳನ, ಇಲ್ಲಿದೆ ಪುಟ್ಟ ಮಾಹಿತಿ.

0
488

ಅಕ್ಕ ಸಮ್ಮೇಳನ

ಅಕ್ಕ ವಿಶ್ವ ಕನ್ನಡ ಸಮ್ಮೇಳನ ಈ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ಅನಾವರಣ ಗೊಳ್ಳಲಿದೆ. ಏನಿದು ಅಕ್ಕ ಸಮ್ಮೇಳನ, ಇಲ್ಲಿದೆ ಪುಟ್ಟ ಮಾಹಿತಿ.

*ಅಕ್ಕ ಎಂದರೇನು?:

ಅಮೆರಿಕ ಮತ್ತು ಕೆನಡಾದಲ್ಲಿ ವಾಸಿಸುತ್ತಿರುವ ಕನ್ನಡ ಮಾತನಾಡುತ್ತಿರುವ ಜನರು ಒಗ್ಗೂಡಿ ಸ್ಥಾಪಿಸಿದ ಸಂಘಟನೆಯೇ ಅಕ್ಕ (ಅಸೋಸಿಯೇಷನ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ). ಇದು ಲಾಭರಹಿತ, ಶೈಕ್ಷಣಿಕ, ಭಾಷಾ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದೆ.

ಸ್ಥಾಪನೆಯಾಗಿದ್ದು ಯಾವಾಗ?

ಅಮೆರಿಕದ ಅರಿಜೋನಾ ನಗರದ ಫೋನಿಕ್ಸ್ ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಿತು. ಆ ಸಂದರ್ಭ ಕೆಲ ಕನ್ನಡಿಗರು, ಕನ್ನಡಕ್ಕೆ ಸಂಬಂದಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಂಘಟನೆಯೊಂದು ರಚಿಸುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದರು. ಅದರ ಫಲವೇ ಈ ಅಕ್ಕ ಸಮ್ಮೇಳನವನ್ನು 1998 ಫೆಬ್ರವರಿಯಲ್ಲಿ ಸ್ಥಾಪಿಸಲಾಯಿತು.

ಉದ್ದೇಶವೇನು?

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಮತ್ತು ಬೆಳೆಸುವುದು ಅಕ್ಕ ಸಂಘಟನೆಯ ಉದ್ದೇಶವಾಗಿದೆ. ಇದಕ್ಕಾಗಿ ಅಮೆರಿಕದ ನಾನಾ ಕಡೆ ನೆಲೆಸಿರುವ ಕನ್ನಡಿಗರನ್ನು ಸಮ್ಮೇಳನದ ಸಂದರ್ಭ ಒಗ್ಗೂಡಿಸಿ ಕನ್ನಡನಾಡು, ನುಡಿಗೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಮೊದಲ ಸಮ್ಮೇಳನ ನಡೆದಿದ್ದು ಯಾವಾಗ?

ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಲ್ಲಿ 2000ದಲ್ಲಿ ಮೊದಲ ಅಕ್ಕ ಸಮ್ಮೇಳನವನ್ನು ಕನ್ನಡ ವೃಂದ ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 2002ರಲ್ಲಿ ಡೆಟ್ರಾಯಿಟ್ ನಲ್ಲಿ 2ನೇ ಸಮ್ಮೇಳನ, 2004ರಲ್ಲಿ 3ನೇ ಸಮ್ಮೇಳನ, 2006ರಲ್ಲಿ ಬಾಲ್ಟಿಮೋರ್ ನಲ್ಲಿ 4ನೇ ಸಮ್ಮೇಳನ, 2008ರಲ್ಲಿ ಶಿಕಾಗೊದಲ್ಲಿ 5ನೇ ಸಮ್ಮೇಳನ, 2010ರಲ್ಲಿ ನ್ಯೂ ಜೆರ್ಸಿಯಲ್ಲಿ 6ನೇ ಸಮ್ಮೇಳನ, 2012ರಲ್ಲಿ 7ನೇ ಸಮ್ಮೇಳನ ನಡೆಯಿತು. 2014 ಸ್ಯಾನ್ ಫ್ರಾನ್ಸಿಸ್ಕೊದಲ್ಲಿ 8ನೇ ಸಮ್ಮೇಳನ ನಡೆಯಿತು.

9ನೇ ಸಮ್ಮೇಳನ: 9ನೇ ಸಮ್ಮೇಳನವನ್ನು ನ್ಯೂಜೆರ್ಸಿ, ನ್ಯೂಯಾರ್ಕ್, ಕನೆಕ್ಟಟ್, ಪೆನ್ವಿಲ್ವೇನಿಯಾ. ಮೇರಿಲ್ಯಾಂಡ್, ವಾಷಿಂಗ್ಟನ್ ಡಿ.ಸಿ, ವರ್ಜಿನಿಯಾ ಮುಂತಾದ ಕನ್ನಡ ಕೂಟಗಳು ಸೇರಿ ಆಯೋಜಿಸಿವೆ.