ಟ್ವೀಟ್‌ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ಗೆ ವ್ಯಂಗ್ಯವಾಗಿ ಶುಭ ಹಾರೈಸಿರುವ ರಮ್ಯಾಗೆ ಚಳಿ ಬಿಡಿಸಿದ ಟ್ವಿಟ್ಟಿಗರು..

0
555

ಪದೇ ಪದೇ ಕೆರೆದು ಹುಣ್ಣು ಮಾಡಿಕೊಳ್ಳುತ್ತಿರುವ ಕಾಂಗ್ರೆಸಿನ ಬ್ಯೂಟಿಫುಲ್ ಗರ್ಲ್, ಮಾಜಿ ಸಂಸದೆ ಮತದಾನ ಮಾಡದೆ ಕಾಂಗ್ರೆಸಿನ ಜಾಲತಾಣ ಪ್ರಚಾರ ಸಮಿತಿಯ ವಕ್ತಾರೆಯಾಗಿರುವ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಎನ್ ಡಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಅವರಿಗೆ ವ್ಯಂಗ್ಯವಾಡಿ ಮತ್ತೆ ಟೀಕೆಗೆ ಗುರಿಯಾಗಿದ್ದು ನೆಟ್ಟಿಗರು ಮುಟ್ಟಿನೋಡಿಕೊಳ್ಳುವಂತೆ ಭರ್ಜರಿಯಾಗಿ ಪ್ರತ್ಯುತ್ತರ ನೀಡದ್ದು ಬಾರಿ ವೈರಲ್ ಆಗಿದೆ. ರಮ್ಯಾ ಶುಭಕೋರುವ ನೆಪದಲ್ಲಿ ವ್ಯಂಗ್ಯ ಮಾಡಿದ್ದು ತಮ್ಮ ಬುಡಕ್ಕೆ ಬರುವಂತ ಉತ್ತರಗಳು ಟ್ವೀಟ್-ನಲ್ಲಿ ಕಾಣುತ್ತಿವೆ.

ಹೌದು ಚುನಾವಣೆಯ ಮೊದಲು ಸದಾ ಮೊದಿಯರನ್ನು ಕೆಣಕುತ್ತಿದ್ದ ರಾಹುಲ್ ಗಾಂಧಿಯ ಸಾಕು ಸಾಯಿ ರಮ್ಯಾ ಮೋದಿಯನ್ನು ಕಾಳೆಯಲು ಪ್ರಯತ್ನಿಸಿ ಚಿ ಮಾರಿ ಹಾಕಿಸಿಕೊಳ್ಳುತ್ತಿದರು ಈಗ ಬಿಜೆಪಿ ವಿರುದ್ದ ಕಾಂಗ್ರೆಸ್ ಬಾರಿ ಅಂತರದಿಂದ ಸೋಲು ಕಂಡು ದೇಶದಿಂದ ಪಲಾಯನ ಮಾಡುವ ಸ್ಥಿತಿಗೆ ಬಂದಿದ್ದು, ಮುಖ್ಯ ನಾಯಕರೆ ತಮ್ಮ ಎಲ್ಲ ರಂದ್ರವನ್ನು ಮುಚಿಕೊಂಡು ನಿಂತಿದ್ದಾರೆ. ಆದರೆ ಕಾಂಗ್ರೆಸ್ ಸಾಕಿದ ವಿದ್ಯಾವಂತ ದಡ್ಡ ಬುದ್ದಿಯ ರಮ್ಯಾ ಮಾತ್ರ ಬಾಲಬಿಚ್ಚಿ ಬಿಜೆಪಿಯ ದೊಡ್ಡ ಹುದ್ದೆಯನ್ನು ಅಲಂಕರಿಸಿದ ವಿತ್ತ ಸಚಿವೆ ನಿರ್ಮಲಾ ಅವರಿಗೆ ಟೀಕೆ ಮಾಡುತ್ತಿದ್ದಾಳೆ ಎಂದು ಬಿಜೆಪಿ ಅಭಿಮಾನಿಗಳು ರಮ್ಯಾಗೆ ಚಿಮಾರಿ ಹಾಕುತ್ತಿದ್ದಾರೆ.

ರಮ್ಯಾ ಟ್ವೀಟ್-ನಲ್ಲಿ ಏನಿದೆ?

ಟ್ವೀಟ್‌ ಮೂಲಕ ಸಚಿವೆ ನಿರ್ಮಲಾ ಸೀತರಾಮನ್‌ಗೆ ಶುಭ ಹಾರೈಸಿರುವ ರಮ್ಯಾ ,ಮಾಜಿ ಪ್ರಧಾನಿ, ಇಂದಿರಾ ಗಾಂಧಿಯವರನ್ನು ನೆನಪಿಸಿಕೊಳ್ಳುತ್ತ, ದೇಶದ ಎರಡನೆಯ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ನಿಮಗೆ ಶುಭ ಕಾಮನೆಗಳು. ಈ ಹಿಂದೆ ಇಂದಿರಾ ಗಾಂಧಿ( 1970) ಅವರು ಈ ಖಾತೆಯನ್ನು ಸಂಭಾಳಿಸಿಕೊಂಡು ಮಹಿಳಾ ಸಮುದಾಯಕ್ಕೆ ಹೆಮ್ಮೆ ತಂದಿದ್ದರು. ಪ್ರಸ್ತುತ ಜಿಡಿಪಿ ಕುಸಿಯುತ್ತಿದ್ದು, ದೇಶದ ಆರ್ಥಿಕತೆ ಪುಟಿದೇಳಲು ನೀವು ಉತ್ತಮ ಕೆಲಸ ಮಾಡುತ್ತೀರಿ ಎಂದು ನನಗೆ ನಂಬಿಕೆ ಇದೆ. ನಿಮಗೆ ನನ್ನ ಬೆಂಬಲವಿದೆ, ಶುಭ ಕಾಮನೆಗಳು ಎಂದವರು ಟ್ವೀಟ್ ಮಾಡಿದ್ದಾರೆ. ಭಾರತದ ಜಿಡಿಪಿ(Gross Domestic Product) ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ.5.8 ಕುಸಿದಿದೆ ಎಂದು ತಿಳಿದುಬಂದಿದ್ದು, ಆದ್ದರಿಂದಲೇ ರಮ್ಯಾ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ನಿರ್ಮಲಾ ಸೀತಾರಾಮನ್ ಅವರ ಮುಂದೆ ಆರ್ಥಿಕತೆ ಬಲ ಪಡಿಸುವ ಬಹುದೊಡ್ಡ ಸವಾಲಿದ್ದು , ಈ ಹಿನ್ನೆಲೆಯಲ್ಲಿ ರಮ್ಯಾ ವ್ಯಂಗ್ಯವಾಡಿದ್ದಕ್ಕೆ, ನೆಟ್ಟಿಗರು ಟ್ವೀಟ್-ನಲ್ಲಿ ಚಳಿ ಬಿಡಿಸಿದ್ದು. ಇದರಲ್ಲಿಯೂ ಇಂದಿರಾ ಅವರನ್ನು ಎಳೆದು ತಂದಿರಾ? ಇಂದಿರಾಗೆ ಅಧಿಕಾರ ದಾಹವಿತ್ತು. ಹೀಗಾಗಿ ಪ್ರಧಾನಿಯಾಗಿದ್ದು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು. ಆದರೆ ನಿರ್ಮಲಾ ಮೊದಲ ಸ್ವತಂತ್ರ ಮಹಿಳಾ ಹಣಕಾಸು ಸಚಿವೆ ಎಂದು ಟ್ವಿಟ್ಟಿಗರೊಬ್ಬರು ರಮ್ಯಾ ಟ್ವೀಟ್‌ಗೆ ಟಾಂಗ್ ನೀಡಿದ್ದು ಮತ್ತೊಬರು. ಲೋಕಸಭೆಯಲ್ಲಿ ಮತವನ್ನೇ ಚಲಾಯಿಸದ ನೀವು ಸಲಹೆ ಕೊಡುವುದಕ್ಕೆ ಅರ್ಹರ ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು ಎಲ್ಲಾ ಮಹಿಳೆಯರು ಉತ್ತಮವಾದ ಕಾರ್ಯವನ್ನೇ ನಿರ್ವಹಿಸುತ್ತಿದ್ದಾರೆ . ರಮ್ಯಾ ಮೇಡಮ್ ತಾವೇನು ಮಾಡುತ್ತಿದ್ದೀರಿ? ಬೇರೆಯವರ ಕಾಲೆಳೆಯದನ್ನು ಬಿಟ್ಟು ತಮಗೆನಾದರೂ ಉತ್ತಮವಾದ ವಿಚಾರಗಳು ನಿಮ್ಮ ತಲೆಯಲ್ಲಿ ಇವೆಯೋ? – ರವಿ ಪಾಟೀಲ್ ಎನ್ನುವರು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಟ್ವೀಟ್ ಮಾಡಿ ನಾವು ಎಂದಿಗೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. ಆದರೆ ದುರಹಂಕಾರವನ್ನೇ ಆಸ್ತಿ ಎಂದುಕೊಂಡ ಕಾಂಗ್ರೆಸ್ಸಿಗೆ ಬುದ್ಧಿ ಬರುವುದು ಯಾವಾಗ ಎಂಬುದು ಗೊತ್ತಾಗುತ್ತಿಲ್ಲ. 543 ರಲ್ಲಿ 53 ಕ್ಷೇತ್ರಗಳಲ್ಲಿ ಗೆದ್ದು ವಿಪಕ್ಷದ ಸ್ಥಾನಮಾನವನ್ನೂ ಪಡೆಯಲಾಗದ ಕಾಂಗ್ರೆಸ್ಸಿಗೆ ನನ್ನ ಅನುಕಂಪವಿದೆ ಎಂದು ರಮ್ಯಾ ತಿರುಗೇಟು ನೀಡಿದ್ದಾರೆ. ಹೀಗೆ ರಾಜಕೀಯ ನಾಯಕರು ನೀಡಿದ ಹಣದಿಂದ ಊಟ ಮಾಡುವ ರಮ್ಯಾಗೆ ತಿಂದ ಕೂಳು ಅರಗಿಸಿಕೊಳ್ಳಲು ಈ ರೀತಿಯ ವ್ಯಾಯಾಮ ಮಾಡುತ್ತಾರೆ ಎಂದು ಹೇಳಿದ್ದಾರೆ.