ಇನ್ನು ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಮುನ್ನ ಯೋಚಿಸಿ!!!

0
40274

ನಿಮಗೆ ಗೊತ್ತೆ? ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಬಲಗಾಲನ್ನು ತಮ್ಮ ಎಡಗಾಲಿನ ಮೇಲೆ ಹಾಕಿ ಕೆಲಸಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಾ? ಆರೋಗ್ಯದ ದೃಷ್ಟಿಯಿಂದ ಆ ಪರಿಪಾಠವನ್ನು ಕೈಬಿಡುವುದು ಒಳಿತು.

Also read: ಗ್ರಾಹಕರೆ ಜಾಗೃತರಾಗಿರಿ, ಹಣ್ಣು ಕೋಳ್ಳುವ ಮುನ್ನ ಒಮ್ಮೆ ಯೋಚಿಸಿ!

ವ್ಯಕ್ತಿಯೊಬ್ಬರು ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿ ಅವರ ಆರೋಗ್ಯವನ್ನು ಕೆಡಿಸಬಹುದು. ಅದೇ ರೀತಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಲು ಯತ್ನಿಸುವುದು ಕೂಡ ಕೆಲವು ಸಲ ಸಮಸ್ಯೆಯನ್ನು ಸೃಷ್ಟಿಸಬಹುದು. ನಿಮಗೆ ಗೊತ್ತಾ? ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ದೇಹದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು! ಹೌದು. ಈ ಸಂಗತಿಯನ್ನು ತಜ್ಞರೇ ದೃಢಪಡಿಸಿದ್ದಾರೆ.

2010 ರಲ್ಲಿ, ವಿವಿಧ ಅಧ್ಯಯನಗಳ ಪ್ರಕಾರ, ಈ ರೀತಿಯ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವುದು ವ್ಯಕ್ತಿಯೊಬ್ಬನ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಚಯಾ-ಪಚಯ ಕ್ರಿಯೆಯ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆಯರು ಈ ರೀತಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಸರ್ವೇಸಾಮಾನ್ಯ. ಈ ರೀತಿಯದಾಗಿ ಕುಳಿತುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು.

Also read: Zomato ಡೆಲಿವರಿ ಮಾಡುವವನ ವೈರಲ್ ವೀಡಿಯೊ ಹಿಂದಿರೋ ಸತ್ಯ ತಿಳಿದರೆ, ನಿಮಗೂ ಕೂಡ ಆ ವ್ಯಕ್ತಿಯ ಮೇಲೆ ಅನುಕಂಪ ಮೂಡುತ್ತದೆ!!

1. ಈ ರೀತಿ ಕುಳಿತುಕೊಳ್ಳುವಾಗ ಸೊಂಟದ ಭಾಗದ ಎಲುಬುಗಳ ಸ್ನಾಯುಗಳು ಒಂದು ಬದಿಯಲ್ಲಿ ಸಂಕುಚಿತಗೊಂಡರೆ ಇನ್ನೊಂದು ಬದಿಯಲ್ಲಿ ವಿಕಸನಗೊಳ್ಳುತ್ತವೆ.
2.ಈ ಭಂಗಿಯಲ್ಲಿ ಕುಳಿತು ಸುದೀರ್ಘವಾಗಿ ಕಾರ್ಯನಿರ್ವಹಿಸಿದ ನಂತರ ಕುರ್ಚಿಯಿಂದ ಏಳುವಾಗ ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದರಿಂದಾಗಿ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
3.ಭುಜ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
4. ಈ ರೀತಿ ಕುಳಿತುಕೊಳ್ಳುವದರಿಂದ peroneal ನರ ಪಾರ್ಶ್ವವಾಯು ಅಥವಾ ಲಕ್ವ ಹೊಡೆಯುವ ಅವಕಾಶವಿರುತ್ತದೆ.
5. ನಿಮ್ಮ ದೇಹದ ರಕ್ತದ ಒತ್ತಡವು ಏರುತ್ತದೆ. ಇದರಿಂದಾಗಿ ನಿಮ್ಮ ಹೃದಯ ಔಟ್ ಪಂಪ್ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮತ್ತಷ್ಟು ರಕ್ತಪರಿಚಲನೆಯ ತೊಂದರೆಗಳು ಉಂಟಾಗಬಹುದು.
6. ಈ ರೀತಿಯಾದ ಭಂಗಿಇಂದಾಗಿ ಕಾಲುಗಳ ಸ್ನಾಯುಗಳ ಶ್ರೋಣಿಯ ಅಸಮತೋಲನಕ್ಕೆ ಕಾರಣವಾಗಬಹುದು. ದೀರ್ಘಕಾಲದ ಕಾಲು ಅಡ್ಡವಾಗಿ ಹಾಕುವುದರಿಂದ ಹೊರ ತೊಡೆಯ ಸ್ನಾಯು ಮುಂದೆ ಒಳ ತೊಡೆಯ ಸ್ನಾಯುವನ್ನು ಕಡಿಮೆ ಮಾಡುತ್ತದೆ ಮತ್ತು, ಮತ್ತು ಆ ಸ್ಥಳದ ರಕ್ತ ಪರಿಚಲನದಲ್ಲಿ ವ್ಯತಾಸವಾಗುತ್ತದೆ ಇದರಿಂದಾಗಿ ನಿಮ್ಮ ಕೀಲುಗಳ ಸಮಸ್ಯೆ ಎದುರಿಸಬೇಕಾಗುತ್ತದೆ.

Also read: 30 ರ ಹರೆಯಕ್ಕೆ ಕಾಲಿಡುವ ಮುನ್ನ ಮುಂದಿನ ಜೀವನ ಭದ್ರತ್ರೆಗಾಗಿ ಪ್ರತಿಯೊಬ್ಬರು ಯೋಚಿಸಲೇಬೇಕಾದ ಉಳಿತಾಯದ ಯೋಜನೆಗಳು..

ದಿನವಿಡೀ ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡುವುದು ತುಂಬಾ ಆರಾಮದಾಯಕ ಎಂದು ಆಲೋಚಿಸುವವರೆಲ್ಲಾ ಇನ್ನು ಮುಂದೆ ಕುಳಿತುಕೊಳ್ಳುವ ಮುನ್ನ ಯೋಚಿಸಬೇಕು. ನಮ್ಮ ದೇಹದ ಆರೋಗ್ಯ ನಾವು ಕುಳಿತುಕೊಳ್ಳುವ ಭಂಗಿಯಲ್ಲಿದೆ!