ದೇವರ ಪ್ರಸಾದ ಸೇವಿಸಿ 6 ಜನರು ಸಾವು; 80 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ..

0
433

ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿ 6 ಜನ ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರು ಗೋಪಿಯಮ್ಮ(35), ಶಾಂತಾ (20). ಪಾಪಣ್ಣ (35), ಅನಿಲ್​ (12), ಅನಿತಾ (14) ರಾಜು (25) ಎಂದು ತಿಳಿದು ಬಂದಿದು 80 ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ.

ಏನಿದು ಸುದ್ದಿ?

ಚಾಮರಾಜ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಸುಲ್ವಾಡಿಯಲ್ಲಿ “ಕಿಚ್ಚುಕುತ್ತಿ ಮಾರಮ್ಮ” ದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ವೆಜಿಟೇಬಲ್ ರೈಸ್​ಬಾತ್​ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಮೃತ ಪಟ್ಟಿದ್ದಾರೆ. ಅದರಲ್ಲಿ 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ. ಪ್ರಸಾದ ಸ್ವೀಕರಿಸಿ 80ಕ್ಕೂ ಹೆಚ್ಚು ಮಂದಿ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದ್ದು ಇನ್ನು ಅಸ್ವಸ್ಥಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.

ದೇವರ ಪ್ರಸಾದದಲ್ಲಿ ಏನಿತ್ತು?

ಸಾಮಾನ್ಯವಾಗಿ ತಯಾರಿಸುವ ಆಹಾರದ ಹಾಗೆ ದೇವರ ಪ್ರಸಾದವೆಂದು ಟೊಮ್ಯಾಟೊ ಬಾತ್​ ತಯಾರಿಸಲಾಗಿತ್ತು. ಅಲ್ಲಿ ನೆರೆದ ಭಕ್ತರೆಲ್ಲರೂ ಪಂಚಾಮೃತ ಸೇವಿಸಿ ಟೊಮ್ಯಾಟೊ ಬಾತ್​ ಸೇವಿಸಿದರು. ಆ ಪಂಚಾಮೃತ ಪ್ರಸಾದದಿಂದ ಫೆವಿಕಾಲ್​ ವಾಸನೆ ಬರುತ್ತಿತ್ತು. ಅದನ್ನು ಎಲ್ಲರು ತಿಂದರು ನಂತರ ಒಂದು ಗಂಟೆಯಲ್ಲಿ ಎಲ್ಲರು ರಕ್ತದ ವಾಂತಿ ಮಾಡಿಕೊಂಡು ಎಲ್ಲರೂ ಅಸ್ವಸ್ಥರಾಗಿದ್ದಾರೆ. ಕೆಲವರು ಹೊಟ್ಟೆನೋವು, ವಾಂತಿಯಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆ ಏರುತ್ತಿದ್ದು ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಚಿಕ್ಕ ಮಕ್ಕಳು ಕೂಡ ಇದ್ದು ಗ್ರಾಮದ ತುಬ್ಬೆಲ್ಲ ಆತಂಕ ಮೂಡಿದೆ ಎಂದು ಪ್ರತ್ಯಕ್ಷದರ್ಶಿ ಮುರುಗೇಶ್​ ಮಾಹಿತಿ ನೀಡಿದ್ದಾರೆ.

ಪ್ರಸಾದ ತಿಂದ ಪಕ್ಷಿ ಪ್ರಾಣಿಗಳು ಸಾವು:

ಮಾರಮ್ಮ ಪ್ರಸಾದ ತಿಂದ ಭಕ್ತರು ಮಾತ್ರವಲ್ಲದೆ, ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆ, ನಾಯಿಗಳು ಕೂಡ ಮೃತಪಟ್ಟಿವೆ ಸುಮಾರು 60 ಕಾಗೆಗಳು ಮೃತಪಟ್ಟಿದ್ದು 10 ಕ್ಕೊ ಹೆಚ್ಚು ಸ್ವಾನಗಳು ಸತ್ತಿದು ಹಲವು ಪಕ್ಷಿಗಳೂ ಪ್ರಾಣಿಗಳು ಅಸ್ವಸ್ಥಗೊಂಡಿವೆ.

ಪ್ರಸಾದದಲ್ಲಿ ವಿಷ ಸೇರಿದ ಶಂಕೆ:

ಗ್ರಾಮದಲ್ಲಿ ಎರಡು ಬಣಗಳ ನಡುವೆ ಜಗಳದಿಂದ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆಸ್ಪತ್ರೆಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರೋ ಪ್ರಸಾದ ತಯಾರಿಕಾ ಪಾತ್ರೆಗೆ ವಿಷ ಮಿಶ್ರಣ ಮಾಡಿದ್ದಾರೆ. ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಜತೆಗೆ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಯತ್ನಿಸಲಾಗುತ್ತಿದೆ. ಎಂದು ಚಾಮರಾಜನಗರ ಡಿಎಚ್​ಒ ಪ್ರಸಾದ್ ತಿಳಿಸಿದ್ದಾರೆ.