ಮಗುವಿನ ಅರೋಗ್ಯ ಸರಿ ಇಲ್ಲದಿದ್ದರೂ ಶಾಲೆಗೇ ಬಲವಂತವಾಗಿ ಕಳಿಸಬೇಡಿ.. ಇದನ್ನು ಓದಿ ನಾವ್ ಹೇಳಿದ್ದೆ ಸರಿ ನಿಮಗೇ ಅನ್ನಿಸುತ್ತೆ..!!

0
934

ಮಕ್ಕಳನ್ನು ಎಷ್ಟು ಜೋಪಾನ ಮಾಡಿದರು ಸಾಲುವುದಿಲ್ಲ.. ಇಲ್ಲಿ ನೋಡಿ ಶಾಲೆಯಲ್ಲಿ ಆಟವಾಡುತ್ತಿದ್ದ ಮಗು ಏನಾಯಿತು ಎಂದು..?

ಒಂಭತ್ತು ತಿಂಗಳು ಸಾವಿರಾರು ಕನಸನ್ನು ಕಟ್ಟಿಕ್ಕೊಂಡು ಮಗುವಿಗೆ ಜನ್ಮ ನೀಡುತ್ತಾರೆ.. ಆದರೆ ಆ ಮಗುವಿನ ಆಟ ಪಾಟ ಆರೋಗ್ಯದ ಬಗ್ಗೆ ಹೆತ್ತವರು ಗಮನ ವಹಿಸುವುದು ಅತಿ ಮುಖ್ಯ..

ಮುಂಬೈನ ಶಾಲೆಯೊಂದರಲ್ಲಿ ಮಗು ಆಟವಾಡುತಿದ್ದಾಗ ಬಿದ್ದು ಮೃತ ಪಟ್ಟ ಹೃದಯ ವಿದ್ರಾವಕ ಘಟನೆಯೊಂದು ಗುರುವಾರ ನಡೆದಿದೆ.. ಹೌದು, ಮುಂಬೈನ ಚಾಂದಿವಲಿ ಎಂಬ ಪ್ರದೇಶದಲ್ಲಿ ಇರುವ ಪವಾರ್ ಪಬ್ಲಿಕ್ ಸ್ಕೂಲ್ ನಲ್ಲಿ 1ನೇ ತರಗತಿಯಲ್ಲಿ ಓದುತಿದ್ದ ಸ್ವರಾಂಗ್ ದಳ್ವಿ ಎಂಬ ಮಗು ಆಟವಾಡುವಾಗ ಕುಸಿದು ಬಿದ್ದು ಸಾವನಪ್ಪಿದೆ..

ಇದೇ ಗುರುವಾರ ಬೆಳಗ್ಗೆ 9.40 ರಿಂದ 10 ಘಂಟೆಯವರೆಗೆ ಇದ್ದ ಬ್ರೇಕ್ ಅವಧಿಯಲ್ಲಿ ಸ್ವರಾಂಗ್ ಹಾಗು ಸ್ನೇಹಿತರು ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದಾನೆ.. ತಕ್ಷಣ ಅವನಿಗೆ ಪ್ರಥಮ ಚಿಕಿತ್ಸೆ ಮಡಿದರಾದರು ಮಗು ಬದುಕುಳಿಯಲು ಸಾಧ್ಯವಾಗಲಿಲ್ಲ.. ರಕ್ತ ದಲ್ಲಿ ಗ್ಲೂಕೋಸ್ ಕಡಿಮೆಯಾಗಿ ಕುಸಿದುಬಿದ್ದೆರಬಹುದೆಂದು ಯೋಚಿಸಿ ಅವನಿಗೆ ಸಕ್ಕರೆಯನ್ನೂ ಕೂಡ ತಿನ್ನಿಸಿದ್ದಾರೆ.. ಆದರೂ ಪ್ರಯೋಜನವಾಗಲಿಲ್ಲ.. ಮಗು ಶಾಲೆಗೆ ಬಂದಾಗಿನಿಂದ ಸಪ್ಪಗೆ ಇತ್ತೆಂದು ಸ್ನೇಹಿತರು ತಿಳಿಸಿದ್ದಾರೆ..

ಶಾಲಾ ಆಡಳಿತ ಮಂಡಳಿಯವರು ಸಿಸಿಟಿವಿ ದೃಶ್ಯಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.. ಅದನ್ನು ನೋಡಿದ ಪೋಲೀಸರು.. ಮಗುವಿನ ಮೇಲೆ ಯಾವುದೇ ಗಾಯಗಳಿಲ್ಲ. ವೈದ್ಯರು ಆತನನ್ನು ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ’ ಎಂದು ಸಹಾಯಕ ಪೊಲೀಸ್ ಕಮಿಷನರ್‌ ಸಂಜಯ್‌ ಪಾಟೀಲ್‌ ತಿಳಿಸಿದರು.

ಏನೇ ಆದರು ಮಗುವಿನ ಆರೋಗ್ಯದಲ್ಲಿ ಏರು ಪೇರು ಆದರೂ ಶಾಲೆಗೆ ಹೋಗು ಎಂದು ಹಿಂಸೆ ಮಾಡುವ ತಂದೆ ತಾಯಂದಿರು ಇದರಿಂದ ಪಾಠ ಕಲಿಯಬೇಕಿದೆ..