ನಿಮ್ಮ ಪ್ರತಿಭೆಗಳನ್ನು ಹೊರ ತರುವಲ್ಲಿ ಸಹಾಯಕವಾಗಲಿದೆ “ಸ್ಕಿಲ್ ಆನ್ ವ್ಹೀಲ್” ಯೋಜನೆ ಶೇರ್ ಮಾಡಿ ಎಲ್ಲಾ ಪ್ರತಿಭೆಗಳಿಗೂ ತಿಳಿಯಲಿ

0
539

Kannada News | Karnataka News

ಯುವ ಸಮೂಹದಲ್ಲಿ ಉದ್ಯಮಶೀಲತೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಭವ್ಯ ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ಕಾರ್ಯಕ್ರಮವೇ ಕೌಶಲ್ಯಾಭಿವೃದ್ಧಿಯ “ಸ್ಕಿಲ್ ಆನ್ ವ್ಹೀಲ್”

ಯುವ ಸಮೂಹದಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಕೌಶಲ್ಯಗಳಿಗೆ ಪೂರಕ ತರಭೇತಿ ನೀಡುವ ಚಿಂತನೆಗಳಡಿ ಪ್ರಧಾನಿ ಮೋದಿಯವರು ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಸಚಿವಾಲಯದ ಮೂಲಕ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಸ್ಟ್ಯಾಂಡ್ ಅಪ್ ಯೋಜನೆಯಡಿ 10 ಲಕ್ಷದಿಂದ 1 ಕೋಟಿ ನೆರವನ್ನು.. ಸ್ಟಾರ್ಟ್ ಅಪ್ ಯೋಜನೆಯಡಿ 50 ಕೋಟಿ ರೂಪಾಯಿಗಳಷ್ಟು ನೆರವನ್ನು ಒದಗಿಸಲಾಗುತ್ತಿದೆ..

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಭವಿಷ್ಯದ ಚಿಂತನೆಗಳನ್ನು ವಿಕಾಸಗೊಳಿಸುವುದಾಗಿದೆ.. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬಹುದಾಗಿದೆ..

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ IAS IPS ನಂತೆಯೇ ಭಾರತೀಯ ಸ್ಕಿಲ್ ಡೆವಲಪ್ಮೆಂಟ್ ಸರ್ವೀಸ್ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದು ಭಾರತೀಯ ವಿವಿಧ ಆಡಳಿತ ಸೇವೆಗಳಂತೆಯೇ ಭಾರತೀಯ ಸ್ಕಿಲ್ ಡೆವಲಪ್ಮೆಂಟ್ ಸರ್ವೀಸ್ ಗೆ ಅವಕಾಶ ನೀಡಲಾಗಿದೆ..

ಈಗಾಗಲೇ ರಾಜ್ಯದ ಮೈಸೂರು ಮಂಡ್ಯ ದ.ಕನ್ನಡ ಕೊಡಗು ಬಳ್ಳಾರಿ ಬೀದರ್ ಯಾದಗಿರಿ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರಗಳಿದ್ದು.. ಇಲ್ಲಿ ಅನೇಕ ರೀತಿಯ ಕೌಶಲ್ಯ ತರಭೇತಿಗಳನ್ನು ನೀಡಲಾಗುವುದು.. ಪ್ರತಿಭೆಗಳು ಇದರ ಮೂಲಕ ಸದುಪಯೋಗ ಪಡೆದುಕೊಳ್ಳಬಹುದಾಗಿದೆ..

ಶೇರ್ ಮಾಡಿ ಎಲ್ಲಾ ಪ್ರತಿಭೆಗಳಿಗೂ ಉಪಯೋಗವಾಗಲಿ..

Also Read: ಈ ಬ್ಯಾಂಕುಗಳ ಚೆಕ್ ಬುಕ್ಸ್ ಡಿ.31 ರಂದು ಅಮಾನ್ಯಗೊಳ್ಳಲಿವೆ, ಈ ಬ್ಯಾಂಕುಗಳಲ್ಲಿ ನಿಮ್ಮ ಖಾತೆಯಿದ್ದರೆ ತಕ್ಷಣ ಬ್ಯಾಂಕ್-ಗೆ ಭೇಟಿ ನೀಡಿ..