ಯಂಗ್ ಆಗಿ ಕಾಣಲು ದುಬಾರಿ ಚಿಕಿತ್ಸೆ/ಕ್ರೀಮ್ಗಳ ಮೊರೆ ಹೋಗೋ ಬದ್ಲು ಈ ಟಿಪ್ಸ್ ನ ಫಾಲೋ ಮಾಡಿ..!!

0
2950

ಎಷ್ಟು ವಯಸ್ಸಾದರೂ ತ್ವಚೆ ಸುಕ್ಕುರಹಿತವಾಗಿರಬೇಕೆಂಬುದು ಮಹಿಳೆಯರ ಮಹದಾಸೆ. ವಯಸ್ಸು ಮರೆಮಾಚಲು ಎಷ್ಟೆಲ್ಲ ಪ್ರಯತ್ನಿಸಿದರೂ ತ್ವಚೆ ಅದಕ್ಕೆ ಮಣಿಯದೆ ವಯಸ್ಸಿನ ದ್ಯೋತಕವಾದ ಹಲವಾರು ಚಿಹ್ನೆಗಳು ಕಾಣತೊಡಗುತ್ತವೆ. ಸುಕ್ಕುಗಳನ್ನು ತಡೆದು, ವಯಸ್ಸಾಗುವ ಪ್ರಕ್ರಿಯೆಯನ್ನು ಮುಂದೂಡಲು ಹಲವಾರು ದುಬಾರಿ ಚಿಕಿತ್ಸೆಗಳು, ಆಂಟಿ ಏಜಿಂಗ್ ಕ್ರೀಮ್‍ಗಳಿವೆ. ಕೆಲ ಉತ್ಪನ್ನಗಳಂತೂ ಅಪಾಯಕಾರಿ ಪಾಶ್ರ್ವಪರಿಣಾಮಗಳಿಂದ ಕೂಡಿವೆ. ವಯಸ್ಸಾಗುವ ಪ್ರಕ್ರಿಯೆ ಮುಂದೂಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ಅಗತ್ಯ. ನೈಸರ್ಗಿಕ ಪರಿಹಾರಗಳು ಎಲ್ಲಕ್ಕಿಂತ ಉತ್ತಮ.

ನೀರಿನ ಚಿಕಿತ್ಸೆ

ಸುಕ್ಕುಗಳ ನಿವಾರಣೆಗೆ ಇದು ಸೂಕ್ತ ಹಾಗೂ ಖರ್ಚಿಲ್ಲದ ಚಿಕಿತ್ಸೆ. ಹೇರಳ ನೀರು ಸೇವನೆಯಿಂದ ಸುಕ್ಕು ದೂರವಾಗುತ್ತದೆ. ಬರೀ ನೀರು ಸೇರದಿದ್ದರೆ ನಿಂಬೆ ರಸ ಬೆರೆಸಿ ಕುಡಿಯಬಹುದು. ನೀರು ತ್ವಚೆಯ ತೇವಾಂಶ, ದೃಢತೆ, ಸಹಜತೆ ಕಾಪಾಡುತ್ತದೆ. ಇದು ನೆರಿಗೆಗಳ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ತ್ವಚೆಯ ಆದ್ರ್ರತೆ ಕಾಪಾಡಲು ಕೋಕಾ ಬೆಣ್ಣೆ ಅತ್ಯಂತ ಸೂಕ್ತ. ಇದು ತ್ವಚೆಯ ಆಳಕ್ಕಿಳಿದು ಎಲಾಸ್ಟಿನ್ ಹಾಗೂ ಕೊಲಾಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸ್ಟ್ರೆಚ್ ಮಾರ್ಕ್ ಹಾಗೂ ಕಪ್ಪು ಕಲೆಗಳನ್ನು ದೂರ ಮಾಡುತ್ತದೆ. ಬೆಳಗಿನ ವೇಳೆ ಕೋಕಾ ಬೆಣ್ಣೆ ಉಪಯೋಗಿಸುವುದರಿಂದ ತ್ವಚೆ ಕಳಾಪೂರಿತವಾಗಿ ನೆರಿಗೆಗಳು ದೂರವಾಗುತ್ತವೆ.

ತೆಂಗು-ಆಲಿವ್ ಎಣ್ಣೆ

ತೆಂಗಿನೆಣ್ಣೆ ನಿಸ್ಸಂಶಯವಾಗಿ ಸುಕ್ಕನ್ನು ನಿವಾರಿಸಿ ತ್ವಚೆಗೆ ಕೋಮಲತೆ ನೀಡುತ್ತದೆ. ತೆಂಗಿನೆಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡುವುದರಿಂದ ತ್ವಚೆಗೆ ಈ ಲಾಭ ಖಂಡಿತ.
ಸಾಕಷ್ಟು ಫ್ಯಾಟಿ ಆಸಿಡ್ ಇರುವ ಆಲಿವ್ ಆಯಿಲ್ ಆರೋಗ್ಯಕರ. ಪ್ರತಿದಿನ ಆಲಿವ್ ಆಯಿಲ್‍ನಿಂದ ಮಸಾಜ್ ಮಾಡಿದರೂ ತ್ವಚೆಗೆ ಮೃದುತ್ವ, ನುಣುಪು, ಕಾಂತಿ ದೊರೆಯುತ್ತದೆ.

ಜೇನು

ಹದವಾದ ಬಿಸಿನೀರಿನಿಂದ ಮುಖ ತೊಳೆಯುವುದರಿಂದ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತವೆ. ನಂತರ ಜೇನು ಲೇಪಿಸಿ ನಿಧಾನವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ಬೆಚ್ಚಗಿನ ನೀರು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಸುಕ್ಕುಗಳು ಕಡಿಮೆಯಾಗುತ್ತದೆ.

ಬಾಳೆ

ಆ್ಯಂಟಿ ಆ್ಯಕ್ಸಿಡಾಂಟ್, ಖನಿಜ, ವಿಟಮಿನ್‍ಗಳ ಆಗರವಾದ ಬಾಳೆ ಸುಕ್ಕು ಬರುವುದನ್ನು ತಡೆಯುತ್ತದೆ. ಬಾಳೆಹಣ್ಣಿನ ಪೇಸ್ಟನ್ನು ತ್ವಚೆಗೆ ಲೇಪಿಸುವುದರಿಂದ ತ್ವಚೆ ಬಿಗಿಯಾಗಿ ನೆರಿಗೆಗಳು ದೂರವಾಗುತ್ತವೆ.

ನಿಂಬೆ-ಹಾಲಿನ ಮ್ಯಾಜಿಕ್

ನಾಲ್ಕು ಹನಿ ನಿಂಬೆ ರಸಕ್ಕೆ ಒಂದಿಷ್ಟು ಹಾಲು ಬೆರೆಸಿ ಮುಖಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸುಕ್ಕುಗಳ ನಿರ್ಮೂಲನೆಗೆ ಪರಿಣಾಮಕಾರಿ ಚಿಕಿತ್ಸೆ.

ತಾರುಣ್ಯಭರಿತ ತ್ವಚೆಗೆ ಸೌಂದರ್ಯವರ್ಧಕಗಳಿಗಿಂದ ಮಿಗಿಲಾಗಿ ಅಹಾರಗಳ ಅಭ್ಯಾಸವೇ ಮುಖ್ಯ. ತಾಜಾ ಹಣ್ಣು-ತರಕಾರಿ, ಸಾಕಷ್ಟು ನೀರು ಸೇವನೆಯಿಂದ ತ್ವಚೆಯ ತಾರುಣ್ಯ ದೀರ್ಘಕಾಲ ಉಳಿಯುತ್ತದೆ. ಇದಕ್ಕಾಗಿ ಹೆಚ್ಚು ವ್ಯಯಿಸಬೇಕಿಲ್ಲ. ಒಂದಿಷ್ಟು ಸಮಯ ಮೀಸಲಿಡಬೇಕು ಅಷ್ಟೆ.