ಮೃತ ವ್ಯಕ್ತಿಯ ಕಣ್ಣು ಮತ್ತು ಹೃದಯಗಳು ಮಾತ್ರವಷ್ಟೇ ಅಲ್ಲ, ಚರ್ಮದಾನದಿಂದ ಅನೇಕರಿಗೆ ಜೀವದಾನವಾಗುತ್ತದೆ..

0
996

Kannada News | kannada Useful Tips

ಅಂಗಾಂಗ ದಾನಗಳ ಕುರಿತು ಜನತೆಯಲ್ಲಿ ಇತ್ತೀಚೆಗೆ ಜಾಗೃತಿ ಹೆಚ್ಚಾಗುತ್ತಿರುವ ಪರಿಣಾಮ ರಕ್ತ, ನೇತ್ರ, ಕಿಡ್ನಿ, ಲಿವರ್, ಹೃದಯ ಸೇರಿದಂತೆ ನಾನಾ ಅಂಗಾಂಗಳ ದಾನದಿಂದಾಗಿ ಸಾಕಷ್ಟು ಜೀವಗಳು ಉಳಿಯುತ್ತಿವೆ. ಆದರೆ ಅಂಗಾಂಗಳ ಜತೆಗೆ ಅವರ ಜೀವ ಉಳಿಸಲು ಚರ್ಮದ ಅವಶ್ಯಕತೆಯೂ ಸಹ ಇಂದು ಹೆಚ್ಚಾಗುತ್ತಿದೆ. ರಸ್ತೆ ಅಪಘಾತ, ಆಕಸ್ಮಿಕ ಬೆಂಕಿ ಅವಘಡಗಳ ಸಂದರ್ಭದಲ್ಲಿ ಚರ್ಮದ ಕೊರತೆಯಿಂದ ಸಾಕಷ್ಟು ಜನ ಮರಣ ಹೊಂದುತ್ತಿದ್ದಾರೆ. ದೇಶದಲ್ಲಿ ಪ್ರತಿವರ್ಷ ಚರ್ಮದ ಅವಶ್ಯಕತೆ 20 ಲಕ್ಷ ಜನರಿಗಿದ್ದು, ಅದರಲ್ಲಿ 1.4 ಲಕ್ಷ ಜನ ಮರಣ ಹೊಂದುತ್ತಾರೆ.

Related image

ಈ ಬೃಹತ ಮಟ್ಟದ ಸಾವಿನ ಸಂಖ್ಯೆಯನ್ನು ತಡಬೇಕಾದರೆ ಹೆಚ್ಚಿನ ಜನರು ಚರ್ಮದಾನ ಮಾಡಲು ಮುಂದೆ ಬರಬೇಕು. ನಮ್ಮ ದೇಶದಲ್ಲಿ ಮುಂಬೈನ ರಾಷ್ಟ್ರೀಯ ಸುಟ್ಟ ಗಾಯಗಳ ಕೇಂದ್ರ ಹಾಗೂ ಚನ್ನೈನಲ್ಲಿ ಮಾತ್ರ ಚವರ್iದಾನ ಬ್ಯಾಂಕ್ ಹಾಗೂ ಚಿಕಿತ್ಸಾ ಕೇಂದ್ರ ಇದೆ. ಅದೇ ಮಾದರಿಯಲ್ಲಿಯೇ ನಮ್ಮ ರಾಜ್ಯದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ `ಸ್ಕಿನ್ ಬ್ಯಾಂಕ್’ ಪ್ರಾರಂಭ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಮಾಸ್ಟರ್ ಪ್ಲಾನ್ ಕೊಠಡಿಯ `ಸ್ಕಿನ್ ಬ್ಯಾಂಕ್’ಅನ್ನು 60 ಲಕ್ಷ ರೂ. ವೆಚ್ಚದಲ್ಲಿ ಮುಂಬೈನ ರಾಷ್ಟ್ರೀಯ ಸುಟ್ಟ ಗಾಯಗಳ ಕೇಂದ್ರದ ಮಾದರಿಯಲ್ಲೇ ಸ್ಥಾಪನೆ ಮಾಡಲಾಗಿದೆ. `ಆಶೀರ್ವಾದ್ ಪೈಪ್ಸ್’ ಮತ್ತು `ರೋಟರಿ ಬೆಂಗಳೂರು ಮಿಡ್‍ಟೌನ್’ ಸಂಸ್ಥೆಗಳು ಬ್ಯಾಂಕ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರಂಭವಾಗಿರುವ `ಚರ್ಮ ಬ್ಯಾಂಕ್’ ದೇಶದಲ್ಲೇ 12ನೇ ಅತಿ ದೊಡ್ಡ ಕೇಂದ್ರವಾಗಿದೆ.

Related image

ದೇಹ ವಿರೂಪವಾಗದು:
ಸುಟ್ಟ ಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತೊಂದು ಚರ್ಮದ ಅವಶ್ಯಕತೆ ಇರುತ್ತದೆ. ಸತ್ತ ನಂತರ ಮಣ್ಣಿಗೆ ಹೋಗುವ ಚರ್ಮವನ್ನು ಇತರೆ ಅಂಗಾಂಗಳಂತೆ ದಾನ ಮಾಡಿದರೆ, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂಬುದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಸಲಹೆ. ದಾನವಾಗಿ ಬಂದ ಚರ್ಮವನ್ನು ಶೇ. 50ರಷ್ಟು ಗಾಸಿಗೊಂಡ ಚರ್ಮಕ್ಕೆ ಬಳಕೆ ಮಾಡಲಾಗುತ್ತದೆ. ತೊಡೆ ಹಾಗೂ ಹಿಂಭಾಗದಿಂದ ಮಾತ್ರ ತೆಳುವಾದ ಪದರ ಚರ್ಮ ತೆಗೆಯುವುದರಿಂದ ಚರ್ಮ ನೀಡವ ವ್ಯಕ್ತಿಯ ದೇಹ ವಿರೂಪಗೊಳ್ಳುವುದಿಲ್ಲ ಹಾಗೂ ರಕ್ತ ಸ್ರಾವ ಆಗುವುದಿಲ್ಲ. ಆದ್ದರಿಂದ ಮೃತ ವ್ಯಕ್ತಿಯ ಸಂಬಂಧಿಕರು ಇತರ ಅಂಗಗಳನ್ನು ದಾಯ ಮಾಡುವಂತೆಯೇ ಚರ್ಮವನ್ನೂ ದಾನ ಮಾಡಲು ಮುಂದೆ ಬರಬೇಕು. ಇದರಿಂದ ಎಷ್ಟೋ ವ್ಯಕ್ತಿಗಳ ವಿರೂಪ ಆಕಾರದಿಂದ ಪಾರು ಮಾಡಬಹುದು.

ಸುಟ್ಟ ಗಾಯವಾದವರಲ್ಲಿ ಎಷ್ಟೋ ಮಂದಿ ಸೂಕ್ತ ಚರ್ಮ ಸಿಗದೇ ಸಾಯುತ್ತಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಸುಟ್ಟ ಗಾಯಗಳ ಕೇಂದ್ರಕ್ಕೆ ಪ್ರತಿ ತಿಂಗಳು 160ರಿಂದ 180 ಮಂದಿ ದಾಖಲಾಗುತ್ತಾರೆ. ಅವರಲ್ಲಿ ಬದಲಿ ಚರ್ಮ ಸಿಗದೆ ಮೃತ ಪಡುವವರೇ ಹೆಚ್ಚು ಮಂದಿ. ಚರ್ಮವನ್ನು ದಾನ ಮಾಡುವುದರಿಂದ ವೇಗವಾಗಿ ಚಿಕಿತ್ಸೆ ಮಾಡಬಹುದು. ರೋಗ ನಿರೋಧಕ ಶಕ್ತಿ ಸಧಾರಣೆ ಮತ್ತು ಸೋಂಕು ನಿವಾರಣೆಯಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಮತ್ತೊಂದು ಚರ್ಮದ ಜೋಡಣೆ(ಸರ್ಜರಿ) ಮುಗಿದು ಹೋಗುತ್ತದೆ. ಇದರಿಂದ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುವುದು.

ಚರ್ಮದಾನಕ್ಕೆ ಯಾರು ಯೋಗ್ಯರು:
18ವರ್ಷ ಮೇಲ್ಪಟ್ಟವರು ಚರ್ಮದಾನಕ್ಕೆ ಯೋಗ್ಯರು, ಕ್ಯಾನ್ಸರ್, ಎಚ್.ಐ.ವಿ. ಹೆಪಟೈಟಿಸ್ ರೋಗ ಹಾಗೂ ಯಾವುದೇ ಚರ್ಮ ರೋಗವಿಲ್ಲದವರು ಚರ್ಮದಾನ ಮಾಡಬಹುದು.

ಚರ್ಮದಾನ ಮಾಡುವ ಬಗೆ:
ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗೆ ಚರ್ಮದಾನ ಮಾಡಬೇಕು. ಮಾಹಿತಿ ತಿಳಿದ ಎರಡು ಗಂಟೆಗಳಲ್ಲಿ ಚರ್ಮ ಪಡೆಯಲು ತಂಡ ಸ್ಥಳ ತಲುಪುತ್ತದೆ. ನಲವತ್ತೈದು ನಿಮಿಷದಲ್ಲಿ ಚರ್ಮ ತೆಗೆಯುವ ಕೆಲಸ ಮುಕ್ತಾಯವಾಗುತ್ತದೆ. ಹೀಗೆ ತೆಗೆದ ಚರ್ಮವನ್ನು ರಕ್ತ ನಿಧಿ ಮಾದರಿಯಲ್ಲೇ `ಕೋಲ್ಡ್ ಸ್ಟೋರೇಜ್’ನಲ್ಲಿ ಸಂರಕ್ಷಿಸಲಾಗುತ್ತದೆ. ಭಾರತದ ಹವಾಮಾನದಲ್ಲಿ ಚರ್ಮವನ್ನು ಐದು ವರ್ಷಗಳ ಕಾಲ ಸಂರಕ್ಷಿಸಿಡಬಹುದು.

Also Read: ಹಿಂದೂ ಶಾಸ್ತ್ರಗಳಲ್ಲಿ ಮಂಗಳ ಸೂತ್ರಕ್ಕೆ ಎಂತಹ ಮಹತ್ವವಾದ ಸ್ಥಾನ ಇದೆ ಅಂತ ತಿಳ್ಕೊಳ್ಳಿ, ನಮ್ಮ ಶಾಸ್ತ್ರಗಳ ಬಗ್ಗೆ ಹೆಮ್ಮೆ ಮೂಡುತ್ತೆ..