ಬೆಳಗಿನ ತಿಂಡಿ ಮಿಸ್ ಮಾಡಿದರೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು!!!

0
2799

ಬೆಳಿಗ್ಗೆ ಗಡಿಬಿಡಿಯಲ್ಲಿ ತಿಂಡಿ ತಿನ್ನದೇ ಆಫೀಸಿಗೆ ಓಡುವವರೇ ಎಚ್ಚರ! ಬೆಳಿಗ್ಗೆ ತಿಂಡಿ ತಿನ್ನೋದನ್ನು ಮಿಸ್ ಮಾಡಿಕೊಂಡರೆ ಹೃದಯಾಘಾತವಾಗುವ ಸಂಭವ ಹೆಚ್ಚು. ತಡರಾತ್ರಿ ಊಟವಾದ ಮೇಲೆ ಕೂಡಲೇ ಮಲಗಿದರೂ ಕೂಡ ಹೃದಯಾಘಾತವಾಗುವ ಸಂಭವ ಹೆಚ್ಚು ಎಂಬುದು ಅಮೆರಿಕದ ವೈದ್ಯರು 16 ವರ್ಷಗಳ ಕಾಲ 30,000 ಪುರುಷರ ಮೇಲೆ ಇತ್ತೀಚೆಗೆ ನಡೆಸಿದ ಸಂಶೋಧನೆ ತಿಳಿಸಿದೆ. ಬೆಳಗಿನ ತಿಂಡಿ ತಿನ್ನದೇ ಇರುವುದರಿಂದ ಅಧಿಕ ರಕ್ತದೊತ್ತಡ, ಮಧುಮೇಹ ಹೆಚ್ಚಾಗುತ್ತದೆ.

Image result for no breakfast
Image Source: SRxA’s Word on Health

ಇದರ ಜೊತೆಗೆ ರೋಗಗಳ ಸರಮಾಲೆಯೇ ಅಂಟಿಕೊಳ್ಳಬಹುದು ಎಂದು ಅಮೆರಿಕದ ತಜ್ಞರು ಎಚ್ಚರಿಸಿದ್ದಾರೆ. ದೈಹಿಕ ಶ್ರಮ, ವ್ಯಾಯಾಮದಿಂದ ಸ್ವಲ್ಪ ಸಮಸ್ಯೆ ದೂರವಾಗಬಹುದು. ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾಹ್ನ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಆದ್ದರಿಂದ ಬೆಳಗಿನ ತಿಂಡಿಯನ್ನು ಬಿಡಬೇಡಿ ಮತ್ತು ತಡರಾತ್ರಿ ಊಟ ಮಾಡಿ ತಕ್ಷಣವೇ ಮಲಗಬೇಡಿ ಎಂದು ತಜ್ಞ ವೈದ್ಯರು ಸಲಹೆ ಮಾಡಿದ್ದಾರೆ.

Image result for heart attacks
Image Source: Daily Express

ಹೃದಯದ ಆರೋಗ್ಯ ಅರಿಯಲು `ಆಪ್’
ಹೃದಯದ ಆರೋಗ್ಯ ಅರಿಯಲು ಇನ್ನು ಮುಂದೆ ಹೃದಯತಜ್ಞರ ಹತ್ತಿರಕ್ಕೇ ಹೋಗಬೇಕೆಂದೇನಿಲ್ಲ. ಈ ಕೆಲಸವನ್ನು ಮೊಬೈಲ್ ಫೋನ್ ತಂತ್ರಾಂಶವೇ ಮಾಡಲಿದೆ. ಹೃದಯದ ಆರೋಗ್ಯದ ಸ್ಥಿತಿಗತಿ, ಆ ಬಗ್ಗೆ ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸುವಂಥ ಮೊಬೈಲ್ ಫೋನ್ ಆಪ್ `ಹಾರ್ಟ್ ಹೆಲ್ತ್ ಮೀಟರ್(ಎಚ್‍ಎಚ್‍ಎಂ)ಅನ್ನು ಥಾಣೆಯ ವೈದ್ಯರ ತಂಡ ರೂಪಿಸಿದೆ. ಇದು ಹೃದಯದಲ್ಲಿ ಇರುವ ರಿಸ್ಕ್‍ಗಳನ್ನು ಪತ್ತೆ ಹಚ್ಚುವ ಜೊತೆಗೆ ಅವನ್ನು ಕಡಿಮೆ ಮಾಡುವ ಅಥವಾ ನಿವಾರಿಸಿಕೊಳ್ಳುವ ಟಿಪ್ಸ್‍ಗಳನ್ನೂ ನೀಡುತ್ತದೆ.

ಈ ಅಪರೂಪದ ಆಪ್‍ಅನ್ನು ಮಾಧವಬಾಗ್-ಆರ್ಗನೈಸೇಷನ್ ಆಫ್ ಮಲ್ಟಿಡಿಸಿಪ್ಲಿನರಿ ಕಾರ್ಡಿಯಾಕ್ ಕೇರ್ ಕ್ಲಿನಿಕ್ಸ್ ಆಂಡ್ ಹಾಸ್ಪಿಟಲ್ಸ್‍ನ 50ನೇ ವರ್ಷಾಚರಣೆ ಸಂದರ್ಭಕ್ಕೆಂದು ಅದರ ವೈದ್ಯರು ಹಾಗೂ ಮಾಹಿತಿ ತಂತ್ರಜ್ಞಾನ ತಜ್ಞರು ಕಂಡುಹಿಡಿದಿದ್ದಾರೆ. ಇಳಿವಯಸ್ಸು, ಮಧುಮೇಹ, ಸ್ಥೂಲದೇಹ, ಧೂಮಪಾನ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್ ಮುಂತಾದವುಗಳಿಂದ ಹೃದಯದ ಸಮಸ್ಯೆಗಳು ಕಾಣಿಸಿಕೊಂಡು ಹೃದಯಾಘಾತ ಆಗುವ ಸಾಧ್ಯತೆ ಅಧಿಕವಿರುತ್ತದೆ. ಈ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಹೃದಯಾಘಾತವನ್ನು ತಪ್ಪಿಸಬಹುದು.