ಸುಖ ನಿದ್ದೆಯ ಸೂತ್ರ

0
3907

`ನಿದ್ರೆ ಮನುಷ್ಯನ ಅವಶ್ಯಕತೆಗಳಲ್ಲಿ ಒಂದು. ರಾತ್ರಿ ವಿಶ್ರಾಂತಿದಾಯಿಕ, ಸುಖಕರವಾದ ನಿದ್ರೆ ಮಾಡಿದರೆ ಮರುದಿನ ಸಹಜವಾಗಿ ಕೆಲಸ ಮಾಡಲು ಸಾಧ್ಯ. ಕಡಿಮೆ ನಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿದ್ರೆ ಕಡಿಮೆಯಾದರೆ ಹಲವು ಕಾಯಿಲೆಗಳು ಬರಬಹುದು. ಹಾಗಾಗಿ ಸುಖ ನಿದ್ದೆ ಮಾಡಲೇಬೇಕು. ಕೆಲ ಸೂತ್ರ ಪಾಲಿಸಿದರೆ ಸುಖ ನಿದ್ದೆ ಮಾಡಬಹುದು.

  • ಬೇಗ ಮಲಗಿ ಬೇಗ ಏಳಿ ಎಂಬುದು ಜನಪ್ರಿಯ ನಾಣ್ಣುಡಿ. ಕೆಲವರಿಗೆ ಮಲಗುವ ಸಮಯ, ಸ್ಥಳ ಬದಲಾದರೆ ನಿದ್ರೆ ಬಾರದು. ಹಾಗಾಗಿ ಮಲಗಲು ನಿಖರ ಸಮಯ ಹಾಗೂ ಸ್ಥಳ ಇಟ್ಟುಕೊಳ್ಳಬೇಕು.
  • ರಾತ್ರಿ ಮಲಗುವಾಗ ಮುನ್ನ ಅಂದರೆ, ಊಟದ ಬಳಿಕ ಒಂದು ಲೋಟ ಬಿಸಿ ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಹಾಲಿನಲ್ಲಿ ಅಮೈನೋ ಆಮ್ಲಗಳು ಹೆಚ್ಚಿರುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಅಲ್ಲದೆ ಮಧ್ಯದಲ್ಲಿ ಎಚ್ಚರವಾಗುವುದು ತಪ್ಪುತ್ತದೆ.
  • ಮದ್ಯಪಾನ, ಧೂಮಪಾನ ನಿದ್ರೆಗೆ ಸಂಚಕಾರ ತರುತ್ತದೆ. ನಶೆಯ ಅಮಲು ನಿದ್ರೆ ತರಿಸಿದರೂ ಬಳಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ನಿದ್ರೆ ಬಂದಿಲ್ಲ ಎಂದು ನಿದ್ರೆ ಮಾತ್ರೆ ಸೇವನೆ ಒಳ್ಳೆಯದಲ್ಲ. ಹೆಚ್ಚು ನಿದ್ರೆ ಸಹ ಅಪಾಯಕಾರಿ. ಸಮಯ ಇದೆ ಎಂದು ಹಾಸಿಗೆಯಲ್ಲಿ ಬಿದ್ದು ನಿದ್ರೆ ಮಾಡುವುದು ಒಳ್ಳೆಯದಲ್ಲ. ಅತಿ ನಿದ್ರೆ ಮಾಡಿದರೆ ಸ್ನಾಯುಗಳಲ್ಲಿ ಪೌಷ್ಠಿಕಾಂಶ ಕೊರತೆ, ಬೆನ್ನು ನೋವು, ಮಂಡಿ ನೋವಿನ ಸಮಸ್ಯೆ ಕಾಡಬಹುದು.
  • ಹಗಲಿನಲ್ಲಿ ಸಾಧ್ಯವಾದಷ್ಟು ಕಾಲ್ನಡಿಗೆಯಲ್ಲಿ ಓಡಾಡಿದರೆ ಸುಖ ನಿದ್ರೆ ಬರುತ್ತದೆ. ಇದು ಸಾಧ್ಯವಾಗದಿದ್ದರೆ ಬೆಳಗಿನ ವ್ಯಾಯಾಮ, ವಾಯುವಿಹಾರ ಮಾಡಿದರೆ ರಾತ್ರಿ ನಿದ್ರೆಗೆ ಒಳ್ಳೆಯದು.
  • ಮಲಗುವ ಮುನ್ನ ಮನಸ್ಸು ಪ್ರಫುಲ್ಲವಾಗಿರಲಿ, ಕಛೇರಿ ಒತ್ತಡ, ಜಂಜಡಗಳನ್ನು ಮನಸ್ಸಿನಿಂದ ದೂರ ಮಾಡಿ ನಿದ್ರೆ ಮಾಡಿ.
  • ಮಲಗುವ ಮುನ್ನ ಸಹ ಕಾಫಿ ಸೇವನೆ ಬೇಡ, ಮಲಗುವಾಗ ಮೊಬೈಲ್ ಫೆÇೀನ್ ಆಫ್ ಮಾಡಿ, ಇಲ್ಲವೇ ಮ್ಯೂಟ್ ಮಾಡಿ.