ಸುಮ್ನೆ ನಿದ್ದೆ ಬರ್ತಿಲ್ಲ ಅಂತ ಒದ್ದಾಡೋ ಬದ್ಲು ಈ ಟಿಪ್ಸ್ ಫಾಲೋ ಮಾಡಿ ಕಣ್ಣು ತುಂಬಾ ನಿದ್ದೆ ಮಾಡಿ!!!

0
4496

೧) ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ನೀರಿನ ಜೊತೆ ಅರಿಶಿನ ಬೆರೆಸಿ ಕುಡಿಯಿರಿ.

೨) ಮಲಗುವ ಮುನ್ನ ನಿಮ್ಮ ಎರಡು ಪದಗಳನ್ನು ೨೦ ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಅದ್ದಿ ಇರಿಸಿ.

೩) ರಾತ್ರಿ ಊಟವಾದ ಮೇಲೆ ಅರ್ಧ ಗಂಟೆಗಳ ಕಾಲ ಲಘು ನಡಿಗೆಯನ್ನು ಮಾಡಿ.

೪) ನಿದ್ದೆಗೆ ನಿಗದಿತ ವೇಳೆಯನ್ನು ನೀಡಿ, ಯಾವುದೇ ಕಾರಣಕ್ಕೂ ದಿನಕ್ಕೊಂದು ಸಮಯ ಬದಲಿಸಬೇಡಿ.

೫) ಮಲಗುವ ಸಮಯದಲ್ಲಿ ಮೊಬೈಲ್, ಟಿವಿ, ಹಾಗು ಮುಂತಾದ ಇಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ.

೬) ರಾತ್ರಿ ಸಾಧ್ಯವಾದಷ್ಟು ೮ ಗಂಟೆಯ ಒಳಗೆ ಊಟವನ್ನು ಮಾಡಿ.

೭) ಸಂಜೆ ಐದರ ನಂತರ ಕಾಫಿ ಟೀ ಮುಂತಾದ ಕೆಫಿನ್ ಯುಕ್ತ ಪದಾರ್ಥಗಳಿಂದ ದೂರವಿರಿ.

೮) ದಿನವೂ ಕನಿಷ್ಠ ೧ ಗಂಟೆ ವ್ಯಾಯಾಮ ಮಾಡಿ.

೯) ಮಲಗುವ ಮುಂಚೆ ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಮಾಡುವುದರಿಂದ ಒತ್ತಡಗಳು ಕಡಿಮೆಯಾಗಿ ಒಳ್ಳೆಯನಿದ್ದೆ ಬರುತ್ತದೆ.

10) ದಿನವೂ ರಾತ್ರಿ ಮಲಗುವ ಮೊದಲು ಬಿಸಿ ನೀರಿನಿಂದ ಸ್ನಾನ ಮಾಡಿ. ಇದರಿಂದ ನಿಮ್ಮ ಸ್ನಾಯುಗಳು ರಿಲ್ಯಾಕ್ಸ್ ಆಗಿ ಚೆನ್ನಾಗಿ ನಿದ್ದೆ ಬರುತ್ತದೆ.