ಇನ್ಮುಂದೆ ಕಲಬೆರಕೆ ಹಾಲಿನ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ; ಸ್ಮಾರ್ಟ್​ಫೋನ್​ನಲ್ಲೇ ಪತ್ತೆ ಹಚ್ಚಬಹುದು ಹಾಲಿನ ಕಲಬೆರಕೆಯನ್ನ…

0
760

ಪ್ರತಿಯೊಬ್ಬರೂ ಹಾಲು ಕುಡಿಯಲೇ ಬೇಕು ಹಾಲಿನಲ್ಲಿರುವ ಉತ್ತಮಾಂಶಗಳು ದೇಹಕ್ಕೆ ಬೇಕಾದ ಆರೋಗ್ಯಯುತ ಅಂಶಗಳನ್ನು ಒಳಗೊಂಡಿವೆ. ಆದರಿಂದ ಹಾಲು ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೂ ಬೇಕೇಬೇಕು ಇದನೆಲ್ಲ ತಿಳಿದ ಜನರು ಹೇಗಾದರೂ ಹಾಲು ಕುಡಿಯಲೇ ಬೇಕು ಅಂತ ಪ್ರತಿನಿತ್ಯವೂ ಖರಿಧಿಸುವ ಹಾಲಿನಲ್ಲಿ ವಿಷದಂಶವಿರುತ್ತೆ ಅಂತ ಹಲವಾರು ಸಂಶೋಧನೆಗಳು ತಿಳಿಸಿವೆ. ಇದಕ್ಕೆ ದೇಶದೆಲ್ಲಡೆ ವ್ಯಾಪಕ ಚರ್ಚೆಗಳು ಕೂಡ ನಡೆಯುತ್ತಿವೆ. ಹಾಗೆಯೇ ಕೃತಕ ಹಾಲನ್ನು ಕಂಡು ಹಿಡಿಯಲು ಹಲವಾರು ವಿಧಾನಗಳು ಮಾರುಕಟೆಗೆ ಬಂದರು ಅವುಗಳ ಬಳಕೆ ದುಬಾರಿ ಇರುವುದರಿಂದ ಜನರು ಅಷ್ಟೊಂದು ಉಪಯೋಗ ಮಾಡುತ್ತಿಲ್ಲ. ಹಾಗಂತ ವಿಷದ ಹಾಲಿನ ಬಳಕೆ ಮಾತ್ರ ನಿಂತಿಲ್ಲ.

ಈಗ ಮೊಬೈಲ್ App ನಿಂದ ಕೃತಕ ಹಾಲು ಪತ್ತೆ ಹಚ್ಚಬಹುದು:

Also read: ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!!

ಹೌದು ದಿನದಿಂದ ದಿನಕ್ಕೆ ರಾಸಾಯನಿಕ ಹಾಲುಗಳ ಮಾರಾಟ ಹೆಚ್ಚಾಗುತ್ತಿದು ಜನರು ಇದರಿಂದ ನಾನಾ ತರಹದ ಖಾಯಿಲೆಗೆ ಒಳಗಾಗುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಹಲವಾರು ತಂತ್ರಜ್ಞರು ಪಣ ತೊಟ್ಟಿದರು ಹಾಗೆಯೇ ಯಶಸ್ವಿ ಕೂಡ ಕಂಡಿದರು. ಜನರಿಗೆ ಈ ಸಾಧನಗಳನ್ನು ಮನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯವೂ ಬಳಕೆ ಮಾಡುವುದು ತಲೆನೋವು, ಇಂತಹ ವಿಚಾರಕ್ಕೆ ಹೊಸದೊಂದು ತಂತ್ರಜ್ಞಾನ ಬಂದಿದೆ ಇದು ಅತಿ ಕಡಿಮೆ ಸಮಯದಲ್ಲಿ ಮತ್ತು ಉಚ್ಚಿತವಾಗಿ ನಿಮ್ಮ ಸ್ಮಾರ್ಟ್ ಫೋನ್ ನಿಂದ ವಿಷದ ಹಾಲನ್ನು ಪತ್ತೆ ಹಚ್ಚಬಹುದು ಅದು ಹೇಗೆ ಅಂತ ಇಲ್ಲಿದೆ ನೋಡಿ.

ಮೊಬೈಲ್ app ನಿಂದ ಹೇಗೆ ವಿಷದ ಹಾಲು ಪತ್ತೆ ಹಚ್ಚುವುದು?

Also read: ಅಮ್ಮಂದಿರೆ ನಿಮ್ಮ ಮಗುವಿಗೆ ಎದೆ ಹಾಲು ಸಾಲುತ್ತಿಲ್ಲವೇ?? ಎದೆ ಹಾಲು ಹೆಚ್ಚಿಸಲು ಇಲ್ಲಿದೆ ಸರಳ ಮಾರ್ಗಗಳು

ಹೈದರಾಬಾದ್​ನ​ ಐಐಟಿ ಮತ್ತು ಒಂದಷ್ಟು ಸಂಶೋಧನಾ ವಿದ್ಯಾರ್ಥಿಗಳು ಸೇರಿ ಸ್ಮಾರ್ಟ್​ಫೋನ್​ ಸಹಾಯದಿಂದ ನಕಲಿ ಹಾಲನ್ನು ಕಂಡು ಹಿಡಿಯುವ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ. ಈ ತಂತ್ರಜ್ಞಾನದ ಮೂಲಕ ಸಾಮಾನ್ಯರೂ ಕೂಡ ಕಲಬೆರಕೆ ಹಾಲನ್ನು ಪತ್ತೆ ಹಚ್ಚಬಹುದು. ನೈಲಾನ್ ಫೈಬರ್​ನ ಸ್ಟ್ರಿಪ್​ವೊಂದನ್ನು ಐಐಟಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ. ಹೊಮೊಕ್ರೊಮಿಕ್ ಸೆನ್ಸರ್ ಕಾಗದ ಬಳಸಿ ಮಾಡಲಾಗಿರುವ ಈ ಸಾಧನದಿಂದ ಹಾಲಿನ ಪರಿಶುದ್ಧತೆಯನ್ನು ಪರೀಕ್ಷಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶು ಕಲ್ಯಾಣ ಇಲಾಖೆಯ ಒಂದು ವರದಿ ಪ್ರಕಾರ ದೇಶದಲ್ಲಿ ಸರಬರಾಜಾಗುವ ಶೇ. 68 ರಷ್ಟು ಹಾಲು ಕಲಬೆರಕೆಯಾಗಿರುತ್ತದೆ. ಹೀಗಾಗಿ ಜನಸಾಮಾನ್ಯರಿಗೆ ಕೈಗೆಟುಕುವಂತಹ ಸಾಧನವನ್ನು ಕಂಡು ಹಿಡಿದರೆ ಇಂತಹ ಕಲಬೆರಕೆ ಉತ್ಪನ್ನಗಳನ್ನು ತಡೆಗಟ್ಟಬಹುದಾಗಿದೆ. ಈಗ ವಿಧಾನದಿಂದ ಜನರಿಗೆ ಹೆಚ್ಚಿನ ಅನುಕೂಲತೆಯನ್ನು ಕಂಡುಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಿದೆ.

ಇದರ ಬಳಕೆ ಹೇಗೆ?

Also read: ಮನೇಲಿ ಹಾಲು ಇರ್ಬೇಕಾದ್ರೆ ಬೇರೆ ಸೌಂದರ್ಯ ವರ್ಧಕಗಳು ಯಾಕ್ರೀ ಬೇಕು?

ಈ ಸ್ಟ್ರಿಪ್ ಪಟ್ಟಿಯನ್ನು ನೀವು ಬಳಸುವ ಹಾಲಿನಲ್ಲಿ ಮುಳುಗಿಸಿದರೆ ಪಟ್ಟಿಯ ಬಣ್ಣವು ಬದಲಾಗುತ್ತದೆ. ಈ ಸ್ಟ್ರಿಪ್​ನ ಫೋಟೋವನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕ್ಲಿಕ್ಕಿಸಿದರೆ ಹಾಲಿನ ಪಿಎಚ್​ ಡೇಟಾವನ್ನು ನೋಡಬಹುದು. ಅಂದರೆ ಹಾಲಿನಲ್ಲಿರುವ ಸೋಡಾ, ಬೋರಿಕ್ ಆಮ್ಲ, ಯೂರಿಯಾ, ಶುಗರ್ ರೀತಿಯ ಕಲಬೆರಕೆ ವಸ್ತುಗಳ ಅಂಶಗಳು ಇದರಿಂದ ಪತ್ತೆಯಾಗುತ್ತದೆ. ಈಗಾಗಲೇ ಈ ಸ್ಟ್ರಿಪ್ ತಂತ್ರಜ್ಞಾನವು ಶೇ. 99.71 ರಷ್ಟು ಯಶಸ್ವಿ ಫಲಿತಾಂಶ ನೀಡಿದ್ದು, ಇದನ್ನು ಮತ್ತಷ್ಟು ಅಭಿವೃದ್ದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಂಶೋಧನಾ ತಂಡ ತಿಳಿಸಿದೆ.