ಮಹಿಳೆಯರೇ ಎಚ್ಚರ, ನೀವು ಒಳಕಲ್ಲಿನಲ್ಲಿ ಚಟ್ನಿ ಮಾಡ್ತೀರಾ..?

0
877

ಯಾಕಪ್ಪ ಹೀಗೆ ಕೇಳುತಿದ್ದರೆ ಅಂತ ಅಂದುಕೊಂಡಿದ್ದೀರಾ. ಮಹಿಳೆ ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನು ಸೇರಿಸಿ ರುಬ್ಬಿದ ಆಶ್ಚರ್ಯಕಾರಿ ಘಟನೆಯೋಂದು ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ.

ಖಿಲ್ಲಾ ಘಾನ್‍ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ ಚಟ್ನಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು. ಟೊಮೆಟೋವನ್ನ ಬೇಯಿಸಿ ಇತರೆ ಸಾಮಗ್ರಿಗಳನ್ನ ತೆಗೆದುಕೊಂಡು ಒಳಕಲ್ಲಿನ ಬಳಿ ರುಬ್ಬಲು ಅಣಿ ಮಾಡಿಕೊಂಡ್ರು. ಆದರೆ ಒಳಕಲ್ಲಿನ ಒಳಗೆ ಹಾವು ಇದ್ದಿದ್ದನ್ನು ಗಮನಿಸದೆ ಚಟ್ನಿಗೆ ತಯಾರಿಸಿಕೊಂಡಿದ್ದ ಸಾಮಗ್ರಿಗಳನ್ನ ಹಾಕಿ ಹಾವನ್ನೂ ಸೇರಿಸಿ ರುಬ್ಬಿದ್ದಾರೆ.

ಮೊದಲಿಗೆ ರಾಜಮ್ಮ, ಅವರ ಚಿಕ್ಕ ಮಗ ಮತ್ತು ಅವರ ಮಗಳು ಕೃಷ್ಣವೇಣಿ ಬೆಳಗ್ಗಿನ ತಿಂಡಿಗೆ ಚಟ್ನಿಯನ್ನ ಸೇವಿಸಿದ್ದಾರೆ. ನಂತರ ಜಮೀನಿನಲ್ಲಿದ್ದ ದೊಡ್ಡ ಮಗ ಸಾಯಿಗೆ ಊಟ ತೆಗೆದುಕೊಂಡು ಹೋಗಿದ್ದಾರೆ. ಊಟ ಮಾಡುವಾಗ ಸಾಯಿ ಹಾವಿನ ಬಾಲವನ್ನು ನೋಡಿ ಹೌಹಾರಿದ್ದಾರೆ. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಇದ್ದಿದ್ದನ್ನು ನೋಡಿದ್ದಾರೆ.

ನಂತರ ರಾಜಮ್ಮ ರವರ ಚಿಕ್ಕ ಮಗ ಮತ್ತು ಅವರ ಮಗಳು ಕೃಷ್ಣವೇಣಿಯನ್ನು ಚಟ್ನಿ ಜೊತೆ ಹಾವು ತಿಂದಿದ್ದಾರೆಂದು ತಿಳಿದು ಮೊದಲು ಆಸ್ಪತ್ರೆಗೆ ದವಡಾಯಿಸಿದ್ದಾರೆ. ವೈದ್ಯರು ಇವರನ್ನ ತಪಾಸಣೆ ಮಾಡಿದ್ದು, ಯಾವುದೇ ತೊಂದರೆಯಿಲ್ಲ ಅಂತ ತಿಳಿಸಿದ್ದಾರೆ. ನಂಬಲು ವಿಚಿತ್ರವಾದ್ರೂ ಇದು ಸತ್ಯ.