ಹಳ್ಳಿಯಿಂದ ಬಂದು ಕಂಪನಿ ಸ್ಥಾಪಿಸಿ; ದೇಶದ ಮೊದಲ ಕನ್ನಡದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್..

0
1164

ಮಹಿಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತಿದ್ದಾರೆ ಇದು ಹೆಮ್ಮೆಯ ವಿಚಾರವಾಗಿದ್ದು, ಇದಕ್ಕೆ ಪ್ರತ್ಯಕ್ಷೆ ಸಾಕ್ಷಿ ಎಂದರೆ. ಸ್ನೇಹಾ ರಾಕೇಶ್ ಇವರು ಇಯುಇಂಡಿಯಾ 40′ ಜನರ ಪಟ್ಟಿಯಲ್ಲಿ 16 ಮಹಿಳೆಯರು ಮತ್ತು 24 ಪುರುಷ ನವೋದ್ಯಮಿಗಳಲ್ಲಿ ಕರ್ನಾಟಕದ ಸ್ನೇಹಾ ರಾಕೇಶ್ ಅವರು ಭಾರತವನ್ನು ಪ್ರತಿನಿಧಿಸಿ ಮಾತನಾಡಿ ದೇಶದ ಮೊದಲ ಕನ್ನಡದ ಯುವ ಉದ್ಯಮಿಯಾಗಿದ್ದಾರೆ. ಇವರ ಸಾಧನೆಗೆ ಇಡಿ ದೇಶದ ತುಬೆಲ್ಲ ಮೆಚ್ಚುಗೆ ವ್ಯಕ್ತವಾಗಿದೆ.

Also read: ಯಾರ ಅನುಧಾನ ಇಲ್ಲದೆ ನೂರಾರು ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ವಿದ್ಯಾ ಸಂಸ್ಥೆಯ ಸಾಧನೆ ಹೇಗಿದೆ ನೋಡಿ.

ಹೌದು ಏಪ್ರಿಲ್, 2019 ರಂದು ಬ್ರುಸೆಲ್ಸ್ ನಲ್ಲಿ- ಲಂಡನ್ ಮೂಲದ ಯುರೋಪ್ ಇಂಡಿಯಾ ಸೆಂಟರ್ ಫಾರ್ ಬಿಸಿನೆಸ್ ಮತ್ತು ಇಂಡಸ್ಟ್ರಿ ಬ್ರುಸೆಲ್ಸ್ ನ ಯುರೋಪಿಯನ್ ಸಂಸತ್ತಿನಲ್ಲಿ ಇಯುಇಂಡಿಯಾ- 40 ಯುವ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಯೂರೋಪ್, ಸಂಸತ್ತಿನಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದಲ್ಲಿ ಭಾರತ ದೇಶದ ಯುವ ಉದ್ಯಮಿಗಳು, ನಾಯಕರು, ವ್ಯವಹಾರ ಕಾರ್ಯನಿರ್ವಾಹಕರಿಗೆ ಆಹ್ವಾನ ನೀಡಿದ್ದರು. ಮುಂದಿನ ದಶಕಗಳಲ್ಲಿ ಐರೋಪ್ ಒಕ್ಕೋಟ- ಭಾರತ ವ್ಯಾಪಾರ ಸಂಬಂಧಗಳನ್ನು ರೂಪಿಸುವಲ್ಲಿ ಪ್ರಮುಖ್ಯ ಪಾತ್ರ ವಹಿಸುವ 40 ರೊಳಗಿನ ಎಲ್ಲ ವ್ಯಾಪಾರ ಉದ್ಯಮಿಗಳು ಭಾಗವಹಿಸಿದ್ದರು ನೆದರ್ಲ್ಯಾಂಡ್ಸ್ ಮತ್ತು ವೈಸ್ ಚೇರ್ ಯುರೋಪಿಯನ್ ಪಾರ್ಲಿಮೆಂಟ್ ನಿಯೋಗ ಭಾರತ ಮತ್ತು ಶ್ರೀ ಸುಜಿತ್ ಎಸ್. ನಾಯರ್ ಅವರು ಯುರೋಪಿಯನ್ ಇಂಡಿಯಾ ಬಿಸಿನೆಸ್ ಲೀಡರ್ ಸಮ್ಮೆಳನದಲ್ಲಿ EICBI ಅಧ್ಯಕ್ಷರಾಗಿರುವ ಯುರೋಪಿಯನ್ ಪಾರ್ಲಿಮೆಂಟಿನ ಸದ್ಯಸ್ಯರಾದ ಹಾಂ ಕ್ಯಾರೊಲಿನ್ ಬಿಡುಗಡೆ ಮಾಡಿದರು. ಇದರಲ್ಲಿ ಸ್ನೇಹ ರಾಕೇಶ್ ಅವರು ಯುವ ಉದ್ಯಮಿಯಾಗಿದ್ದಾರೆ.

Also read: ಒಂದು ದಿನದ ಊಟಕ್ಕೆ ಪರದಾಡುತ್ತಿದ್ದ ರೈತನ ಮಗ ಈಗ 3,415 ಕೋಟಿ ರೂ ಕಂಪನಿಯ ಒಡೆಯನಾದ ಕಥೆ ಕೇಳಿ, ನಿಮಗೂ ಜೀವನದಲ್ಲಿ ಸಾಧನೆ ಮಾಡೋಕ್ಕೆ ಸ್ಪೂರ್ತಿ ಸಿಗುತ್ತೆ!!

ಅಷ್ಟೇ ಅಲ್ಲದೆ ಡಾ.ಸ್ನೇಹಾ ರಾಕೇಶ್. ವೃತ್ತಿ ಶ್ರೇಷ್ಠತೆಗೆ ಕೊಡಮಾಡುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರ ಸಾಕಷ್ಟು ಸವಾಲುಗಳನ್ನು ಎದುರಿಸಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ 2018ರ ಸಾಲಿನ ದೇಶದ ಪ್ರಬಲ ಮಹಿಳೆಯರಲ್ಲಿ 6ನೇ ಸ್ಥಾನ ಪಡೆದುಕೊಂಡು 22ನೇ ವಯಸ್ಸಿನಲ್ಲೇ ಅಕರ್​ವಾಕ್ಸ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಎನ್ನುವ ಐಟಿ ಕಂಪನಿಯನ್ನು ಸ್ಥಾಪಿಸಿದ ಇವರು ಅಪ್ಪಟ ಕನ್ನಡತಿ ಎನ್ನುವುದು ಹೆಮ್ಮೆಯಾಗಿದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಂಡು ಬಾಲ್ಯದಲ್ಲಿ ವಿವಿಧ ಕಷ್ಟಗಳನ್ನು ಅನುಭವಿಸಿರುವ ಸ್ನೇಹಾ ಅವರ ಮನೋಸ್ಥೈರ್ಯ ಮಾತ್ರ ಯಾವತ್ತೂ ಕುಗ್ಗಿಲ್ಲ, ತಾತನ ಮಾರ್ಗದರ್ಶನದಲ್ಲೇ ಬೆಳೆದವರು. ಹುಟ್ಟೂರು ಹಾಸನದ ಚೆನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ. ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಸರ್ಕಾರಿ ಹಾಸ್ಟಲ್​ನಲ್ಲಿದ್ದುಕೊಂಡು ಡಿಪ್ಲೊಮಾ ಓದಿದರು. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಾಗ ಎಲ್ಲೂ ದೀರ್ಘಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಳ್ಳಿಯಿಂದ ಬಂದಿದ್ದರಿಂದ ಸಂವಹನ ಕೌಶಲವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗೆಂದು ಸುಮ್ಮನೆ ಕೂರದೆ ಉದ್ಯೋಗದ ಜತೆಜತೆಗೆ ಎಜುಕೇಶನ್ ಲೋನ್ ಪಡೆದು ಶ್ರಮವಹಿಸಿ ಇಂಜಿನಿಯರಿಂಗ್ ಪದವಿ ಹಾಗೂ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದರು. ವಿದ್ಯಾಭ್ಯಾಸದ ಜತೆಗೇ ಆನ್​ಲೈನ್​ನಲ್ಲಿ ಫ್ರೀಲಾನ್ಸರ್​ಆಗಿ ಪ್ರಾಜೆಕ್ಟ್ ಪ್ರಾರಂಭದಲ್ಲಿ ಆರ್ಥಿಕ ಸಮಸ್ಯೆ ಕಾಡಿತು.

Also read: ಮೊದಲ ಬಾರಿ ರಾಜಕೀಯ ಬಿಟ್ಟು ವಯಕ್ತಿಕ ಜೀವನದ ಬಗ್ಗೆ ನಟ ಅಕ್ಷಯ್ ಕುಮಾರ್ ಅವರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ..

ಈಗ ಇವರೇ ನೂರಾರು ಜನರಿಗೆ ಕೆಲಸ ನೀಡುತ್ತಿದ್ದು ಸ್ನೇಹಾರ ಅಕರ್​ವಾಕ್ಸ್ ಕಂಪನಿ ವೆಬ್ ರಿಸರ್ಚ್, ಆಪ್ ಡೆವಲಪ್​ವೆುಂಟ್, ಸಾಫ್ಟ್​ವೇರ್ ಡೆವಲಪ್​ವೆುಂಟ್, ವೆಬ್ ಬೇಸ್ಡ್ ಸಾಫ್ಟ್​ವೇರ್ ಡೆವಲಪ್​ವೆುಂಟ್, ಪ್ರಾಜೆಕ್ಟ್ ಔಟ್​ಸೋರ್ಸ್, ಇನ್​ಫಾಮೇಷನ್ ಟೆಕ್ನಾಲಜಿ, ಡಿಜಿಟಲ್ ಮಾರ್ಕೆಟಿಂಗ್ ಸರ್ವೀಸಸ್ ಇತ್ಯಾದಿ ಸೇವೆ ನೀಡುತ್ತದೆ. 017ರಲ್ಲಿ ಸ್ನೇಹಾ ಸಮಗ್ರ ಅಭಿವೃದ್ಧಿ ಟ್ರಸ್ಟ್ ಆರಂಭಿಸಿ ಈ ಮೂಲಕ ಸುಮಾರು 2000 ಯುವಕ-ಯುವತಿಯರಿಗೆ ತರಬೇತಿ ನೀಡಿದ್ದಾರೆ. ನಿರುದ್ಯೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೌಶಲಗಳನ್ನು ತರಬೇತಿ ಮೂಲಕ ಹೇಳಿಕೊಡುತ್ತಿದ್ದಾರೆ. ಇದೇ ತರಬೇತಿ ಬೇರೆಡೆ ಪಡೆಯಲು ಕನಿಷ್ಠ 25ರಿಂದ 30 ಸಾವಿರ ರೂ. ಪಾವತಿಸಬೇಕು. ಆದರೆ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.

Also read: ಸಾವಿರಾರು ಕಿ.ಲೋ ಮೀ ದೂರದಿಂದಲೇ ಮಕ್ಕಳ, ವಯಸ್ಸಾದವರ ಕಾಳಜಿ ವಹಿಸಬಹುದಾದ ಸ್ಮಾರ್ಟ್​ ಟಿ-ಶರ್ಟ್​ ಕಂಡು ಹಿಡಿದ 17ರ ಯುವಕ, ಇದರ ವಿಶೇಷತೆ ಹೇಗಿದೆ ಗೊತ್ತಾ??

ಇವರ ಈ ಸಾಧನೆಗೆ ಗ್ಲೋಬಲ್ ಅಚೀವರ್ ಮಹಾತ್ಮ ಗಾಂಧಿ ಲೀಡರ್​ಷಿಪ್ ಅವಾರ್ಡ್(ಹೌಸ್ ಆಫ್ ಕಾಮನ್ಸ್, ಬ್ರಿಟಿಷ್ ಪಾರ್ಲಿಮೆಂಟ್, ಯುಕೆ), ಇಂಟರ್​ನ್ಯಾಷನಲ್ ಅಚೀವರ್ ಅವಾರ್ಡ್ (ಬ್ಯಾಂಕಾಕ್), ಹಿಂದು ರತ್ನ ಅವಾರ್ಡ್ (ದೆಹಲಿ), ನ್ಯಾಚುರಲ್ ರಿಸೋರ್ಸ್ ಆಫ್ ಇಂಡಿಯಾ ಅವಾರ್ಡ್(ಚಂಡೀಗಢ), ಕಾಯಕ ರತ್ನ ಪ್ರಶಸ್ತಿ, ಕೆಂಪೇಗೌಡ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಯುವ ಪುರಸ್ಕಾರ, ವರ್ಷದ ಮಹಿಳಾ ಸಾಧಕಿ(2018) ಅಲ್ಲದೆ ಸಾಕಷ್ಟು ಪುರಸ್ಕಾರಗಳು ಸ್ನೇಹಾ ಅವರಿಗೆ ಸಂದಿವೆ.