ನಿಮ್ಮ ಫೇಸ್ ಬುಕ್ ಮೂಲಕ ಕಪ್ಪುಹಣ ಪತ್ತೆ ಮಾಡಲಾಗುತ್ತದೆ ಹೇಗೆ ಗೊತ್ತಾ..!

0
671

ಕಪ್ಪುಹಣ ಪತ್ತೆ ಮಾಡಲು ಹಲವು ದಾರಿಗಳನ್ನು ಮಾಡಿಕೊಂಡಿರುವ ಸರ್ಕಾರ ಇದೀಗ ಫೇಸ್ ಬುಕ್ ಗೆ ಕಣ್ಣ ಹಾಕಿದೆ.
ನಿಮ ಫೇಸ್ ಬುಕ್ ಮುಖಂತರ ನಿಮ್ಮ ಕಪ್ಪು ಹಣವನ್ನು ಪತ್ತೆ ಮಾಡಬುದು. ಈ ಸುದ್ದಿ ನೋಡಿ ಇದೇನಪ್ಪ ಹೇಗೆ ಅಂತೀರಾ ಇಲ್ಲಿದೆ ನೋಡಿ.

ನೀವು ಖರೀದಿಸಿದ ದುಬಾರಿ ವಾಚ್, ಕಾರು ಮುಂತಾದವುಗಳ ಫೋಟೋವನ್ನು ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್’ನಲ್ಲಿ ಹಾಕುವುದರಿಂದ ಇನ್ಮುಂದೆ ತೆರಿಗೆ ಅಧಿಕಾರಿಗಳು ನಿಮ್ಮ ಬಾಗಿಲು ತಟ್ಟುವ ಸಾಧ್ಯತೆಗಳಿವೆ.

ಕಪ್ಪು ಹಣ ಪತ್ತೆಹಚ್ಚಲು ತೆರಿಗೆ ಇಲಾಖೆಯು ‘ಪ್ರಾಜೆಕ್ಟ್ ಇನ್’ಸೈಟ್’ ಎಂಬ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೀವು ಹಾಕುವ ಪೋಸ್ಟ್’ಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದೆಂದು ವರದಿಯಾಗಿದೆ.

ಈ ಹೊಸ ಯೋಜನೆಯಲ್ಲಿ, ಸೋಶಿಯಲ್ ಮೀಡಿಯಾ ಮೂಲಕ ಕಲೆಹಾಕಿರುವ ಮಾಹಿತಿಯನ್ನು ಬಿಗ್ ಡಾಟ ಅನಾಲಿಸಿಸ್’ಗೊಳಪಡಿಸಿ ನಿಮ್ಮ ಆದಾಯ ಹಾಗೂ ಖರ್ಚುಗಳ ಸ್ವರೂಪವನ್ನು ವಿಶ್ಲೇಷಸಿ, ತೆರಿಗೆ ವಂಚನೆ ಹಾಗೂ ಕಪ್ಪು ಹಣವನ್ನು ಪತ್ತೆಹಚ್ಚಲಾಗುತ್ತದೆ.

ಕಪ್ಪುಹಣ ಪತ್ತೆ ಹಚ್ಚಲು ಫೇಸ್ ಬುಕ್ ಬಳಕೆಗೆ ಈ ಯೋಜನೆಯನ್ನು ಜಾರಿಗೊಳಿಸಲು ಎಲ್&ಟಿ ಇನ್ಪೋಟೆಕ್’ನೊಂದಿಗೆ ಕಳೆದ ವರ್ಷ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಕೆಲಸ ಶುರುವಾದರೆ ಹಲವು ಜನರಿಗೆ ಸಂಕಷ್ಟ ತರುವುದರಲ್ಲಿ ಎರಡು ಮಾತಿಲ್ಲ. ಫೇಸ್ ಬುಕ್ ನಲ್ಲಿ ಶೋಕಿ ಮಾಡುವ ಜನರು ಸಹ ಒಮ್ಮೆ ಒಮ್ಮೆ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಯಾಕೆ ಅಂದ್ರೆ ದುಬಾರಿ ಕಾರುಗಳ ಮುಂದೆ ನಿಂತು ಪೋಸ್ ಕೊಟ್ರೆ ಅದು ನಿಂದೆ ಅಂತ ತಿಳ್ಕೊಂಡು ಕಪ್ಪುಹಣದ ವಿಚಾರವಾಗಿ ತನಿಖೆ ನಡೆಸಬಹುದು ಹುಷಾರಾಗಿರಿ ಯಾವುದಕ್ಕೂ.