ಸಾಮಾಜಿಕ ತಾಣಗಳಲ್ಲಿ ಶ್ರೀಘ್ರವೇ ಸಿಗುತ್ತಿದೆ ರೈಲ್ವೆಯಿಂದ ಪರಿಹಾರ!!

0
649

ಸಾಮಜಿಕ ಜಾಲತಾಣಗಳ ಬಳಕೆಯಿಂದ ಜನರು ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನು ಜನ ಪ್ರತಿ ನಿಧಿಗಳು ಸಹ ಇವುಗಳ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸುರೇಶ್ ಪ್ರಭುಅವರು ಸಹ ಟ್ವೀಟರ್ ನಲ್ಲಿ ಚುರುಕಾಗಿದ್ದಾರೆ.

ಟ್ವೀಟರ್ ಖಾತೆ ಹೊಂದಿದ ಜನ ಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಪರಿ ಶ್ಲಾಘನೀಯ. ಇತ್ತೀಚಿಗೆ ರೈಲ್ವೆಪ್ರಯಾಣಿಕನ ತೊಂದರೆಗೆ, ಸಚಿವರೇ ಪರಿಹಾರ ನೀಡಿದ್ದಾರೆ. ದಿಲ್ಶಾದ ಶೇಖ ರೈಲು ಪ್ರಯಾಣ ಬೆಳಿಸಿದ್ದರು. ಈ ವೇಳೆ ಅವರತಂದೆಯ ಆರೋಗ್ಯದಲ್ಲಿ ಏರು ಪೇರು ಆಗಿತ್ತು. ಈ ವೇಳೆ ಅವರ ತೊಂದರೆಗೆ ಸಚಿವ ಸ್ಪಂದನೆ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಯಾಣಿಕ ಹಾಗೂ ಕೇಂದ್ರ ಸಚಿವರ ನಡುವಿನ ಟ್ವೀಟರ್ ಸಂಭಾಷಣೆ ಇಲ್ಲಿದೆ.

ಪ್ರಯಾಣಿಕ: ನನಗೆ ಶೀಘ್ರದಲ್ಲಿ ವೈದ್ಯರ ನೆರವು ಅವಶ್ಯಕವಾಗಿದೆ. ನಾನು ಗೋದ್ರಾ ರೈಲಿನಲ್ಲಿ (12472) ಪ್ರಯಾಣಿಸುತ್ತಿದ್ದೇನೆ.

ಕೇಂದ್ರ ರೈಲ್ವೆ ಸಚಿವಾಲಯ: ಸರ್ ದಯವಿಟ್ಟು ನಿಮಗೆ ಯಾವ ತರನಾದ ವೈದ್ಯಕೀಯ ಸೌಲಭ್ಯ ಅವಶ್ಯಕ. ಹಾಗೂ ನಿಮ್ಮಪಿಎನ್ ಆರ್ ನಂಬರ್ ಹಾಗೂ ಮೊಬೈಲ್ ನಂಬರ್ ತಿಳಿಸಿ.

ಪ್ರಯಾಣಿಕ: ಪಿಎನ್ ಆರ್: 2428411638

 

ಕೇಂದ್ರ ರೈಲ್ವೆ ಸಚಿವಾಲಯ: ನಿಮ್ಮ ಪ್ರಯಾಣದ ವಿವರ, ಕೋಚ್ ನಂಬರ್ ತಿಳಿಸಿ

ಪ್ರಯಾಣಿಕ: ಕೋಚ್ ನಂಬರ್: ಎಸ್ 12-15, ರೈಲ್ವೆ ನಂಬರ್: 12472

ಕೇಂದ್ರ ರೈಲ್ವೆ ಸಚಿವಾಲಯ: ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು.

ಎಂದು ತಿಳಿಸಿದ ಕ್ಷಣಗಳಲ್ಲಿ ವೈದ್ಯಕೀಯ ಸೌಲಭ್ಯ ಲಭಿಸಿದೆ ಇದರಿಂದ ಸಂತಸ ಗೊಂಡ ಪ್ರಯಾಣಿಕ ಹರ್ಷದಿಂದ ಸಚಿವರನ್ನು ಹಾರೈಸಿದ್ದಾನೆ. ಈ ಬಗ್ಗೆ ಉತ್ತಮ ಸೌಲಭ್ಯವನ್ನು ಬಣ್ಣಿಸಿದ್ದಾರೆ.