ಸಾಫ್ಟ್ವೇರ್ ಹಾಗೂ ಎಂ.ಎನ್.ಸಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ತುಂಬಾ ಬ್ಯೂಸಿಯಾಗಿರತ್ತಾರೆ ಎಂದು ಎಲ್ಲರು ತಿಳಿದಿರುತ್ತಾರೆ. ಹಾಗಿದ್ದರೆ ಅವರು ಅಲ್ಲಿ ಮಾಡು ಕೆಲಸಗಳಾದರು ಏನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
– ತಡವಾಗಿ ಏಳುವುದು.. ಬೇಗ ಬೇಗನೆ ಕೆಲಸ ಮುಗಿಸಿ ಆಫಿಸ್ ಗೆ ಹೋಗುವುದು. ತಮ್ಮ ಐಡಿ ಸ್ವ್ಯಾಪ್ ಮಾಡಿ ಕಚೇರಿ ಒಳ ಪ್ರವೇಶಿಸುವುದು.
– ತಮ್ಮ ಕ್ಲೈಂಟ್ ಜೊತೆಗೆ ಮಾತು.
– ನಂತರ ಬ್ರೇಕ್ ಫಾಸ್ಟ್ / ಕಾಫಿ ಕುಡಿಯುವುದು.
– ತಲೆ ನೋವುತ್ತಿದೆ ಎಂದು ಸಿಗರೇಟ್ ಸೇದುವುದು
– ಮತ್ತೆ ತಮ್ಮ ಸ್ಥಳಕ್ಕೆ ಬಂದು ಸಹೋದ್ಯೊಗಿಗಳೊಂದಿಗೆ ಕೆಲಸದ ಬಗ್ಗೆ ನಗೆ ಚಟಾಕೆ. ಅಲ್ಲದೆ ಮಾತಿನ ಮಧ್ಯ ರಾಜಕೀಯ ನಾಯಿ, ಬೆಕ್ಕಿನ ಮಾತುಕುತೆ.
– ಇನ್ನು ಅಂತಾರ್ಜಾಲದಲ್ಲಿ ವಸ್ತುಗಳ ಹುಡುಕಾಟ. ಆಫರ್ ಗಳ ಬಗ್ಗೆ ಕಣ್ಣು ಹಾಯಿಸುವುದು.
– ಇಷ್ಟೆಲ್ಲಾ ಆಗುವ ಹೊತ್ತಿಗೆ ಊಟದ ಸಮಯ ಆಗಿ ಬಿಡುತ್ತದೆ. ಊಟಕ್ಕೆ ಕ್ಯಾಂಟಿನ್ ನತ್ತ ಮುಖ. ಮನೆಯಿಂದ ಡಬ್ಬಾ ತಂದವರು ಆಗಿದ್ದರೆ, ಮೈಕ್ರೊವೇವ್ ನಲ್ಲಿ ಬಿಸಿ ಮಾಡಿಕೊಂಡು ಊಟ ಮಾಡುವುದು. ಇಲ್ಲವೆ ಕೂಪನ್ ಪಡೆದು ಊಟ ಮಾಡುವುದು.
– ಊಟದ ಬಳಿಕ ಮತ್ತೆ ಸಹೋದ್ಯೊಗಿಗಳ ಜೊತೆ ಹರಟೆ. ಮತ್ತೆ ಸಿಗರೇಟ್ ಸೇದುವುದು.
– ತಮ್ಮ ಸೀಟ್ ಗೆ ಬರುತ್ತಿದ್ದಂತೆ ಎಲ್ಲಿಯಾದ್ರೂ ಕೆಲಸದ ಖಾಲಿ ಇದೇಯಾ ಎಂದು ಹುಡುಕಾಟ.
– ಮತ್ತೆ ಹೊಟ್ಟೆ ನೆನಪಾಗುತ್ತದೆ. ಸಮೋಸಾದಂತಹ ತಿಂಡಿಗಳನ್ನು ತಿನ್ನುವುದು.
– ನಾಲ್ಕು ಗಂಟೆಯಿಂದ ಕೆಲಸದ ನೆನಪು ಆಗುತ್ತದೆ. ಬೇಗ ಬೇಗ ಕೆಲಸ ಮಾಡಲು ಮುಂದಾಗುತ್ತಾರೆ. ಈ ವೇಳೆಗೆ ಅವರ ಮ್ಯಾನೆಜರ್ ನಿಂದ ಕೆಲಸ ಮುಗದಿಲ್ಲವೇ ಎಂದು ಮೇಲ್ ಬಂದಾಗ ನೋವು ಆರಂಭ
– 5.30ಕ್ಕೆ ಮ್ಯಾನೇಜರ್ ಗೆ ಏನು ಮ್ಯಾನೇಜರ್ಗೆ ಏನು ಮೇಲೆ ಮಾಡಬೇಕೆಂಬ ತಲೆನೋವು.
ವಿಶೇಷ ಸೂಚನೆ: ಇಲ್ಲಿ ನಮೂದಿಸಿದ ಹಾಗೆ ಎಲ್ಲ ಕೆಲಸಗಾರರು ಮಾಡುತ್ತಾರೆ ಎಂದು ಹೇಳಲು ಅಸಾಧ್ಯ ಆದರೆ ಹೆಚ್ಚಿನ ಕೆಲಸಗಾರರು ಮಾಡುವ ಕಾರ್ಯವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ.