Kannada News | Health tips in kannada
ಸೊಗದೆ ಬೇರು, ನನ್ನಾರಿ ಬೇರು, ಸುಗಂಧಿ ಬೇರು ಮುಂತಾದ ಹೆಸರುಗಳಿರುವ ಈ ಸಸ್ಯ ಒಂದು ಬಳ್ಳಿ. ಸಾರಿವಾ, ಅನಂತ ಮೂಲ, ಗೋವಾಸುತಾ ಎಂಬ ಹೆಸರುಗಳು ಇದಕ್ಕೆ ಉಂಟು. ಸೊಗದೆ ಬೇರು ರಕ್ತವನ್ನು ಶುದ್ಧಿ ಮಾಡಿ ಮೂತ್ರ ಪ್ರವರ್ತನೆಯನ್ನು ಸರಿಪಡಿಸುತ್ತದೆ. ಉರಿ ಮೂತ್ರವನ್ನು ನಿವಾರಿಸಿ, ಸಾಮಾನ್ಯವಾದ ಚರ್ಮದ ತೊಂದರೆಗಳನ್ನು ಗುಣಪಡಿಸಿ ಕೀಲುರೋಗವನ್ನು ಕಡಿಮೆ ಮಾಡುತ್ತದೆ.
ಸೊಗದೆ ಬೇರಿನ ಶರಬತ್ತು ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು:
೧) ಚೆನ್ನಾಗಿ ಒಣಗಿದ ಸೊಗದೆ ಬೇರಿನ ಪುಡಿ: ೧ ಭಾಗ
೨) ಸಕ್ಕರೆ: ೨ ಭಾಗ
ಮಾಡುವ ವಿಧಾನ:
-ಚೆನ್ನಾಗಿ ಒಣಗಿದ ಸೊಗದೆ ಬೇರಿನ ಪುಡಿಗೆ ನಾಲ್ಕು ಭಾಗ ನೀರು ಸೇರಿಸಿ ಕಲಕಿ, ಒಲೆಯ ಮೇಲಿಟ್ಟು ಒಂದು ಭಾಗ ಆಗುವವರೆಗೂ ನಿಧಾನವಾಗಿ ಕುಧಿಸಿ.
-ಈ ಕಷಾಯವನ್ನು ಶೋಧಿಸಿದ ನಂತರ ಅದಕ್ಕೆ ಎರಡು ಭಾಗದಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿ, ಎಳೆ ಎಳೆಯಾಗಿ ಪಾಕ ಬರುವವರೆಗೂ ಕುಡಿಸಿ ಆರಲು ಬಿಡಬೇಕು.
– ಆರಿದ ಮೇಲೆ ಒದ್ದೆಯಿಲ್ಲದ ಬಾಟಲಿ ಅಥವಾ ಜಾಡಿಯಲ್ಲಿ ಹಾಕಿ ಮುಚ್ಚಿಡಬೇಕು.
ಬಳಸುವ ಕ್ರಮ:
ದಿನಕ್ಕೆ ಒಂದೆರಡು ಬಾರಿ ಒಂದೆರಡು ಚಮಚ ಶರಭಟ್ಟನ್ನು ನೀರು ಅಥವಾ ಹಾಲಿಗೆ ಸೇರಿಸಿ ಕುಡಿಯಬಹುದು.
ಉಪಯೋಗ:
ಮೈನವೆ, ತುರಿಕೆ, ಜ್ವರದ ತಾಪ ಕಡಿಮೆಯಾಗಿ ರಕ್ತ ಶುದ್ಧಿಯಾಗುತ್ತದೆ. ಬೇಸಿಗೆಯ ಬಾಯಾರಿಕೆಗೆ ಒಂದು ಉತ್ತಮ ಪಾನೀಯ
MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840