ಇಂದು “ಸೂರ್ಯಗ್ರಹಣ” ಈ ದಿನದಂದು ಈ 5 ಕೆಲಸಗಳನ್ನು ತಪ್ಪದೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತಂತೆ.!

0
1092

Kannada News | Kannada Astrology

ಇಂದು 2018 ನೇ ವರ್ಷದ ಎರಡನೇ ಗ್ರಹಣ. ಈ ಸೂರ್ಯಗ್ರಹಣ ಭಾರತ ಹಾಗೂ ವಿಶ್ವದ ಇತರ ಅನೇಕ ಭಾಗಗಳಲ್ಲಿ ಕಾಣಿಸದು. ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಅಂಟಾರ್ಕಟಿಕ್ ಭಾಗದಲ್ಲಿ ಈ ಗ್ರಹಣ ಗೋಚರಿಸಲಿದೆ. 38 ವರ್ಷಗಳ ಬಳಿಕ ಅಂದರೆ 1979ರ ಬಳಿಕ ಸಂಭವಿಸುತ್ತಿರುವ ಮೊದಲ ಅತೀ ದೊಡ್ಡ ಸೂರ್ಯ ಗ್ರಹಣ.

ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಸ್ಪರ್ಶ ಕಾಲ ಇಂದು ತಡರಾತ್ರಿ 00.25. ಗ್ರಹಣ ಮೋಕ್ಷ ಕಾಲ ನಾಳೆ ಬೆಳೆಗ್ಗೆ 4.17 ರ ವರೆಗೆ ಸಂಭವಿಸಲಿದ್ದು, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಗ್ರಹಣದ ದಿನ ಅಥವಾ ತಕ್ಷಣವೇ ಅನುಭವಕ್ಕೆ ಬರುವುದಿಲ್ಲ. ಎರಡು, ಮೂರು ತಿಂಗಳ ನಂತರ ಅನುಭವಕ್ಕೆ ಬರುವುದು. ಹಾಗಾಗಿ ಈ ಸೂರ್ಯ ಗ್ರಹಣದ ದಿನ ಯಾವ ಕೆಲಸಗಳನ್ನು ಮಾಡಿದರೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ….

  • ಗ್ರಹಣ ಸಂಭವಿಸುವ ಮೊದಲು ಮನೆಯಲ್ಲಿರುವ ಎಲ್ಲಾ ನೀರಿನಲ್ಲೂ ದರ್ಬೆ ಕಡ್ಡಿ ಅಥವಾ ತುಳಸಿದಳ ಹಾಕಿ.
  • ಇಂದು ಬೆಳಿಗ್ಗೆ ಎದ್ದ ಕೂಡಲೆ ಅರಿಶಿನ ಬೆರಸಿದ ನೀರಿನಿಂದ ಸ್ನಾನ‌ ಮಾಡುವುದು ಒಳ್ಳೆಯದು. ಮತ್ತು ಗ್ರಹಣದಂದು ಮಧ್ಯಾಹ್ನ ಹನ್ನೆರಡರವರೆಗೆ ಯಾವುದೆ ಆಹಾರ ಸೇವಿಸಬಾರದು.
  • ಗ್ರಹಣದಂದು ಶುಭ್ರವಾಗಿ ಸ್ನಾನ ಮಾಡಿದನಂತರ ದೇವರ ಪೂಜೆ ಧ್ಯಾನ ಮಾಡಬೇಕು. ನಂತರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ ನಿಮ್ಮ ಮನೆಯ ಸುತ್ತಲು ಪವಿತ್ರ ನೀರಿನಿಂದ ಪ್ರೊಕ್ಷಣೆ ಮಾಡಿ.
  • ಇದರ ಜೊತೆಗೆ ಇಂದು ಹಸುವಿಗೆ ಪೂಜೆ ಮಾಡಿ ಬಾಳೆಹಣ್ಣನ್ನು ತಿನ್ನಿಸಿ. ತುಳಸಿಗೆ ದೀಪ ಹಚ್ಚಿ ನಮಸ್ಕರಿಸಿ. ಅಥವಾ ನಿಮ್ಮ‌ ಹತ್ತಿರದ ಯಾವುದಾದರು ಅರಳಿಕಟ್ಟೆಗೆ ತೆರಳಿ ಮೂರು ಬಾರಿ ಪ್ರದಕ್ಷಿಣೆ ಹಾಕಿ.
  • ಸಾದ್ಯವಾದರೆ ಇಂದು ಗಣೇಶನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಹೆಸರುಕಾಳನ್ನು ಅಚಕರಿಗೆ ದಾನವಾಗಿ ನೀಡಿ ಆಶಿರ್ವಾದ ಪಡೆದುಕೊಂಡು ಬನ್ನಿ.
  • ಹೀಗೆ ಮಾಡಿದರೆ ನಿಮಗೆ ಯಾವುದೇ ತರಹದ ಗ್ರಹಣದ ಕೆಟ್ಟ ಪರಿಣಾಮಗಳು ಆಗುವುದಿಲ್ಲ‌ ಮತ್ತು ನಿಮಗೆ ಒಳಿತಾಗುತ್ತದೆ.

Also read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿ ಈ ನಾಲ್ಕರಲ್ಲಿ ಇದ್ದರೆ, ನಿಮ್ಮ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೂ ತುಂಬಾ ಕಷ್ಟ ಪಡಬೇಕಾಗುತ್ತದೆ..!!