ಪುಲ್ವಾಮಾ ದಾಳಿಯಲ್ಲಿ ಅದೆಷ್ಟೋ ಸೈನಿಕರ ಪ್ರಾಣ ಉಳಿಸಿದ ಯೋಧ ಇಕ್ಬಾಲ್; ಪಾರ್ಶ್ವವಾಯು ಪೀಡಿತ ಮಗುವಿಗೆ ತೋರಿಸಿದ ಮಾನವಿತೆಗೆ ಬಂತು ಮೆಚ್ಚುಗೆಯ ಹೊಳೆ..

0
325

ಈ ಘಟನೆ ಓದಿದರೆ ನಿಮಗೇನು ಅನಿಸುತ್ತೆ? ಮತ್ತೆ ಈ ತರಹದ ವಿಚಾರ ನಮ್ಮಲಿ ಯಾಕೆ ಬರೋದಿಲ್ಲ! ಅಂತ ಈ ಘಟನೆಯಿಂದ ತಿಳಿದರು ತಿಳಿಯಬಹುದು. ಅದೇನ್ ಅಂದರೆ ದೇಶ ಕಾಯಿವ ಯೋಧ ನಮ್ಮೆಲ್ಲರ ರಕ್ಷಣೆ ಮಾಡಲು ತನ್ನ ಜೀವನದ ಸ್ವಂತ ಸುಖವನ್ನು ಮರೆತು ಗಡಿಯಲ್ಲಿ ಹೊರಾಡುತ್ತಾನೆ, ಅಂತ ನಾವೆಲ್ಲರೂ ತಿಳಿದ ಒಂದೇ ವಿಷಯವಾದರೆ, ಇನ್ನೂ ಮಾನವಿತೆಗೆ ಸಂಬಂಧಪಟ್ಟ ಕೆಲವೊಂದು ಕೆಲಸಗಳನ್ನು ನೋಡಿದರೆ. ದೇಶದಲ್ಲಿ ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿರುವ ನಮಗೆ ದೇವರು ಯಾಕೆ ಇಂತಹ ಬುದ್ದಿಯನ್ನು ಕೊಟ್ಟಿಲ್ಲ ಎನ್ನುವ ಅಳುಕು ಹುಟ್ಟುವುದು ನೀಜ ಅನಿಸುತ್ತೆ.

ಏನಿದು ಈ ಯೋಧನ ಮಾನವಿತೆ?

ವಿಷಯ ಚಿಕ್ಕದ್ದು ಅನಿಸಿದರು ಇಡಿ ಜೀವನಕ್ಕೆ ಸಾಕಾಗುವಷ್ಟು ಪಾಠ ಇದರಲ್ಲಿದೆ ಎಂದರೆ ತಪ್ಪಾಗಲಾರದು. ಹೌದು ಸಿಆರ್​ಪಿಎಫ್​ ಸೈನಿಕ ಇಕ್ಬಾಲ್​ ಸಿಂಗ್ 49 ಬೆಟಾಲಿಯನ್​​ಗೆ ಸೇರಿದವರು. ಪುಲ್ವಾಮಾ ದಾಳಿ ವೇಳೆ​​ ಹಲವರ ಜೀವ ಉಳಿಸಿದ್ದ ರಕ್ಷಕ. ಸಿಆರ್​ಪಿಎಫ್ ಮಹಾನಿರ್ದೇಶಕರು ಇಕ್ಬಾಲ್ ಸಿಂಗ್ ಅವರಿಗೆ ಪ್ರಶಂಸೆ ಪ್ರಮಾಣಪತ್ರ (ಡಿಸ್ಕ್ ಅಂಡ್ ಕಮೆಂಡಬಲ್ ಸರ್ಟಿಫಿಕೇಟ್) ನೀಡಿ ಗೌರವಿಸಿದ್ದಾರೆ. ಯಾಕೆಂದರೆ ಪುಲ್ವಾಮಾ ದಾಳಿ ವೇಳೆ ತೋರಿದ ಶೌರ್ಯಕ್ಕೆ ಮಾತ್ರ ಇಕ್ಬಾಲ್​ಗೆ ಪ್ರಶಸ್ತಿ ಲಭಿಸಿಲ್ಲ. ಸಿಂಗ್ ಅವರ ಶೌರ್ಯ ಮತ್ತು ನಿಸ್ವಾರ್ಥ ಸೇವೆ ಎರಡನ್ನೂ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿದ್ದ ವಾಹನವನ್ನುಇಕ್ಬಾಲ್ ಅವರೇ ಚಲಾಯಿಸುತ್ತಿದ್ದರು. ಈ ವೇಳೆ ಸಿಂಗ್​​ಗೆ ಇಕ್ಕಟ್ಟಿನ ಪರಿಸ್ಥಿತಿ ಬಂದೊದಗಿತು. ಘಟನೆಯಲ್ಲಿ ಗಾಯಗೊಂಡ ಅನೇಕ ಸಿಆರ್​ಪಿಎಫ್​ ಯೋಧರ ಪ್ರಾಣ ಉಳಿಸುವಲ್ಲಿ ಇಕ್ಭಾಲ್​​ ಸಾಕಷ್ಟು ಹೋರಾಡಿದ್ದಾರೆ.

ಮಾನವಿತೆಗೆ ಬಂತು ಮೆಚ್ಚುಗೆ;

ಇಕ್ಬಾಲ್ ಸಿಂಗ್ ಅವರನ್ನು ಶ್ರೀನಗರದ ನವಕಡಲ್ ಎಂಬಲ್ಲಿ ಕರ್ತ್ಯವ್ಯದ ಮೇಲೆ ಇರುವಾಗ ಇಕ್ಬಾಲ್ ಸಿಂಗ್ ತೋರಿದ ಒಂದು ಮಾನವೀಯತೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಸೇವೆಯಲ್ಲಿದ್ದಾಗ ರಸ್ತೆಬದಿಯಲ್ಲಿ ಹಸಿವೆಯಿಂದ ಒದ್ದಾಡುತ್ತಿದ್ದ ಮಗು ಕಣ್ಣಿಗೆ ಬೀಳುತ್ತದೆ. ಆಗ ಅವರು ತಾವೇ ಖುದ್ದಾಗಿ ಮಗುವಿನ ಬಳಿ ಹೋಗಿ ತಮ್ಮ ಬಳಿ ಇದ್ದ ಆಹಾರ ತಿನಿಸುತ್ತಾರೆ. ಅದು ಪಾರ್ಶ್ವವಾಯು ಆಘಾತಕ್ಕೊಳಗಾಗಿರುವ ಮಗುವಾಗಿರುತ್ತದೆ. ಊಟ ಮಾಡಿಸಿ ನಂತರ ನೀರನ್ನೂ ಕುಡಿಸುತ್ತಾರೆ. ಘಟನೆಯು ಭಾರತೀಯ ಸೇನೆಯ ಮಾನವೀಯ ಮುಖವನ್ನು ಬಿಂಬಿಸಿದೆ. ಕಾಶ್ಮೀರದಲ್ಲಿ ಸ್ಥಳೀಯರ ಮೇಲೆ ಭಾರತೀಯ ಸೈನಿಕರು ದೌರ್ಜನ್ಯ ಎಸಗುತ್ತಾರೆಂಬ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಇಂಥ ಮಾನವೀಯ ಘಟನೆಗಳು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಸೈನಿಕರ ಬಗ್ಗೆ ಕಾಶ್ಮೀರಿಗಳಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬಹುದು. ಘಟನೆಯ ಕುರಿತಾಗಿ ಪ್ರತಿಕ್ರಿಯೇ ನೀಡಿರುವ ಅವರು ‘ನಾನು ಮಧ್ಯಾಹ್ನದ ಊಟ ಸೇವಿಸುತ್ತಿದ್ದೆ. ಅದೇ ವೇಳೆ ಹಸಿವಿನಿಂದ ಕುಳಿತಿದ್ದ ಬಾಲಕನನ್ನು ನೋಡಿದೆ. ಆತನನ್ನು ನೋಡಿ ಬಹಳ ನೋವಾಯ್ತು ಹೀಗಾಗಿ ನನ್ನ ಊಟವನ್ನು ಬಾಲಕನಿಗೆ ನೀಡಿದೆ. ಆದರೆ ಪಾರ್ಶ್ವವಾಯು ಪೀಡಿತನಾಗಿದ್ದ ಆತನಿಗೆ ಊಟ ಮಾಡಲು ಆಗಲಿಲ್ಲ. ಹೀಗಾಗಿ ನಾನೇ ಆತನಿಗೆ ಊಟ ಮಾಡಿಸಿ, ನೀರು ಕೊಟ್ಟೆ. ಆ ವೇಳೆ ವಿಡಿಯೋ ಚಿತ್ರೀಕರಿಸಿದ್ದಾರೆ’ ಎಂದಿದ್ದಾರೆ. ಇನ್ನೂ ಇದರ ಟ್ವೀಟ್ ನಲ್ಲಿ ಮೆಚ್ಚುಗೆ ಮಳೆಯೇ ಶುರುದಿದ್ದು, ಶೌರ್ಯ ಮತ್ತು ಸಹಾನುಭೂತಿ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಬರೆದಿದ್ದಾರೆ. ಈ ವೀಡಿಯೋವನ್ನು CRPF ರೀಟ್ವೀಟ್ ಮಾಡುತ್ತಾ ‘ಮನುಷ್ಯರನ್ನು ಮನುಷ್ಯರನ್ನಾಗಿಸುವ ಧರ್ಮವನ್ನು ಪಾಲಿಸಬೇಕು’ ಎನ್ನುವ ಶ್ರೀ ಗೋಪಾಲದಾಸ್ ನೀರಜ್ ರವರ ಮಾತನ್ನು ಬರೆದಿದ್ದಾರೆ.

Also read: ತನ್ನ ಮದುವೆಯ ಉಡುಗೊರೆ ಹಣವೆಲ್ಲವನ್ನು ಹುತಾತ್ಮರಾದ ಯೋಧರಿಗೆ ನೀಡಲು ಸಿದ್ದರಾದ ನವಜೋಡಿ; ಇವರ ನಿರ್ಧಾರ ಇಡಿ ದೇಶಕ್ಕೆ ಮಾದರಿ ಅಲ್ವ??