ಸೋಲು ಗೆಲುವಿನ ರಹದಾರಿ

0
625

ಸೋಲು, ವೈಫಲ್ಯ ಯಶಸ್ಸಿನ ರಹದಾರಿ ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಯಾಕೆಂದರೆ ನಾನೂ ಸೇರಿದಂತೆ ಎಲ್ಲರೂ ಗೆಲ್ಲಲ್ಲೆಂದು ಸ್ಪರ್ದೆಯಲ್ಲಿ ಭಾಗವಹಿತ್ತೇವೆ. ಸೋತರೆ, ಅವಮಾನವಾದರೆ ನಾನು ಅನರ್ಹ, ಸೋತೆನೆಂದು ಕೊರಗುತ್ತೇವೆ. ಮತ್ತೆಂದೂ ಸ್ಪರ್ಧಿಸಲು ಹೋಗುವುದಿಲ್ಲ, ಐಬಿಎಂನ ಅಧ್ಯಕ್ಷ ಹಾಗೂ ಸಿಇಓ ಆಗಿದ್ದಂತಹ ಥಾಮಸ್ ಜಾನ್ ವ್ಯಾಟ್ಸನ್ ಹೇಳುತ್ತಾರೆ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ನಿಮ್ಮ ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿ ಎಂದು.

ಸೋತು ಗೆದ್ದ ಕತೆ: ನಾವೆಲ್ಲ ಅಬ್ರಹಂ ಲಿಂಕನ್ ಅವರ ಹೆಸರನ್ನು ಕೇಳಿದ್ದೇವೆ.ಆದರೆ ಅವರ ಸೋಲಿನ ಕತೆಯನ್ನ ಕೇಳಿಲ್ಲ. ಲಿಂಕನ್ ತನ್ನ 21ನೇ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡರು. ಮರುವರ್ಷವೇ ಶಾಸಕ ಸಭೆಗೆ ಸ್ಪರ್ಧಿಸಿ ಸೋತರು. ನಂತರ 24ನೇ ವಯಸ್ಸಿನಲ್ಲಿ ಪುನಃ ವ್ಯಾಪಾರಕ್ಕೆ ಕೈ ಹಾಕಿ ನಷ್ಟ ಅನುಭವಿಸಿದರು. 26ನೇ ವಯಸ್ಸಿನಲ್ಲಿ ಜೀವಂತಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೇಯಸಿಯ ಅಕಾಲಿಕ ಮರಣದಿಂದಾಗಿ ಜರ್ಝರಿತರಾದರು. ಆಮೇಲೆ 45ನೇ ವರ್ಷದಲ್ಲಿ ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ದಯನೀಯವಾಗಿ ಪರಾಭವಗೊಂಡರು. ನಲವತ್ತೊಂಬತ್ತನೆ ವಯಸ್ಸಿನಲ್ಲಿ ಪುನಃ ಸೆನೆಟ್ ಚುನಾವಣೆಗೆ ನಿಂತು ಸೋತರು. ಇದಾಗಿ ನಾಲ್ಕೇ ವರ್ಷದಲ್ಲಿ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಆ ವ್ಯಕ್ತಿಯ ಹೆಸರು ಅಬ್ರಹಂ ಲಿಂಕನ್.

ಲಿಂಕನ್ ಜಾಗದಲ್ಲಿ ನಾವಿದ್ದರೆ ಜೀವನದಿಂದಲೇ ದೂರವಾಗಿಬಿಡುತ್ತಿದ್ದೆವು.ಆದರೆ ಅವರು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ವಿಶ್ವವೇ ಬೆರಗಾಗುವಂತೆ ಅಮೆರಿಕದ ಅಧ್ಯಕ್ಷರಾಗಿ ಮನ್ನಣೆ ಗಳಿಸಿದರು. ಹೀಗೆ ಎಲ್ಲ ಯಶೋಗಾದೆಯೂ ಒಂದಿಲ್ಲೊಂದು ರೀತಿಯಲ್ಲಿ ಮಹಾನ್ ವೈಫಲ್ಯಗಳ ಕತೆಯೂ ಆಗಿರುತ್ತದೆ. ಜೀವನದಲ್ಲಿ ಅಪಜಯ, ಹಿನ್ನಡೆ ಎಂಬುದು ಮಾಮೂಲು. ಅಸರಿಂದ ಕುಗ್ಗಬೇಕಿಲ್ಲ. ಬದಲಾಗಿ ಆ ಸಮಯದಲ್ಲಿ ನಿಮ್ಮನ್ನು ನೀವು ಕೇಳಿಕೊಳ್ಳಿ, ಈ ಅನುಭವದಿಂದ ನಾನು ಕಲಿತಿದ್ದೇನು? ಆಗಲೇ ನಿಮಗೆ ಪ್ರತಿ ಸೋಲು ಕೂಡ ಜಯಕ್ಕೆ ಸೋಪಾನವಾದಿತು.