ರಕ್ತ ಹೀರೋ ತಿಗಣೆ ಕಾಟದಿಂದ ಮುಕ್ತಿ ಪಡೆಯಬೇಕೆ..? ನಾವು ಹೇಳಿದಂತೆ ಮಾಡಿ ತಿಗಣೆ ಕಾಟದಿಂದ ಮುಕ್ತಿ ಪಡೆಯಬಹುದು..!!

1
4684

ಬಹುತೇಕ ಮನೆಗಳಲ್ಲಿ ಕಂಡು ಬರುವ ಅತಿದೊಡ್ಡ ಸಮಸ್ಯೆಯೆಂದರೆ ತಿಗಣೆ ಕಾಟ. ಹಾಸಿಗೆಯನ್ನು ಕ್ಲೀನ್‌ ಆಗಿ ಇಟ್ಟಿರದೇ ಇದ್ದರೆ, ಅಥವಾ ತುಂಬಾ ದಿನಗಳವರೆಗೆ ಬಿಸಿಲಿಗೆ ಹಾಕದೇ ಇದ್ದರೆ ತಿಗಣೆ ಕಾಟ ಆರಂಬವಾಗುತ್ತದೆ. ಈರೀತಿಯಾಗಿ ಹುಟ್ಟಿಕೊಂಡ ತಿಗಣೆಗಳು ಬೆಡ್‌ನಲ್ಲಿ ಸೇರಿ, ಮೈಯನ್ನು ಕಚ್ಚಿ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಹಾನಿಕಾರಕ ಕೀಟವನ್ನು ಹೊಡೆದೋಡಿಸುವುದು ಹೇಗೆ ಎಂಬ ಕುರಿತು ಇಲ್ಲಿದೆ ಕೆಲವೊಂದು ಟಿಪ್ಸ್.

  • ತಿಗಣೆಗೆ ರಾಸಾಯನಿಕ ಬಳಸುವುದರಿಂಂದ ಅದು ನಮ್ಮ ದೇಹ ಸೇರುವ ಸಾಧ್ಯತೆ ಇರುತ್ತದೆ. ಹೀಗೆ ದುಬಾರಿ ರಾಸಾಯನಿಕ ವಿಷವನ್ನು ತಿಗಣೆ ಕೊಲ್ಲುವ ಬದಲಾಗಿ ಆಲ್ಕೋಹಾಲ್ ಬಳಸಿ. ತಿಗಣೆ ಕಂಡಲ್ಲೆಲ್ಲ ಆಲ್ಕೋಹಾಲ್ ಸಿಂಪಡಿಸುತ್ತಾ ಹೋಗಿ.

  • ಹಾಸಿಗೆಯ ಒಳಭಾಗವನ್ನು ಹೊಕ್ಕ ತಿಗಣೆಗಳನ್ನು ಹೊರತೆಗೆಯುವುದು ಭಾರೀ ಕಷ್ಟಕರ ಕೆಲಸ. ಏಕೆಂದರೆ ಒಳಗಣ ಹತ್ತಿ ಅಥವಾ ಸ್ಪಂಜುಗಳಲ್ಲಿ ಮನೆಮಾಡಿಕೊಂಡಿರುವ ಇವುಗಳ ಬಳಿ ತಲುಪುವುದೇ ಕಷ್ಟ. ಹೊದಿಕೆ, ಬೆಡ್ ಶೀಟ್ ಮೊದಲಾದವುಗಳನ್ನು ನೇರವಾಗಿ ಒಗೆಯಲು ಹಾಕಿರಿ. ಬಳಿಕ ಇವುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಇಡಿಯ ದಿನದ ಬಿಸಿಲಿನಲ್ಲಿ ಆಮ್ಲಜನಕವಿಲ್ಲದೇ ಎಲ್ಲಾ ತಿಗಣೆಗಳು ಒಳಗೇ ಸಾಯುತ್ತವೆ.
  • ಪುದೀನ ಮತ್ತು ಕರಿಬೇವಿನ ಎಲೆಗಳನ್ನು ಕುಟ್ಟಿ ತಿಗಣೆ ಇರುವ ಜಾಗದಲ್ಲಿ ಇಡಿ.
  • ಕೆಲವು ಹನಿ ನೀಲಗಿರಿಯನ್ನು ತಿಗಣೆ ಮೇಲೆ ಹಾಕಿ. ನೀಲಗಿರಿ, ರೋಸ್‌ಮೆರಿ, ಲ್ಯಾವೆಂಡರ್‌ ಸ್ಪ್ರೇ ಮಾಡುವುದರಿಂದ ಇದರ ವಾಸನೆಗೆ ತಿಗಣೆ ದೂರವಾಗುತ್ತವೆ.

  • ಮನೆಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಇದ್ದಲ್ಲಿ ತಿಗಣೆ ಮತ್ತು ಅವುಗಳ ಮೊಟ್ಟೆ ಎರಡನ್ನೂ ನಿವಾರಿಸಬಹುದು. ವ್ಯಾಕ್ಯೂಮ್ ಬ್ಯಾಗನ್ನು ಪ್ಲಾಸ್ಟಿಕ್ ಬ್ಯಾಗಲ್ಲಿ ಸೀಲ್ ಮಾಡಿ ಸರಿಯಾಗಿ ಮನೆಯಿಂದ ಆದಷ್ಟೂ ದೂರ ಎಸೆಯಿರಿ.
  • ತಿಗಣೆಗಳ ಅಡ್ಡದ ಮೇಲೆ ಅಥವಾ ಸುತ್ತಲೂ ಕೀಟನಾಶಕ ಅಂಶವಿರುವ ಚೋಕ್ ತೆಗೆದುಕೊಂಡು ಗೋಡೆಗಳಲ್ಲಿ ಮತ್ತು ಮಂಚಾಟ ಸುತ್ತಲೂ ನೆಲದ ಮೇಲೆ ಗೆರೆ ಎಳೆಯಿರಿ. ಚೋಕ್ ಲಭ್ಯವಿಲ್ಲದೆ ಇದ್ದಲ್ಲಿ ಬೇಕಿಂಗ್ ಸೋಡಾ ಕೂಡ ಬಳಸಬಹುದು.
  • ಕರ್ಪುರಾ & ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ sprinkle bottle ನಲ್ಲಿ ಹಾಕಿ ಸಿಂಪಡಿಸಿ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ .
  • ತಿಗಣೆಗಳ ಕಾಟ ನೀವು ಎಣಿಸಿದ್ದಕ್ಕಿಂತಲೂ ಅತಿ ಹೆಚ್ಚಾಗಿದ್ದರೆ ವೃತ್ತಿಪರರ ಸಲಹೆ ಪಡೆಯುವುದು ಉತ್ತಮ. ಇದಕ್ಕಾಗಿ ಕೊಂಚ ವೆಚ್ಚ ವ್ಯಯವಾದರೂ ಉತ್ತಮ ಫಲಿತಾಂಶ ಸಿಗುತ್ತದೆ.