ಕೂದಲಿನ ಶಕ್ತಿ ಹೆಚ್ಚಿಸಿಕೊಳ್ಳುವುದರ ಜೊತೆ ಉದ್ದ ಕೂದಲು ನಿಮ್ಮದಾಗಿಸಿಕೊಳ್ಳಿ..

0
1945

ಇವತ್ತಿನ ವೇಗದ ಜಗತ್ತಿನಲ್ಲಿ, ಸಮಯದ ಅಭಾವದಿಂದ ಎಲ್ಲವೂ ಅವಸರದಲ್ಲಿ ಆಗಬೇಕೆನ್ನುವ ತವಕ. ಅಂತೆಯೇ ಜೀವನ ಗತಿಯಲ್ಲಿನ ವ್ಯತ್ಯಾಸ ಕೂಡ ಗಮನಿಸಲಾಗುತ್ತಿಲ್ಲ.ಹಿಂದಿನ ದಿನಗಳಲ್ಲಿ ವಾರದಲ್ಲಿ ಎರಡರಿಂದ ಮೂರು ದಿನವಾದರೂ ಕೂದಲಿಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡುತ್ತಾ ಇದ್ದರು. ಆಗ ಮಹಿಳೆಯರ ಕೂದಲು ದಷ್ಟಪುಷ್ಟವಾಗಿ ಉದ್ದಗೆ ಇರುತ್ತಿತ್ತು. ಇಂದು ಕೂದಲು ಕೂಡ ಸಣ್ಣದಾಗಿದೆ ಮತ್ತು ಎಣ್ಣೆ ಹಚ್ಚಿಕೊಂಡು ಕುಳಿತುಕೊಳ್ಳಲು ಸಮಯವೂ ಇಲ್ಲ. ಇದರಿಂದಾಗಿಯೇ ಇರುವ ಕೂದಲು ಕೂಡ ಉದುರಲು ಆರಂಭವಾಗಿದೆ.

ಕಲುಷಿತ ವಾತಾವರಣ ಹಾಗೂ ಅನಾರೋಗ್ಯಕರ ಆಹಾರ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಕೂದಲು ಉದುರುವುದರೊಂದಿಗೆ ಕೂದಲು ತುಂಡಾಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದು.ಬಿಡುವಿಲ್ಲದ ಕೆಲಸದ ನಡುವೆಯೂ ಕೂದಲಿನ ಆರೈಕೆ ಮಾಡುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ಕೂದಲು ಉದುರಿ ಹೋದರೆ ಮತ್ತೆ ಬೆಳೆಯಲು ತುಂಬಾ ಕಷ್ಟವಾಗುವುದು.

ಇಲ್ಲಿ ನಾವು ಹೇಳುವ ಕೆಲವೊಂದು ಮನೆ ಮದ್ದು ಉಪಾಯಗಳನ್ನು ಬಳಸಿ ಕೂದಲಿನ ಶಕ್ತಿ ಹೆಚ್ಚಿಸಿಕೊಳ್ಳುವುದರ ಜೊತೆ ಉದ್ದ ಕೂದಲು ನಿಮ್ಮದಾಗಿಸಿಕೊಳ್ಳಿ.

ವಿಧಾನ 1 :
1) 1-2 ಟೀ ಚಮಚ ಶುಂಠಿ ಪೇಸ್ಟ್ ರಸವನ್ನು
2) ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಜೊತೆ ಮಿಶ್ರಣ ಮಾಡಿ
3) ಕೂದಲಿನ ಬೇರಿಗೆ ಹಚ್ಚಿ 1 ಘಂಟೆ ನಂತರ ತಲೆ ಸ್ನಾನ ಮಾಡಿ

Image result for teaspoon ginger paste juice 2) Mix it with olive oil or coconut oil

ವಿಧಾನ 2 :
1) 1-2 ಟೀ ಚಮಚ ಶುಂಠಿ ಪೇಸ್ಟ್ ರಸವನ್ನು
2) ಲೋಳೆರಸ ಒಟ್ಟಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ನಯವಾದ ಮತ್ತು ಮೃದುವಾದ ಕೂದಲು ನಿಮ್ಮದಾಗಿಸಿಕೊಳ್ಳಬಹುದು.

Related image

ವಿಧಾನ 3)
1) 1-2 ಟೀ ಚಮಚ ಶುಂಠಿ ಪೇಸ್ಟ್ ರಸವನ್ನು
2) 1 ಲಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ ಕೂದಲಿನ ಬೇರಿಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆ ಮಾಡಬಹುದು.

Image result for ginger with lemon

ವಿಧಾನ 4)
1) ಶುಂಠಿ ಪೇಸ್ಟ್ ರಸವನ್ನು ತುಳಸಿ ಎಳೆಯ ರಸದೊಂದಿಗೆ ಮಿಶ್ರಣ ಮಾಡಿ
2) ಈ ಮಿಶ್ರಣವನ್ನು ಕೊಬ್ಬರಿ ಎಣ್ಣೆ ಮತ್ತು ಸೌತೆಕಾಯಿ ರಸದೊಂದಿಗೆ ಸೇರಿಸಿ ತಲೆಗೆ ಹಚ್ಚಿ 1 ಘಂಟೆ ನಂತರ ತಲೆ ಸ್ನಾನ ಮಾಡಿದರೆ ಹಾನಿಗೊಳಗಾದ ಕೂದಲನ್ನು ದುರಸ್ತಿ ಮಾಡಿ ಕೂದಲಿನ ಬೆಳವಣಿಗೆಗೆ ಸಹಾಯಕಾರಿಯಾಗಿರುತ್ತದೆ.

Related image

ವಿಧಾನ 5)
1 ) ಶುಂಠಿ ಪೇಸ್ಟ್ ರಸ ಮತ್ತು ಬೆಳ್ಳುಳ್ಳಿ ರಸವನ್ನು ಮಿಶ್ರಣ ಮಾಡಿ
2) ತೆಂಗಿನ ಎಣ್ಣೆ ಒಟ್ಟಿಗೆ ಬೆರೆಸಿ
3) ನಂತರ 1 ಟೀ ಚಮಚ ಜೇನುತುಪ್ಪ ಹಾಕಿ, ತಲೆಗೆ ಹಚ್ಚಿ 30 ನಿಮಿಷಗಳ ನಂತರ ಸ್ನಾನ ಮಾಡಿ, ಕೂದಲಿನ ಬಳವಣಿಗೆಗೆ ಈ ವಿಧಾನ ಉಪಯೋಗಕಾರಿ.Related image