ಟೋಲ್-ಗಳಲ್ಲಿ ಉದ್ದದ ಕ್ಯೂ ಇರುವಾಗ ಕ್ಯಾಶ್ ಮೂಲಕ ಹಣ ಪಾವತಿಸಲು ಮುಂದಾದರೆ ಬೀಳುತ್ತೆ ಭಾರಿ ದಂಡ!! ಇನ್ಹೇಗೆ ಪಾವತಿಸಬೇಕು ಅಂತ ಇಲ್ಲಿ ಓದಿ!!

0
187

ಟೋಲ್‌ ಗೇಟ್ -ಗಳಲ್ಲಿ ಹಣ ಪಾವತಿ ಮಾಡುವುದಕ್ಕೆ ಕಿಲೋಮೀಟರ್ ವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಟ್ರಾಪಿಕ್ ಜಾಮ್ ಕಡಿತ ಗೊಳಿಸಲು ಹೊಸ ವ್ಯವಸ್ಥೆಯನ್ನು ತಂದಿರುವ ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಮೂಲಕ ಆನ್ಲೈನ್ ನಲ್ಲಿ ಹಣ ಪಾವತಿ ಮಾಡದೆ ನಗದನ್ನು ನೀಡುವ ವಾಹನ ಮಾಲೀಕರಿಗೆ ಹೆಚ್ಚಿನ ದಂಡ ಬೀಳಲಿದೆ. ಒಂದು ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಾಸ್ಟ್‌ಟ್ಯಾಗ್ ಮೂಲಕ ಹಣ ಪಾವತಿ ಮಾಡಿದರೆ ಹಲವು ರಿಯಾಯಿತಿಯೂ ಕೂಡ ಸಿಗಲಿವೆ.

ಹೆದ್ದಾರಿ ಟೋಲ್‌ ಕೇಂದ್ರಗಳಲ್ಲಿ ನಗದು ರೂಪದಲ್ಲಿ ಸುಂಕ ಪಾವತಿಸುತ್ತಿದ್ದೀರಾ? ಹಾಗಿದ್ದರೆ ಮುಂಬರುವ ದಿನಗಳಲ್ಲಿ ನೀವು ಪಾವತಿಸುವ ಹಣದ ಮೇಲೆ ಹೆಚ್ಚುವರಿಯಾಗಿ ಶೇ.10ರಿಂದ ಶೇ.20ರಷ್ಟುಹಣವನ್ನು ಹೆಚ್ಚಾಗಿ ಕೊಡಬೇಕಾಗಿ ಬರಬಹುದು! ಏಕೆಂದರೆ ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಉದ್ದ ಕ್ಯೂ ಕಂಡುಬರುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ, ಜನರು ಫಾಸ್ಟ್‌ಟ್ಯಾಗ್‌ನತ್ತ ಹೊರಳುವಂತೆ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಟೋಲ್‌ ಕೇಂದ್ರಗಳಲ್ಲಿ ನಗದು ರೂಪದಲ್ಲಿ ಸುಂಕ ಪಾವತಿಸುವವರ ಮೇಲೆ ಶೇ.10ರಿಂದ ಶೇ.20ರಷ್ಟು ದಂಡ ಹೇರಲು ಚಿಂತನೆ ನಡೆಸಿದೆ.

ಏನಿದು ಫಾಸ್ಟ್ ಟ್ಯಾಗ್?

2014ರಿಂದ ಫಾಸ್ಟ್‌ಟ್ಯಾಗ್‌ ಸೌಲಭ್ಯ ವಾಹನಗಳಿಗೆ ಇದೆ. ವಾಹನಗಳ ಮುಂಬದಿ ಗಾಜಿನ ಮೇಲೆ ಸ್ಟಿಕ್ಕರ್‌ ರೀತಿ ಫಾಸ್ಟ್‌ಟ್ಯಾಗ್‌ ಇರುತ್ತದೆ. ಅದಕ್ಕೆ ಮುಂಚಿತವಾಗಿಯೇ ಹಣ ರೀಚಾಜ್‌ರ್‍ ಮಾಡಿಸಿಕೊಳ್ಳಬಹುದು ಅಥವಾ ಅಕೌಂಟ್‌ ಜತೆ ಲಿಂಕ್‌ ಮಾಡಿಕೊಳ್ಳಲೂಬಹುದು. ಫಾಸ್ಟ್‌ಟ್ಯಾಗ್‌ ಇರುವ ವಾಹನ ಟೋಲ್‌ ಕೇಂದ್ರ ದಾಟುತ್ತಿದ್ದಂತೆ ತನ್ನಿಂತಾನೆ ಸುಂಕ ಕಡಿತಗೊಳ್ಳುತ್ತದೆ. ಇದರಿಂದಾಗಿ ಟೋಲ್‌ ಕೇಂದ್ರಗಳಲ್ಲಿ ವಾಹನ ನಿಲ್ಲುವುದಿಲ್ಲ. ಈ ಸೌಲಭ್ಯ ಬಳಸುವವರಿಗೆ ಒಂದಿಷ್ಟು ರಿಯಾಯಿತಿಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗದು ರೂಪದಲ್ಲಿ ಟೋಲ್‌ ಪಾವತಿಸುವಾಗ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಇದರಿಂದ ವಾಹನಗಳ ಸಾಲು ಕಂಡುಬರುತ್ತದೆ.

ಇದೆಲ್ಲ ಮಾಡಿರುವುದರ ಹಿಂದೆ, ಉತ್ತಮ ಸೇವೆ ನೀಡಲು ಅದರಂತೆ ಉತ್ತಮ ಸೇವೆ ದೊರೆಯಬೇಕೆಂದರೆ ಜನ ಹಣ ಪಾವತಿ ಮಾಡಲೇ ಬೇಕು ಎಂದು ಕೇಂದ್ರ ಹೆದ್ದಾರಿ ಪ್ರಾಧಿಕಾರ ತಿಳಿಸಿದ್ದು. ವಾಹನ ಚಾಲಕರಿಗೆ ಇಂಧನ ಮತ್ತು ಸಮಯ ಎರಡು ಉಳಿತಾಯ ಮಾಡುವ ರಸ್ತೆಗಳನ್ನು ನಿರ್ಮಿಸಿ ಶುಲ್ಕ ವಸೂಲಿ ಮಾಡುವುದು ಸರ್ವೇ ಸಾಮಾನ್ಯ ಎಂದು ಹೇಳಿದ್ದಾರೆ. ಉತ್ತಮ ರಸ್ತೆಗಳು ಇಂಧನ ಮತ್ತು ಸಮಯವನ್ನು ಉಳಿಸುವುದಷ್ಟೇ ಅಲ್ಲ ಜೀವನಕ್ಕೂ ಸುರಕ್ಷೆ ನೀಡುತ್ತಿವೆ. ಉತ್ತಮ ಸೇವೆ ಬೇಕೆಂದರೆ ಅದಕ್ಕೆ ಹಣ ಕೊಡಲೇಬೇಕು ಎಂದು ಹೇಳುತ್ತಿರುವ ಸರ್ಕಾರ. ಈಗ ಮತ್ತೆ ಟೋಲ್ ಟೋಲ್‌ಗಳಲ್ಲಿ ಕ್ಯಾಷ್ ಪಾವತಿ ಮಾಡಿದರೆ ಹೆಚ್ಚುವರಿ ದಂಡ ವಸೂಲಿ ಮಾಡಲು ಸಿದ್ದತೆ ನಡೆಸಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳು ಹುಟ್ಟುತ್ತಿವೆ.