ಇನ್ಮುಂದೆ ಬೊಕ್ಕ ತಲೆ ಸಮಸ್ಯೆನೇ ಅಲ್ಲ, ಯಾಕೆ ಅಂತೀರಾ ಈ ಹೊಸ ಸಂಶೋಧನೆ ಬಗ್ಗೆ ಓದಿ, ಬೊಕ್ಕೆ ತಲೆಗೆ ಶಾಶ್ವತ ಪರಿಹಾರ ಬಂದಿದೆ!!

0
634

ತಲೆಯಲ್ಲಿ ಕೊದಲು ಇದ್ದರೇನೆ ಚಂದ ಎನ್ನುವ ಕಾಲಮಾನವಿದು, ಅದಕ್ಕಾಗಿ ಉದುರುವ ಹಾಗೂ ಉದುರಿದ ಕೂದಲುಗಳನ್ನು ಉಳಿಸಿಕೊಳ್ಳಲು, ಲಕ್ಷಾಂತರ ಹಣ ಕರ್ಚು ಮಾಡುತ್ತಿದ್ದಾರೆ. ಆದರು ಕೂಡ ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗದೇ ಕೂದಲು ಉಳಿಸಿಕೊಳ್ಳುವುದೇ ಜೀವನದಲ್ಲಿ ದೊಡ್ಡ ತಲೆ ಬಿಸಿಯಾಗಿದೆ. ಅದಕ್ಕಾಗಿ ಅಮೇರಿಕ ಕಂಪೆನಿಯೊಂದು ಬೊಕ್ಕತಲೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಹೇಳಿಕೊಂಡಿದ್ದು ಕಂಪನಿ ಹೇಳುವ ಪ್ರಕಾರ ಹಣವಿಲ್ಲದವರು ಕೂಡ ಮತ್ತೆ ಕೂದಲನ್ನು ಬೆಳಸಬಹುದು ಎಂದು ಹೇಳುತ್ತಿದೆ.

ಬೊಕ್ಕ ತೆಲೆಗೆ ಶಾಶ್ವತ ಪರಿಹಾರ?

ಹೌದು ಹೆಚ್ಚು ಕೂದಲು ಇರುವರನ್ನು ನೋಡಿದ ಜನರು ಆಕರ್ಷಣೆಗೆ ಒಳಗಾಗುವುದು ನೀಜ. ಹಾಗಂತ ಕೂದಲನ್ನು ಬೆಳಸುವ ಹಂಬಲದಲ್ಲಿರುವವರಿಗೆ ಹಲವು ಕಂಪನಿಗಳು ಔಷಧಿ, ಆಯಿಲ್ ನೀಡಿ ಪಕ್ಕಾ ಎಂದು ಹೇಳಿ ಕೊನೆಗೆ ಗ್ಯಾರಂಟಿ ಕೊಡುವುದು ಸಾಧ್ಯವಿಲ್ಲ ಎಂದು ಮೋಸ ಕೋಟ್ಯಾಂತರ ಹಣಗಳಿಸುತ್ತಿವೆ. ಇದಕ್ಕೆ ಹಲವರು ಬೇಸತ್ತು ಕೊದಲಿಲ್ಲದಿಂದರು ಹೇಗೆ ಇರೋಣ ಅಂತ ನಿರ್ಧಾರ ಮಾಡಿದ್ದಾರೆ. ಇಂತಹವರನ್ನು ಕಂಡ ಪ್ರೊಪೆಸಿಯಾ ಮತ್ತು ರೊಗೈನ್ ಎಂಬ ಕಂಪೆನಿ ಗುಡ್ ನ್ಯೂಸ್ ನೀಡಿದ್ದು, ಕೂದಲು ಉದುರುವಿಕೆ ಸಮಸ್ಯೆಗೆ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದೆ. ಆದರೆ ಇದನ್ನೇ ಕಳೆದ ದಶಕಗಳಿಂದ ಪ್ರೊಪೆಸಿಯಾ ಮತ್ತು ರೊಗೈನ್ ಕಂಪೆನಿ ಮಾರಾಟ ಮಾಡುತ್ತಿದೆ ಎಂದು ಹೇಳಿದೆ.

ಏನಿದು ಸಂಶೋಧನೆ?

ಸ್ಟೆಮ್-ಸೆಲ್ ಸಂಶೋಧನೆ ಮತ್ತು 3D ಪ್ರಿಟಿಂಗ್ ಒಳಗೊಂಡಿರುವ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದ್ದು, ಇದರಿಂದ ಬೊಕ್ಕತಲೆಯಲ್ಲಿ ಪುನಃ ಕೂದಲು ಬೆಳೆಯುವಂತೆ ಮಾಡಬಹುದಾಗಿದೆ. ಇದನ್ನೇ ಕಳೆದ ಹತ್ತು ವರ್ಷಗಳಿಂದಲೂ ನಾವು ಮಾಡುತ್ತಿರುವುದಾಗಿ ಕೂದಲು ಕಸಿ ಪರಿಣತಿ ಹೊಂದಿರುವ ಚರ್ಮರೋಗ ವೈದ್ಯ ರಾಬರ್ಟ್​ ಬರ್ನ್​ಸ್ಟೈನ್ ಹೇಳಿದ್ದಾರೆ. ಈ ಚಿಕಿತ್ಸಾ ಕ್ರಮವನ್ನು ಅನುಸರಿಸುವುದರಿಂದ ಕೂದಲು ಉದುರುವಿಕೆ ಸಮಸ್ಯೆ ದೂರವಾಗುವುದಲ್ಲದೆ, ಹೊಸ ಕೂದಲು ಬೆಳೆಯಲು ಸಹಕಾರಿ ಎಂದು ಕಂಪೆನಿ ತಿಳಿಸಿದೆ. ಇದಕ್ಕಾಗಿ ಕಂಪೆನಿಯು ತಿಂಗಳಿಗೆ 44 ಡಾಲರ್ ವೆಚ್ಚದ ಚಿಕಿತ್ಸಾ ವಿಧಾನವನ್ನು ಪರಿಚಯಿಸಿರುವುದಾಗಿ ರೊಗೈನ್ ಕಂಪೆನಿ ಹೇಳಿಕೊಂಡಿದೆ.

ಕೂದಲ ಬೆಳವಣಿಗೆಯ ಸಂಶೋಧನೆಯಲ್ಲಿ ದೇಹದ ಎಲ್ಲಾ ಭಾಗಗಳಲ್ಲೂ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ದೇಹದ ಮೇಲಿರುವ ಪ್ರೊಟೀನ್ ತಂತುಗಳ ಎಳೆಗಳು ಕೂದಲು ಒಂದಕ್ಕೊಂದು ಸುತ್ತಿಕೊಂಡಿರುವುದು ಕಂಡು ಬಂದಿದೆ. ಅದೇ ರೀತಿ ಕೂದಲು ಯಕೃತ್ತು ಅಥವಾ ಮೆದುಳಿನ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಕೂದಲು ಬೆಳೆಯುವುದು ಮುಖ್ಯವಾಗಿರಬೇಕು ಹೊರತು ಉದುರುವುದಲ್ಲ ಎಂಬುದು ಕಂಡುಕೊಳ್ಳಲಾಗಿದೆ.

ದೇಹದಲ್ಲಿ ಗಟ್ಟಿಯಾದ ಎಳೆಯನ್ನು ಉತ್ಪಾದಿಸಬಲ್ಲ, ಪ್ರತಿ ಕೂದಲು ಕೋಶಕದ ಬುಡದಲ್ಲಿ ಡರ್ಮಲ್ ಪ್ಯಾಪಿಲ್ಲೆ ಎಂದು ಕರೆಯಲ್ಪಡುವ ಸಾವಿರಾರು ಸ್ಟೆಮ್ ಸೆಲ್​ಗಳನ್ನು ಒಳಗೊಂಡಿದೆ. ಮಾನವನ ನೆತ್ತಿಯು ಸುಮಾರು 100,000 ಕೂದಲು ಕಿರುಚೀಲಗಳನ್ನು ಹೊಂದಿರುತ್ತವೆ. ಅದರಂತೆ ಬೋಳು ವ್ಯಕ್ತಿಯ ತಲೆಯ ಬುಡದಲ್ಲಿ ಇನ್ನೂ ಕೂದಲನ್ನು ಹೊಂದಿರುತ್ತವೆ. ಇಂತಹ ಪ್ಯಾಪಿಲ್ಲೆಗಳನ್ನು ಮರಳಿ ಪಡೆಯುವುದರಿಂದ ಕೂದಲನ್ನು ಬೆಳೆಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಬಡವರಿಗೂ ಅಗ್ಗ?

ಕೋಶಕದಿಂದ ಕೋಶಕ, ಬೆಸ್ಪೋಕ್ 3D ಪ್ರಿಂಟಿಂಗ್ ಸ್ಕ್ಯಾಫೋಲ್ಡ್ ಚಿಕಿತ್ಸೆಗಳು ಬಡವರಿಗೆ ದುಬಾರಿಯಾಗಿದ್ದವು. ಆದರೀಗ ವೈದ್ಯಕೀಯ ಬೆಳವಣಿಗೆ ಮತ್ತು ಹೊಸ ಸಂಶೋಧನೆಯಿಂದ ಚಿಕಿತ್ಸಾ ವೆಚ್ಚಗಳು ಕಡಿಮೆಯಾಗುವ ಸಾಧ್ಯತೆಯಿದೆ. ಇದೊಂದು ದೊಡ್ಡ ಪ್ರಗತಿಯಾಗಿದ್ದು, ಇನ್ನೂ ಅನೇಕ ಅಂಶಗಳ ಸಂಶೋಧನೆ ನಡೆಯಬೇಕಿದೆ ಎಂದು ಬರ್ನ್‌ಸ್ಟೈನ್ ಹೇಳಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಬೋಳುತಲೆಗಳು ಸಂಪೂರ್ಣ ಮಾಯವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ಕೆಲವೇ ದಿನಗಳಲ್ಲಿ ಆನ್ಲೈನ್ ಎಲ್ಲರಿಗೂ ಸಿಗಲಿದೆ ಎಂದು ಹೇಳಿದ್ದಾರೆ.