ಸೋರೆಕಾಯಿ ಇಡ್ಲಿ
ಸಾಮಗ್ರಿ: ಅಕ್ಕಿತರಿ-೨ ಕಪ್, ಮೊಸರು-೧ ಕಪ್, ಅವಲಕ್ಕಿ-೧/೪ ಕಪ್, ಸೋರೆ ತುರಿ-೨ ಕಪ್, ಉದ್ದಿನಬೇಳೆ, ಕಡ್ಲೆಬೇಳೆ: ೧ ಸ್ಪೂನ್, ಸಾಸಿವೆ -೧/೪ ಚಮಚ, ಕರಿಬೇವು-೧ ಎಸಳು, ಉಪ್ಪು-ರುಚಿಗೆ ತಕ್ಕಷ್ಟು.
ವಿಧಾನ: ನೆನೆಸಿದ ಅವಲಕ್ಕಿಗೆ ಮೊಸರು, ಸೋರೆ ಕಾಯಿತುರಿ ಸೇರಿಸಿ ಸಣ್ಣಗೆ ರುಬ್ಬಿ ಅಕ್ಕಿ ತರಿಗೆ ಸೇರಿಸಿ. ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಕರಿಬೇವು ಒಗ್ಗರಣೆ ಹಾಕಿ ಉಪ್ಪು ಹಾಕಿ ಎಲ್ಲವನ್ನೂ ಅಕ್ಕಿ ತರಿU
ಸೇರಿಸಿ ಕಲಸಿಡಿ. ೧/೨ ಗಂಟೆ ಕಳೆದ ನಂತರ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಮೃದುವಾದ ಸೋರೆಕಾಯಿ ಇಡ್ಲಿ ತುಂಬಾ ಚೆನ್ನಾಗಿರುತ್ತದೆ. ಸೋರೆ ತಿರುಳಿನಿಂದಲೂ ಮಾಡಬಹುದು.
=================================================================
ಸೋರೆಕಾಯಿ ಚಟ್ನಿ
ಸಾಮಗ್ರಿ: ಸೋರೆಕಾಯಿ-೧ ಕಪ್,
ಹಸಿಮೆಣಸಿನಕಾಯಿ-೨, ನಿಂಬೆಹಣ್ಣು-
೧/೨ ಭಾಗ, ಇಂಗು, ಸಾಸಿವೆ, ತೆಂಗಿನತುರಿ-ಸ್ವಲ್ಪ, ಹುರಿಗಡಲೆ- ೧ ಚಮಚ, ಕರಿಬೇವು-ಸ್ವಲ್ಪ.
ವಿಧಾನ: ಹಸಿಮೆಣಸಿನಕಾಯಿ, ಕರಿಬೇವನ್ನು ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ಸಣ್ಣಗೆ ಹೆಚ್ಚಿದ ಸೋರೆಕಾಯಿಯನ್ನು ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ ಎಲ್ಲಾ ಪದಾರ್ಥ ಗಳನ್ನು ಸೇರಿಸಿ ರುಬ್ಬಿ ನಂತರ ನಿಂಬೆ ರಸ ಸೇರಿಸಿ ಸಾಸಿವೆ, ಇಂಗು ಒಗ್ಗರಣೆ ಹಾಕಿ.
=================================================================
ಸೋರೆಕಾಯಿ ಮೊಸರು ಬಜ್ಜಿ
ಸಾಮಗ್ರಿ: ಸೋರೆಕಾಯಿ-೧ ಕಪ್, ಹಸಿಮೆಣಸಿನ ಕಾಯಿ-೪, ತೆಂಗಿನತುರಿ-೨ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಾಸಿವೆ-೧/೪ ಚಮಚ, ಸಂಬಾರ ಸೊಪ್ಪು (ದೊಡ್ಡಪತ್ರೆ ಸೊಪ್ಪು): ೨-೩ ಎಲ್, ಮೊಸರು-೧ ಕಪ್, ಶುಂಠಿ-೧ ತುಂಡು.
ವಿಧಾನ: ಸೋರೆಕಾಯಿಯನ್ನು ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ ನಂತರ ತೆಂಗಿನತುರಿ, ಶುಂಠಿ, ಉಪ್ಪು, ಸಂಬಾರಸೊಪ್ಪು, ಸಾಸಿವೆ ಸೇರಿಸಿ ರುಬ್ಬಿ ಮೊಸರು ಸೇರಿಸಿ ನಂತರ ಸಾಸಿವೆ ಒಗ್ಗರಣೆ ಹಾಕಿ. ರೊಟ್ಟಿ, ಚಪಾತಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿ ಯಾಗಿರುತ್ತದೆ.
=================================================================
ಸೋರೆಕಾಯಿ ಜ್ಯೂಸ್
ಸಾಮಗ್ರಿ: ಸೋರೆಕಾಯಿ ತುರಿ-೧ ಕಪ್, ನಿಂಬೆಹಣ್ಣು-೧ ಹೋಳು, ಉಪ್ಪು-ಚಿಟಿಕೆ,
ಕಾಳುಮೆಣಸಿನಪುಡಿ-೧/೪ ಚಮಚ.
ವಿಧಾನ: ಸೋರೆಕಾಯಿ ತುರಿಯನ್ನು ಮಿಕ್ಸಿಗೆ ಹಾಕಿಚಿ ರುಬ್ಬಿ ನಂತರ ಸ್ವಲ್ಪ ಸೇರಿಸಿ ಶೋಧಿಸಿಕೊಳ್ಳಿ. ನಂತರ ನಿಂಬೆರಸ, ಉಪ್ಪು, ಕಾಳುಮೆಣಸಿನಪುಡಿ ಸೇರಿಸಿ. ಇದನ್ನು ಕುಡಿಯುವುದರಿಂದ
ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ದೇಹವು ಶಕ್ತಿಯುತವಾಗುತ್ತದೆ. ನಿಂಬೆರಸದ ಬದಲಿಗೆ ಮಜ್ಜಿಗೆ ಸೇರಿಸಿಯೂ ಕುಡಿಯಬಹುದು. ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇಸಿಗೆಗೆ ತಂಪು ನೀಡುತ್ತದೆ.