ಸುಲಭವಾಗಿ ಸೂಪ್-ಗಳನ್ನ ಮಾಡೋದು ಕಲಿಯಿರಿ!!

0
1840

ಸೇಬುಹಣ್ಣಿನ ಸೂಪ್
ಸಾಮಗ್ರಿ: ಸೇಬುಹಣ್ಣು-2, ಕಾಳುಮೆಣಸಿನಪುಡಿ-1/2 ಟೀ ಚಮಚ, ಪುಡಿಮಾಡಿದ ಲವಂಗ-1/4 ಟೀ ಚಮಚ, ಉಪ್ಪು-1/4 ಟೀ ಚಮಚ, ಸಕ್ಕರೆ-1/2 ಟೀ ಚಮಚ, ಏಲಕ್ಕಿಪುಡಿ-1/4 ಟೀ ಚಮಚ, ತುಪ್ಪ-2 ಟೀ ಚಮಚ, ತುಪ್ಪದಲ್ಲಿ ಹುರಿದ ಗೋಡಂಬಿ: 8-10.
ವಿಧಾನ: ಸೇಬಿನ ಸಿಪ್ಪೆ ತೆಗೆದು ಕತ್ತರಿಸಿ ಅರೆದಿಡಿ. ಅರೆದ ಮಿಶ್ರಣಕ್ಕೆ ಸೂಪ್ ಹದಕ್ಕೆ ನೀರು ಹಾಕಿ ಕಾಳುಮೆಣÀಸಿನಪುಡಿ, ಲವಂಗದ ಪುಡಿ, ಏಲಕ್ಕಿ ಪುಡಿ, ಸಕ್ಕರೆ, ತುಪ್ಪ, ಉಪ್ಪು ಬೆರೆಸಿ ಕುದಿಸಿ.
ಒಲೆಯಿಂದ ಕೆಳಗಿಳಿಸಿ, ಸೂಪ್ ಬೌಲ್‍ಗಳಿಗೆ ಹಾಕಿ ಹುರಿದ ಗೋಡಂಬಿಗಳಿಂದ ಅಲಂಕರಿಸಿದರೆ ರುಚಿಯಾದ ಸವಿಯಾದ ಸೇಬುಹಣ್ಣಿನ ಸೂಪ್ ಸವಿಯಲು ಸಿಧ್ಧ.

ಬೀಟ್‍ರೂಟ್ ಸೂಪ್
ಸಾಮಗ್ರಿ: ಕತ್ತರಿಸಿದ ಬೀಟ್‍ರೂಟ್-1 ಕಪ್, ಶುಂಠಿ ತುರಿ-1/2 ಟೀ ಚಮಚ, ಬೆಳ್ಳುಳ್ಳಿ-1 ಎಸಳು, ನಿಂಬೆರಸ-1 ಟೀ ಚಮಚ, ಕತ್ತರಿಸಿದ ಕೊತ್ತಂಬರಿಸೊಪ್ಪು-2 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು,
ಸಕ್ಕರೆ-1/2 ಟೀ ಚಮಚ, ಕಾರ್ನ್‍ಫ್ಲೋರ್-2 ಟೀ ಚಮಚ, ಬೆಣ್ಣೆ-3 ಟೀ ಚಮಚ.ವಿಧಾನ: ಬೀಟ್‍ರೂಟ್ ಹೋಳುಗಳನ್ನು ಬೇಯಿಸಿ ತಣಿಸಿ. 1 ಕಪ್ ನೀರಿನಲ್ಲಿ ಕಾರ್ನ್‍ಫ್ಲೋರ್ ಮಿಕ್ಸ್ ಮಾಡಿಟ್ಟುಕೊಳ್ಳಿ.. ಬೇಯಿಸಿದ ಹೋಳುಗಳಿಗೆ, ಶುಂಠಿತುರಿ, ಬೆಳ್ಳುಳ್ಳಿ ಎಸಳು, ನಿಂಬೆರಸ, ಕೊತ್ತಂಬರಿ ಸೊಪ್ಪು, ಉಪ್ಪು, ಸಕ್ಕರೆ ಬೆರೆಸಿ ನುಣ್ಣಗೆ ಅರೆದಿಟ್ಟುಕೊಳ್ಳಿ. ಅರೆದಿಟ್ಟ ಮಿಶ್ರಣಕ್ಕೆ ನೀರು ಬೆರೆಸಿ ಕುದಿಸಿ, ಮಿಕ್ಸ್ ಮಾಡಿದ ಕಾರ್ನ್‍ಫ್ಲೋರ್ ಬೆರೆಸಿ ಚೆನ್ನಾಗಿ ಕಲಕಿ, ಒಲೆಯಿಂದ ಕೆಳಗಿಳಿಸಿ ಸೂಪ್ ಬೌಲ್‍ಗೆ ಹಾಕಿ. ಬಿಸಿಯಿರುವಾಗಲೇ ಬೆಣ್ಣೆ ಸೇರಿಸಿ ಸವಿಯಿರಿ.

ಹೆಸರುಕಾಳಿನ ಸೂಪ್

ಸಾಮಗ್ರಿ: ಹೆಸರುಕಾಳು-1 ಕಪ್, ಕತ್ತರಿಸಿದ ಈರುಳ್ಳಿ–1/2
ಕಪ್, ಕತ್ತರಿಸಿದ ಟೊಮೆಟೊ-1/2 ಕಪ್, ಕಾಳುಮೆಣಸಿನ
ಪುಡಿ-1/4 ಟೀ ಚಮಚ, ಶುಂಠಿ ತುರಿ-1/4 ಟೀ ಚಮಚ, ಜೀರಿಗೆ ಪುಡಿ-1/2 ಟೀ ಚಮಚ, ಬೆಣ್ಣೆ-2 ಟೀ ಚಮಚ, ಸಕ್ಕರೆ-1/2 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ವಿಧಾನ: ಹೆಸರುಕಾಳುಗಳನ್ನು 6 ಗಂಟೆ ನೆನೆಸಿ ನೀರು ಬಸಿದು ಮಿದುವಾಗಿ ಬೇಯಿಸಿ. ಬೇಯಿಸಿದ ಹೆಸರುಕಾಳಿಗೆ, ಈರುಳ್ಳಿ, ಟೊಮೆಟೊ, ಕಾಳುಮೆಣಸಿನಪುಡಿ, ಶುಂಠಿ ತುರಿ, ಜೀರಿಗೆಪುಡಿ, ಸಕ್ಕರೆ, ಉಪ್ಪು ಬೆರೆಸಿ ನುಣ್ಣಗೆ ಅರೆದಿಟ್ಟುಕೊಳ್ಳಿ. ಅರೆದಿರಿಸಿದ ಮಿಶ್ರಣಕ್ಕೆ, ಸೂಪ್ ಹದಕ್ಕೆ ನೀರು ಬೆರೆಸಿ, ಕುದಿಸಿ, ಒಲೆಯಿಂದ ಕೆಳಗಿಳಿಸಿ, ಸೂಪ್ ಬೌಲ್‍ಗೆ ಹಾಕಿ ಬಿಸಿಯಿರುವಾಗಲೇ ಬೆಣ್ಣೆ ಸೇರಿಸಿ. ರುಚಿಯಾದ, ಆರೋಗ್ಯಕರವಾದ ಹೆಸರುಕಾಳಿನ ಸೂಪ್ ರೆಡಿ.