ಸೋಯಾಬೀನ್ ಕಬಾಬ್ ತಯಾರಿಸುವ ವಿಧಾನ ನಿಮಗಾಗಿ ಇಲ್ಲಿದೆ ನೋಡಿ..

0
792

ಊಟಕ್ಕಿಂತಲೂ ಜನರು ಬಾಯಿರುಚಿ ಖಾದ್ಯಗಳಿಗೆ ಹೆಚ್ಚು ಮಾರು ಹೋಗುತ್ತಾರೆ. ಆ ಕಾರಣಕ್ಕೆ ನಗರದ ಸರ್ಕಲ್-ಗಳಲ್ಲಿ ಮತ್ತು ಬಸ್ ಸ್ಟಾಪ್ ಕಾಲೇಜ್ ಎದುರುಗಡೆ ಹೀಗೆ ಎಲ್ಲ ಕಡೆಗಳಲ್ಲಿ ಸಿಗುವ ಸಂಜೆ ತಿನುಸ್ಸುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೆಲವೊಬ್ಬರು ಸಂಜೆ ಮನೆಯಲ್ಲಿಯೇ ಹಲಾವಾರು ತರಹದ ಕರಿದ ತಿನುಸ್ಸುಗಳನ್ನು ಸಂಜೆಗೆ ತಯಾರಿಸುತ್ತಾರೆ. ಆದರೆ ಅದು ಮನೆಯ ಮಂದಿಗೆಲ್ಲ ಇಷ್ಟವಾಗೋದಿಲ್ಲ ಕೆಲವೊಂದು ಸಾರಿ ಇಷ್ಟವಾದರು ಮಾಡಿದ್ದೆ ಮಾಡುವ ಖಾದ್ಯವಾಗಿದ್ದರಿಂದ ಎಲ್ಲರೂ ಇಷ್ಟ ಪಡುವುದಿಲ್ಲ ಹಾಗಾದರೆ ಎಲ್ಲರು ಇಷ್ಟಪಡುವ ಆರೋಗ್ಯಕ್ಕೆ ಹಿತವಾದ ಸೋಯಾ ಬೀನ್ ಕಬಾಬ್ ತಯಾರಿಸುವ ವಿಧಾನ ನಿಮಗಾಗಿ ಇಲ್ಲಿದೆ ನೋಡಿ.

Also read: ಮಟನ್ ಗಿಂತಲೂ ಹೆಚ್ಚು ರುಚಿಯಾದ ಚೀಸ್ ಚಿಕನ್ ಕಬಾಬ್ ಮಾಡುವ ವಿಧಾನ: ಒಮ್ಮೆ ನೀವು ಟ್ರೈ ಮಾಡಿ ನೋಡಿ..!!

ಬೇಕಾಗುವ ಪದಾರ್ಥಗಳು:

  • 10-15 ಸೋಯಾ ಬೀನ್.
  • ಒಂದು ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್.
  • ನಾಲ್ಕು ಹಸಿ ಮೆಣಸಿನಕಾಯಿ.
  • ಒಂದು ಈರುಳ್ಳಿ.
  • ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು.
  • ಅರ್ಧ ಚಮಚ ಖಾರದ ಪುಡಿ.
  • ಒಂದು ಚಮಚ ಗರಂ ಮಸಾಲ.
  • ಅರ್ಧ ಚಮಚ ಕರಿ ಮೆಣಸಿನ ಪುಡಿ.
  • ಕರಿಯಲು ಬೇಕಾಗುವಷ್ಟು ಎಣ್ಣೆ.
  • 3 ಚಮಚ ಮೊಸರು.
  • ರುಚಿಗೆ ತಕ್ಕ ಉಪ್ಪು.ತಯಾರಿಸುವ ವಿಧಾನ:
  • ಸೋಯಾ ಬೀನ್ ಅನ್ನು 10 ನಿಮಿಷ ಬಿಸಿ ನೀರಿನಲ್ಲಿ ನೆನೆ ಹಾಕಿ.
  • ನಂತರ ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ.
  • ಹಸಿ ಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ.
  • ನಂತರ ಪೇಸ್ಟ್-ನ್ನು ಸೋಯಾ ಬೀನ್ ಗೆ ಹಾಕಿ, ಖಾರದ ಪುಡಿ, ಗರಂ ಮಸಾಲ, ಮೊಸರು, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಕಾಲ ಇಡಿ.
  • ನಂತರ ಪಾತ್ರೆ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸೋಯಾ ಬೀನ್ ಅನ್ನು 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಸ್ನ್ಯಾಕ್ಸ್ ರೆಡಿ.
  • ಇದನ್ನು ಸ್ವಲ್ಪ ಸಾಸ್ ಇಲ್ಲ ಕೊಬ್ರಿ ಚಟ್ನಿ ಜತಗೆ ಸವಿದರೆ ರುಚಿಯಾಗಿರುತ್ತೆ