ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣಗಳು..!

0
888

• ಕೆಲವು ವಿಜ್ನಾನಿಗಳ ಪ್ರಕಾರ ನಾವು ಬಳಸುವ ಇಂದನಗಳಲ್ಲಿರುವ ರಾಸಾಯನಿಕಗಳಿಂದ ಆಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿ ಬೇಕಾದ ಕೀಟಗಳನ್ನು ಕೊಲ್ಲುತ್ತದೆಯಂತೆ. ಬೆಳೆದ ಗುಬ್ಬಚ್ಚಿಗಳಿಗೆ ದವಸ ದಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ ಕೀಟಗಳೇ ಬೇಕು. ಈ ಕೀಟಗಳನ್ನು ಸೀಸರಹಿತ ಪೆಟ್ರೋಲಿನ ಹೊಗೆ ಸಾಯಿಸಿಬಿಡುವುದರಿಂದ ಮರಿಗಳು ಪೌಶ್ಟಿಕ ಆಹಾರವಿಲ್ಲದೆ ಸಾಯುತ್ತಿವೆ ಎಂಬುದು ಈ ವಾದದ ಸಾರಾಂಶ.

• ಮರ ಗಿಡಗಳು ಬೇರು ಕಳೆದುಕೊಳ್ಳುತ್ತಿವೆ. ನೆರಳು ದೂರವಾಗುತ್ತಿದೆ. ಎಲ್ಲಿಯೂ ತೋಟಗಳಿಲ್ಲ, ಅಂಗಳವಿರುವ ಮನೆಗಳಂತು ಕಾಣಿಸೋದೆ ಇಲ್ಲ. ಮನೆ-ಕಚೇರಿ ವಿನ್ಯಾಸದಲ್ಲಿ ಬದಲಾಗಿ, ಬಹುಮಹಡಿ ಬೆಟ್ಟದಂತಹ ಕಾಂಕ್ರಿಟ್ ಕಾಡು ಆದ ಮೇಲೆ ನಮ್ಮ ಗುಬ್ಬಚ್ಚಿಗಳ ಗೂಡಿಗೆ ಜಾಗವೇ ಇಲ್ಲದಂತಾಗಿದೆ.
• ನಗರಗಳ ಮಾತಿರಲಿ, ಹಳ್ಳಿ ಹಳ್ಳಿಗಳಲ್ಲು ಗುಬ್ಬಚ್ಚಿಗಳು ಹಾರಾಡೋದು ಕಾಣ್ಸೋದು ಕಮ್ಮಿ. ಬಡಾವಣೆಗಳಲ್ಲಿ ಸಾಲಾಗಿ ತಲೆ ಎತ್ತಿರುವ ಪೆÇೀನ್ ಗೋಪುರಗಳು ಸೂಸುವ ಕಾಣದ ವಿಕಿರಣಗಳ ಏಟಿಗೆ ತತ್ತರಿಸಿ ಹೋಗಿವೆ

• ಕೇವಲ ಇದೊಂದೇ ಕಾರಣದಿಂದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿದೆ ಎಂದು ಹೇಳುವುದು ಕಶ್ಟ. ಕಳೆದ ದಶಕದಿಂದ ಬದಲಾಗುತ್ತಿರುವ ನಮ್ಮ ಜೀವನ ಶೈಲಿಯ ಹಿನ್ನೆಲೆಯಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿರಬಹುದು
• ಕೆಲವು ಹಳ್ಳಿಗಳಲ್ಲಿ ಅಷ್ಟೋ ಇಷ್ಟೋ ನಡೆಯುತ್ತಿರುವ ಒಕ್ಕಲಿನಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ. ಹೊಲಗಳಲ್ಲಿ ಗುಬ್ಬಚ್ಚಿಗಳ ಆಹಾರವಾಗಿದ್ದ ಹುಳಗಳು ಕಡಿಮೆಯಾಗಿವೆ. ಹಳ್ಳಿಯ ಮನೆಗಳಲ್ಲಿ ಆಹಾರವೂ ಕಡಿಮೆಯಾಗಿದೆ. ಆಹಾರದಾನ್ಯ ಬೆಳೆಯುವ ಪ್ರಮಾಣವೂ ಕಡಿಮೆಯಾದ ಬಳಿಕ ಕಾಳು ಚೆಲ್ಲುವ ಔದಾರ್ಯವಂತೂ ಇಲ್ಲವೇ ಇಲ್ಲ. ಗುಬ್ಬಚ್ಚಿಗಳಿಗೆ ದಿನನಿತ್ಯದ ಆಹಾರದ ಕೊರೆತೆಯೂ ಅವುಗಳ ಸಂತತಿ ಕಡಿಮೆಯಾಗಲು ಒಂದು ಪ್ರಮುಖ ಕಾರಣವೆನಿಸದೆ ಇರದು.

• ಇಂದಿನ ಮಕ್ಕಳ ಬಾಲ್ಯದ ಜೊತೆಗೆ ಗುಬ್ಬಚ್ಚಿಗಳ ಜೊತೆಯಿಲ್ಲ. ಚಿಂವ್ ಚಿಂವ್ ಸದ್ದು ಈಗಿನ ಮಕ್ಕಳಿಗೆ ಅಷ್ಟೇನು ಪರಿಚಿತವಾಗಿಲ್ಲ. ಅಜ್ಜಿ ಹೇಳುತ್ತಿದ್ದ ಗುಬ್ಬಚ್ಚಿಯ ಕತೆಗಳು ಎಲ್ಲಿ ಹೋದವು ಎಂದು ಚಿಂತಿಸುವಾಗಲೇ, ಮಕ್ಕಳು ಹೆತ್ತವರಿಂದ ದೂರವಾಗುವ ಈ ಕಾಲದಲ್ಲಿ ಅಜ್ಜಿ ಎಲ್ಲಿ ಬರಬೇಕು?, ಅಜ್ಜಿ ಕಥೆ, ಕಥೆಯಲ್ಲಿ ಬರುವ ಗುಬ್ಬಿಗಳೆಲ್ಲಿ ಬರಬೇಕು ? ಇನ್ನು ಗುಬ್ಬಚ್ಚಿಗಳದ್ದು ದೂರವಾಗಿರುವ ಮಕ್ಕಳ ಕಥೆಯಲ್ಲ, ನಾವೇ ದೂರಕ್ಕಟ್ಟಿದ ವ್ಯಥೆ.