ವಿಶ್ವದ ನಾಲ್ಕನೇ ಅತಿದೊಡ್ಡ ಆಹಾರ ಬೆಳೆಯಾಗಿರುವ ಸ್ಪೆಷಲ್ ಬೇಬಿ ಆಲೂ ಫ್ರೈ ಮಾಡುವ ವಿಧಾನ..!!

0
795

ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ. ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ.ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ ‘ಕಲ್ಪಕಂದ’ ಎಂದು ಹೆಸರಿಸಿದ್ದಾರೆ. ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ಮತ್ತು ಇದರಿಂದ ಹಲವಾರು ಖಾದ್ಯಗಳನ್ನು ಮಾಡಬಹುದು ಅದರಲ್ಲಿ ಆಲೂ ಫ್ರೈಯನ್ನು ಸ್ಟಾಟರ್ಸ್ ರೀತಿ ತಿನ್ನಬಹುದು, ಚಪಾತಿ ಒಳಗೆ ಹಾಕಿ ರೋಲ್ ರೀತಿ ಮಾಡಿಯೂ ತಿನ್ನಬಹುದು. ಇದರ ರುಚಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುವ ಆಲೂಗಡ್ಡೆಯಿಂದ ಬೇಬಿ ಆಲೂ ಫ್ರೈ -ಸ್ಪೆಷಲ್ ತಯಾರಿಸುವ ರೆಸಿಪಿ ಇಲ್ಲಿದೆ ನೋಡಿ.

Also read: ದಸರಾ ಆಹಾರ ಮೇಳದ ವಿಶೇಷ ತಿನಿಸು ಬಿದಿರಕ್ಕಿ ಪಾಯಸ

ಬೇಕಾಗುವ ಪದಾರ್ಥಗಳು :

 • 10-15 ಚಿಕ್ಕ ಗಾತ್ರದ ಆಲೂಗಡ್ಡೆ
 • ಎರಡು ಚಮಚ ಚಿಲ್ಲಿ ಫ್ಲೇಕ್ಸ್
 • ಬೆಳ್ಳುಳ್ಳಿ ಎಸಳು 4-5
 • ಎರಡು ಚಮಚ ರೋಸ್ಟ್ ಮಾಡಿದ ಜೀರಿಗೆ

Also read: ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂಬ ಚಿಂತೆ ಬಿಟ್ಟು.. ರಾಗಿ-ಅಕ್ಕಿ ದೋಸೆ ಮಾಡಿ ಕೊಡಿ..!!

 • ಎರಡು ಚಮಚ ಒಣ ಮಾವಿನಕಾಯಿ ಪುಡಿ ಅಥವಾ ಹುಣಸೆ ಹಣ್ಣು
 • ಸ್ವಲ್ಪ ಕರಿ ಮೆಣಸಿನ ಪುಡಿ
 • ಎರಡು ಚಮಚ ಎಣ್ಣೆ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ನೀರು 1/4 ಕಪ್
 • ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

Also read: ಪೋಷಕಾ೦ಶ, ಕ್ಯಾಲರಿಅ೦ಶವುಳ್ಳ ಚಿಕನ್ ಗೀ ಮಸಾಲಾ ಮಾಡುವ ವಿಧಾನ..!!

 • ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಡಿ.
 • ಚಿಲ್ಲಿ ಫ್ಲೇಕ್ಸ್ , ರೋಸ್ಟ್ ಮಾಡಿದ ಜೀರಿಗೆ, ಕರಿ ಮೆಣಸಿನ ಪುಡಿ, ಬೆಳುಳ್ಳಿಗೆ ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಬೇಕು.
 • ನಂತರ ಬಾಣಲಿಗೆ ಎಣ್ಣೆ ಹಾಕಿ ಅದರಲ್ಲಿ ಆಲೂಗಡ್ಡೆ ಹಾಕಿ 3-4 ನಿಮಿಷ ಫ್ರೈ ಮಾಡಿ, ನಂತರ ರುಬ್ಬಿದ ಪೇಸ್ಟ್ ಹಾಕಿ, ಒಣ ಮಾವಿನ ಪುಡಿ, ರುಚಿಗೆ ತಕ್ಕ ಉಪ್ಪು, ಹಾಕಿ 3-4 ನಿಮಿಷ ಫ್ರೈ ಮಾಡಿ.
 • ನಂತರ 1/4 ಕಪ್ ನೀರು ಹಾಕಿ 5 ನಿಮಿಷ ಸಾಧಾರಣ ಉರಿಯಲ್ಲಿ ಬೇಯಿಸಿ.
 • ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬೇಬಿ ಆಲೂ ಫ್ರೈ ರೆಡಿ.
 • ಸೂಚನೆ: ಒಣ ಮಾವಿನ ಕಾಯಿ ಪುಡಿ ಇಲ್ಲದಿದ್ದರೆ ಹುಣಸೆ ಹಣ್ಣಿನ ರಸ ಸೇರಿಸಬಹುದು.