ಕಾವೇರಿ ನೀರು ಕುಡಿಯೋಕೆ ಮಾತ್ರ: ವಿಶೇಷ ಅಧಿವೇಶನದಲ್ಲಿ ಸರ್ವಾನುಮತದ ತೀರ್ಮಾನ

0
634

ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜನರ ಕುಡಿಯುವ ನೀರಿಗೆ ಮಾತ್ರ ಬಳಸಲು ಶುಕ್ರವಾರ ನಡೆದ ವಿಧಾನಸೌಧ ಉಭಯ ಸದನಗಳ ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ತಮಿಳುನಾಡಿಗೆ ಸೆ.೨೧ರಿಂದ ೨೭ರವರೆಗೆ ೬ ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ ಗಳಲ್ಲಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳ ನೀರನ್ನು ಕುಡಿಯುವ ಏಕಮಾತ್ರ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಯಿತು.

ರಾಜ್ಯದಲ್ಲಿ ಪ್ರಸ್ರುತ ಕೆಆರ್ ಎಸ್, ಕಬಿನಿ. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಒಟ್ಟಾರೆ ೨೭ ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದನ್ನು ಕುಡಿಯುವ ನೀರಿಗೆ ಮಾತ್ರ ಸಂಗ್ರಹವಿದೆ ಎಂದು ಸಭೆ ನಿರ್ಣಯಿಸಿತು.

ಜೆಡಿಎಸ್ ಶಾಸಕ ವೈಎಸ್ ವಿ ದತ್ತ ವಿಷಯ ಮಂಡನೆ ಮಾಡಿದರು. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಶಾಸಕ ಪುಟ್ಟಣ್ಣಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮುಂತಾದವರು ಚರ್ಚೆ ನಡೆಸಿದರು. ವಿಧಾಸಭೆಯಲ್ಲಿ ಚರ್ಚೆ ಸುದೀರ್ಘವಾಗಿ ನಡೆದ ಕಾರಣ ಸಭೆಯನ್ನು ಮುಕ್ಕಾಲು ಗಂಟೆ ವಿಶ್ರಾಂತಿ ನೀಡಲಾಗಿತ್ತು.

ಪ್ರಕೃತಿ ಮುನಿಸಿಕೊಂಡಿರುವುದರಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಂಭೀರ ಮತ್ತು ಆತಂಕದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಅಭಿಪ್ರಾಯಪಟ್ಟಿತು.