ಹೆಚ್ಚು ರುಚಿಯಾಗಿರುವ ಚಿಕನ್ ಪ್ರೈ ಮಾಡುವ ಸುಲಭ ವಿಧಾನ ನಿಮಗಾಗಿ..

0
1404

ಚಿಕನ್ ಪ್ರಿಯರು ಸಾಮಾನ್ಯವಾಗಿ ಹೊಸ ಹೊಸ ರುಚಿಯನ್ನು ಬಯಸುತ್ತಾರೆ. ಇಂತಹ ಚಿಕನ್ ಖಾದ್ಯಗಳಲ್ಲಿ ಸಾರು ಮಾಡುವ ವಿಧಾನಕ್ಕಿಂತ ಡ್ರೈ ಚಿಕನ್, ಕಬಾಬ್, ಅಂತ ರುಚಿಯನ್ನು ಹೆಚ್ಚಾಗಿ ಇಷ್ಟಪಡುವ ಚಿಕನ್ ಪ್ರಿಯರು ಹೊಸದೊಂದು ಚಿಕನ್ ಅಡುಗೆ ಬಂದರೆ ಅದರ ರುಚಿಯನ್ನು ಸವಿಯದೆ ಇರಲಾರರು. ಚಿಕನ್ ಖಾದ್ಯದಲ್ಲಿ ಸ್ವಲ್ಪ ಡ್ರೈ ರೀತಿ ಮಾಡಿ ತಿನ್ನುವುದು ಎಲ್ಲರ ಬಯಕೆಯಾಗಿದೆ. ಅಂತಹ ಸಾಲಿನಲ್ಲಿ ಬರುವ ಚಿಕನ್ ಫ್ರೈ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

Also read: ಖಾರದ ಅಡುಗೆ ಬಯಸುವ ಚಿಕನ್ ಪ್ರಿಯರಿಗಾಗಿ ರುಚಿ ರುಚಿಯಾದ ಚಿಕನ್ ಚಿಲ್ಲಿ ಮಾಡುವ ವಿಧಾನ..!

ಬೇಕಾದ ಪದಾರ್ಥಗಳು:

 • 1/2 kg ಬೋನ್ ಲೆಸ್ ಚಿಕನ್.
 • ಎರಡು ಈರುಳ್ಳಿ.
 • ಒಂದು ಟೊಮೆಟೊ.
 • ನಾಲ್ಕು ಚಮದಷ್ಟು ಎಣ್ಣೆ.
 • ಒಂದು ಚಮಚ ಬೆಳ್ಳುಳ್ಳಿ.
 • ಒಂದು ಚಮಚ ಶುಂಠಿ ಪೇಸ್ಟ್.
 • ಸ್ವಲ್ಪ ಕರಿಬೇವಿನ ಎಲೆ.
 • 1/4 ಚಮಚ ಅರಿಶಿಣ ಪುಡಿ.
 • 2 ಚಮಚ ಖಾರದ ಪುಡಿ.
 • 2 ಚಮಚ ಮೆಣಸಿನ ಪುಡಿ.
 • ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:

 1. ಚಿಕನ್ ಅನ್ನು ಸಾಧಾರಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಬೇಕು.
 2. ಈರುಳ್ಳಿಯನ್ನು ಉದ್ದುದ್ದವಾಗಿ, ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿಕೊಂಡಿರಬೇಕು.
 3. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ – ಶುಂಠಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
 4. ನಂತರ ಟೊಮೆಟೊ, ಅರಿಶಿಣ ಮತ್ತು ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಇರಬೇಕು.
 5. ನಂತರ ಚಿಕನ್ ಹಾಕಿ 1/4 ಗ್ಲಾಸ್ ನೀರು ಸೇರಿಸಿ ಮಿಶ್ರ ಮಾಡಿ 10-15 ನಿಮಿಷ ಬೇಯಿಸಬೇಕು, ಹೀಗೆ ಬೇಯಿಸುವಾಗ ಸೌಟ್ ನಿಂದ ಆಗಾಗ ಆಡಿಸುತ್ತಾ ಇರಬೇಕು.
 6. ಸಂಪೂರ್ಣ ಬೆಂದ ಮೇಲೆ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ನಿಮಗೆ ಇಷ್ಟವಾದ ಚಿಕನ್ ಪ್ರೈ ಸವಿಯಬಹುದು.