ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ.

0
601

ಕರ್ನಾಟಕ `ಸಮರ್ಥ’ ಆರಂಭ

ಗ್ರೇಟರ್ ನೋಯ್ಡಾ: ಆರಂಭಿಕ ಆರ್ ಸಮರ್ಥ ಶತಕ ಹಾಗೂ ಮಧ್ಯಮ ಕ್ರಮಾಂಕದ ಕರುಣ್ ನಾಯರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ.

18bp10-320x330

ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ವಿನಯ್ ಪಡೆ ಮೊದಲು ಬ್ಯಾಟಿಂಗ್ ಮಾಡಿ, ೯೦ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೪೮ ರನ್ ಕಲೆ ಹಾಕಿತು. ಸಮರ್ಥ ಹಾಗೂ ಕೌನಿನ್ ಅಬ್ಬಾಸ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಾಯಾಂಕ್ ಅಗರ್‌ವಾಲ್ ಮೊದಲ ಪಂದ್ಯದಲ್ಲಿ ನಿರಾಸೆಯನ್ನು ಅನುಭವಿಸಿದರು. ರಾಬಿನ್ ಉತ್ತಪ್ಪ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ಸಮರ್ಥ-ಕರುಣ್ ಜುಗಲ್‌ಬಂದಿ

ಉತ್ತಮ ಲಯದಲ್ಲಿರುವ ಸಮರ್ಥ ಹಾಗೂ ಕರುಣ್ ನಾಯರ್ ತಂಡಕ್ಕೆ ಆರಂಭಿಕ ಆಘಾತದಿಂದ ಪಾರು ಮಾಡುವ ವಿಶ್ವಾಸವನ್ನು ಮೂಡಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಜೋಡಿ, ವಿಕೆಟ್ ಕಾಯ್ದುಕೊಳ್ಳುವತ್ತ ಚಿತ್ತ ನೆಟ್ಟಿತು.

೧೬೮ ಎಸೆತಗಳಲ್ಲಿ ೫ ಬೌಂಡರಿ ಸೆರಿದಂತೆ ೭೪ ರನ್ ಚಚ್ಚಿದ ಕರುಣ್ ಆಶಿಶ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದರು.

ಸಮರ್ಥ ಮಿಂಚು

ಸಮರ್ಥ ಚೇತೋಹಾರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಜಾರ್ಖಂಡ್ ತಂಡದ ವೇಗದ ಹಾಗೂ ಸ್ಪಿನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸಮರ್ಥ ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದರು. ೨೭೬ ಎಸೆತಗಳನ್ನು ಎದುರಿಸಿದ ಇವರು ೧೦ ಬೌಂಡರಿ ಸೇರಿದಂತೆ ೧೧೮ ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಮೊದಲ ಇನಿಂಗ್ಸ್ ೯೦ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೪೮
ಆರ್.ಸಮರ್ಥ ಅಜೇಯ ೧೧೮, ಕರುಣ್ ನಾಯರ್  ೭೪,  ಆಶಿಶ್ ಕುಮಾರ್ ೪೭ಕ್ಕೆ ೩