ಎಲ್ಲರನ್ನು ಕಾಯೋ ಆದಿಚುಂಚನಗಿರಿಯ ಕಾಲ ಭೈರವ.. ಹರಕೆ ಕಟ್ಟಿಕೊಂಡರೆ.. ಸಕಲ ಕಷ್ಟಗಳು ದೂರ..ಪಂಚಲಿಂಗದ ರೂಪದಲ್ಲಿ ದರ್ಶನ ಕೊಡುವ ಶಿವನ ಮಹಾತ್ಮೆ ಅಪಾರ..

0
2003

ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನೆಲೆಸಿರುವ ಕಾಲ ಭೈರವ ಎಲ್ಲರನ್ನು ಕಾಯುವ ರಕ್ಷಕನೆಂದು ಪ್ರಸಿದ್ಧಿ.. ಅನೇಕ ರಾಜ ಮನೆತನಗಳು ಇಲ್ಲಿಗೆ ತುಂಬಾ ನಿಷ್ಠೆಯಿಂದ ಇದ್ದವು.. ಶಿವನ ಜಡೆಯ ಒಂದು ಅಂಶವಾದ ಕಾಲಭೈರವೇಶ್ವರ ಸ್ವಾಮಿ ತುಂಬಾ ಶಕ್ತಿಶಾಲಿ ದೇವರು.. ಇಲ್ಲಿ ನಾಯಿ ಕಾಲಭೈರವೇಶ್ವರನ ವಾಹನ ವಾಗಿದೆ.. ಇಲ್ಲಿ ಶಿವನು ಪಂಚ ಲಿಂಗದ ರೂಪದಲ್ಲಿ ದರ್ಶನವನ್ನು ಕೊಡುವನು.

ಈಗಲೂ ಇಲ್ಲಿನ ದೇವರಿಗೆ ಜನರು ಹರಕೆ ಕಟ್ಟಿಕೊಳ್ಳುತ್ತಾರೆ.. ಅದು ಈಡೇರಿದ ನಂತರ ಇಲ್ಲಿ ಬಂದು ದೇವರಿಗೆ ಎಡೆ ಕೊಟ್ಟು ದಾಸೋಹವನ್ನು ಏರ್ಪಡಿಸುತ್ತಾರೆ.. ಮಹೇಶ್ವರನು ಸಿದ್ಧಯೋಗಿಗೆ ಈ ಕ್ಷೇತ್ರವನ್ನು ಬಿಟ್ಟು ಕೈಲಾಸಕ್ಕೆ ಹೋಗುವಾಗ ತನ್ನ ಸಾನ್ನಿಧ್ಯವನ್ನು ಬಯಸಿದ ಯೋಗಿಗೆ ನಾನು ಪಂಚಲಿಂಗ ರೂಪದಲ್ಲಿ ಈ ಕ್ಷೇತ್ರದಲ್ಲಿ ನೆಲಸಿರುತ್ತೇನೆ ಹೇಳಿದನಂತೆ. ಅದರಂತೆ, ಇಲ್ಲಿ ಗಂಗಾಧರೇಶ್ವರ, ಕತ್ತಲೆ ಸೋಮೇಶ್ವರ, ಚಂದ್ರಮೌಳೀಶ್ವರ, ಗವಿಸಿದ್ದೇಶ್ವರ ಮತ್ತು ಮಲ್ಲೇಶ್ವರ ಎಂಬ ಪಂಚಲಿಂಗಗಳಿವೆ. ಶ್ರೀ ಕ್ಷೇತ್ರದ ದಕ್ಷಿಣಕ್ಕೆ ಬಿಂದು ಸರೋವರವಿದೆ.

ಶಿವನ ಜಡೆಯಿಂದ ಬಂದ ಗಂಗಾಬಿಂದು ಈ ಸರೋವರದಲ್ಲಿ ಸೇರಿದ್ದರಿಂದ ಇದಕ್ಕೆ ಬಿಂದು ಸರೋವರ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ. ಈ ಕೊಳದ ನೀರನ್ನೇ ಗಂಗಾಧರೇಶ್ವರನ ಅಭಿಷೇಕಕ್ಕೂ ಬಳಸಲಾಗುತ್ತದೆ. ಇಲ್ಲಿನ ನೀರನಲ್ಲಿ ಸ್ನಾನ ಮಾಡಿದರೆ, ಚರ್ಮ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ನಾಗಮಂಗಲ ಪಟ್ಟಣದಿಂದ 20 ಕಿ.ಮೀ. ಹಾಗೂ ಮೈಸೂರಿನಿಂದ ತುಮಕೂರು ಹೆದ್ದಾರಿಯಲ್ಲಿ, ಬೆಳ್ಳೂರಿನಿಂದ 2 ಮೈಲಿಗಳ ದೂರದಲ್ಲಿರುವ ಚುಂಚನಹಳ್ಳಿ ಗ್ರಾಮವು ಚುಂಚನಗಿರಿ ತಪ್ಪಲಿನಲ್ಲಿದೆ. ಮಂಡ್ಯ, ಮೈಸೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳ ಸೌಕರ್ಯವಿದೆ.

ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರುಗಳಿಗೆ ದಾಸೋಹ ವ್ಯವಸ್ಥೆ ಇದೆ. ಉಳಿದುಕೊಳ್ಳಲು ಸುಸಜ್ಜಿತ ವಸತಿ ಸೌಕರ್ಯವಿದೆ. ಇಲ್ಲಿ ನಡೆಯುವ ತೆಪ್ಪೋತ್ಸವ ಅತ್ಯಂತ ವಿಶೇಷವಾಗಿದೆ..

ನಮ್ಮ ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಜೊತೆಗೆ ಸುಂದರವಾದ ಪ್ರೇಕ್ಷಣೀಯ ಸ್ಥಳವಾಗಿದೆ ಒಮ್ಮೆ ಭೇಟಿ ಕೊಡಿ..