ಗುರು ರಾಘವೇಂದ್ರರ ವಿವಿಧ ಅವತಾರಗಳ ಬಗ್ಗೆ ತಿಳಿದು ಭಕ್ತಿಯಿಂದ ಅವರನ್ನು ನೆನೆದು ಅವರ ಆಶೀರ್ವಾದಕ್ಕೆ ಸತ್ಪಾತ್ರರಾಗಿ!!

0
576

ಸತ್ಯ ಹಾಗೂ ಧರ್ಮಗಳ ಪ್ರತಿರೂಪವೆಂದೇ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರರಿಗೆ ಮಾತ್ರ. ಗುರು ರಾಯರನ್ನು ನೆನೆಸಿಕೊಂಡರೆ ಸಾಕು ಸಕಲ ಅಭೀಷ್ಟಗಳು ಮತ್ತು ಲೌಕಿಕ ಅಭೀಷ್ಟಗಳು ನೆರವೇರುತ್ತವೆ ಹಾಗೆ ಪವಾಡಗಳನ್ನು ಸೃಷ್ಟಿಸಿ ಭಕ್ತ ಸಮೂಹಕ್ಕೆ ಆಸರೆಯಾಗಿ ಕಲಿಯುಗದ ಪವಾಡ ಪುರುಷ ಗುರುರಾಯರು ಪ್ರತಿಯೊಬ್ಬ ಭಕ್ತರ ಮನದಲ್ಲಿ ಇಂದಿಗೂ ಬದುಕಿದ್ದಾರೆ. ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಎಲ್ಲದಕ್ಕೂ ಬೇಕಾಗಿದ್ದಾರೆ. ಇವರು ಸಾಮಾನ್ಯಜನರಿಗೆ ಮತ್ತು ವಿದ್ವಕ್ತ ಪ್ರಪಂಚಕ್ಕೂ ಬೇಕು. ಬನ್ನಿ ಹಾಗಾದರೆ ಗುರು ರಾಘವೇಂದ್ರ ಸ್ವಾಮಿಗಳ ದೇವಲೋಕ ಮತ್ತು ಭೂಲೋಕದ ಅವತಾರಗಳ ಬಗ್ಗೆ ತಿಳಿಯೋಣ.

ರಾಯರ ದೇವಲೋಕದಲ್ಲಿ ಮೊದಲನೇ ಜನ್ಮ ಶಂಕುಕರ್ಣ

Also read: ಶ್ರೀ ರಾಘವೇಂದ್ರ ಸ್ವಾಮಿಯನ್ನು ಯೋಗ್ಯ ಪದ್ಧತಿಯಲ್ಲಿ ಪೂಜೆ ಮಾಡಿ ರಾಯರ ಕೃಪೆಗೆ ಪಾತ್ರರಾಗಬೇಕು ಅಂದರೆ ಹೀಗೆ ಮಾಡಿ..!

ಜಗತ್ ಸೃಷ್ಟಿಕರ್ತ ನಾರಾಯಣನ ವಕ್ಷಸ್ಥಳದಲ್ಲಿನ ಕಮಲದ ಹೂವಿನಲ್ಲಿ ಹುಟ್ಟಿದರು ಬ್ರಹ್ಮ ದೇವಾ. ಹಾಗೆ ಬ್ರಹ್ಮ ದೇವರನ್ನು ಸೃಷ್ಟಿಸಿದ ನಂತರ ಬ್ರಹ್ಮ ದೇವರಿಗೆ ಓರ್ವ ಸೇವಕರನ್ನು ಸೃಷ್ಟಿಸುತ್ತಾರೆ. ಹಾಗೆ ವಿಷ್ಣುವಿನಿಂದ ಬ್ರಹ್ಮ ದೇವರಿಗಾಗಿ ಸೃಷ್ಟಿಸಿದ ಸೇವಕರೇ ಶಂಕುಕರ್ಣ. ಹೀಗೆ ದೇವಲೋಕದಲ್ಲಿ ಬ್ರಹ್ಮ ದೇವರಿಗೆ ಸೇವಕರಾಗಿ ಕಾರ್ಯ ನಿರ್ವಹಿಸಿದ ಶಂಕುಕರ್ಣರೇ ರಾಘವೇಂದ್ರ ಸ್ವಾಮಿಗಳ ಮೊದಲನೇ ಜನ್ಮ.

ಭೂಮಿಯ ಮೇಲೆ ರಾಯರ ಮೊದಲನೇ ಅವತಾರ ಭಕ್ತ ಪ್ರಹ್ಲಾದ

Also read: ರಾಘವೇಂದ್ರ ಸ್ವಾಮಿಗಳ ಮಹಿಮೆ ತಿಳಿದು ಈ ರಾಘವೇಂದ್ರ ಸ್ತೋತ್ರವನ್ನು ನಿತ್ಯ ಪಠಿಸಿ, ರಾಯರ ಅನುಗ್ರಹದಿಂದ ನಿಮ್ಮೆಲ್ಲಾ ಕಷ್ಟಗಳು ದೂರವಾಗುತ್ತವೆ..

ನಿಜ ಭಕ್ತಿ ಗೆ ದೇವರು ಒಲಿದೇ ಒಲಿಯುತ್ತಾನೆ ಮತ್ತು ನೆರವಿಗೆ ಬರುತ್ತಾನೆ ಅನ್ನುವ ಸಂದೇಶವನ್ನು ಜಗತ್ತಿಗೆ ಸಾರಿದವರು ಭಕ್ತ ಪ್ರಹ್ಲಾದ. ಭಕ್ತಿಯ ಪರಾಕಾಷ್ಟೆ ಅಂದರೆ ಭಕ್ತ ಪ್ರಹ್ಲಾದ ಎಂದರೆ ತಪ್ಪಾಗಲಾರದು. ಹಿರಣ್ಯಕಶಿಪುವಿನಂತಹ ಘೋರ ತಂದೆಯನ್ನು ತನ್ನ ಭಕ್ತಿಯ ಪರಾಕಾಷ್ಟೆಯ ಮೂಲಕ ಸೋಲಿಸಿದ ಭಕ್ತ ಪ್ರಹ್ಲಾದ ತಮ್ಮ ಭಕ್ತಿಯಿಂದ ನರಸಿಂಹ ಅವತಾರವನ್ನು ಧರೆಗೆ ಇಳಿಸಿ ಅಧರ್ಮಿ ಹಿರಣ್ಯಕಶಿಪುನ ಅಂತ್ಯಕ್ಕೆ ಕಾರಣರಾದ ಭಕ್ತ ಪ್ರಹ್ಲಾದರೇ ರಾಘವೇಂದ್ರ ಸ್ವಾಮಿಗಳ ಎರಡನೇ ಜನ್ಮ. ಅಂದೇ ಭಕ್ತಿ ಎಂದರೆ ಏನು ಎಂದು ಸಣ್ಣ ವಯಸ್ಸಿನಲ್ಲೇ ಬಾಲಕನಾಗಿ ರಾಘವೇಂದ್ರ ಸ್ವಾಮಿಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಭೂಮಿಯ ಮೇಲೆ ರಾಯರ ಎರಡನೇ ಅವತಾರ ಬಹಿಲಿಕ ರಾಜ

Also read: ರಾಯರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ..! ಪವಾಡ ಪುರುಷ ಗುರುರಾಘವೇಂದ್ರ ನಂಬಿ ಕೆಟ್ಟವರಿಲ್ಲ…!!

ದ್ವಾಪರಯುಗದಲ್ಲಿ ಭಕ್ತಿಯೊಂದಿಗೆ ಕೃಷ್ಣ ನ ಪರ ನಿಂತು ಪಾಂಡವರಿಗೆ ಓರ್ವ ರಾಜರು ಸಹಾಯ ಮಾಡಲು ನಿಂತರು. ಹಾಗೆ ನಿಂತ ರಾಜರೇ ಬಹಿಲಿಕ ರಾಜ. ಕೃಷ್ಣ ಭಕ್ತರಾಗಿ ಪಾಂಡವರ ನೆರವಿಗೆ ನಿಂತ ಬಹಿಲಿಕ ರಾಜರೇ ಗುರು ರಾಘವೇಂದ್ರ ಸ್ವಾಮಿಗಳ ಎರಡನೇ ಜನ್ಮ.

ರಾಯರ ಮೂರನೇ ಅವತಾರ ಅತಿವರ್ಯ ವ್ಯಾಸರಾಯ

Also read: ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆಯಲ್ಲಿ ಅಡಗಿರುವ ಶಕ್ತಿ ಎಂತಹದು ಎಂದು ತಿಳಿದುಕೊಳ್ಳಲು ಈ ಕತೆಯನ್ನು ಓದಿ…

ಹಿಂದೊಮ್ಮೆ ವಿಜಯನಗರ ಸಾಮ್ರಾಜ್ಯದ ಕೃಷ್ಣ ದೇವರಾಯರಿಗೆ ಒಮ್ಮೆ ವಿಚಿತ್ರವಾದ ದೋಷ ಒಂದು ಆವರಿಸುತ್ತದೆ. ಆ ದೋಷವೇ ಕೂಹು ದೋಷ. ಅಂತಹ ದೋಷದಿಂದ ಈಡಿ ಸಾಮ್ರಾಜ್ಯವೇ ನಾಶವಾಗುವಂತಹ ಮತ್ತು ಉಹಿಸಲಾಗದಂತಹ ಸಮಸ್ಯೆಗಳು ಯೆದುರಾಗುವಂತಹ ಸ್ಥಿತಿ ಎದುರಾಗುತ್ತದೆ. ಅಂಥಹ ಕೂಹು ದೋಷವನ್ನು ಯಾರೂ ನಿವಾರಣೆ ಮಾಡಲು ಸಾದ್ಯವಾಗುವುದಿಲ್ಲ ಅಂತಹ ಸ್ಥಿತಿಯಲ್ಲಿ ಓರ್ವ ಯತಿಯೊಬ್ಬರು ಬಂತು ಒಂದು ಚಮತ್ಕಾರ ವನ್ನು ಮಾಡುತ್ತಾರೆ. ಆ ಯತಿಗಳು ನಡೆಸಿದ ಚಮತ್ಕಾರದಿಂದ ಸಾಮ್ರಾಜ್ಯಕ್ಕೆ ಮತ್ತು ರಾಜರಿಗೆ ಆವರಿಸಿದ ದೋಷವು ಕ್ಷಣ ಮಾತ್ರದಲ್ಲಿ ನಿವಾರಣೆಯಾಗುತ್ತದೆ. ಅಂಥಹ ಚಮತ್ಕಾರ ಮಾಡಿದವರೇ ವ್ಯಾಸರಾಯರು. ಭೂಮಿಯ ಮೇಲೆ ಜನಿಸಿ ಜನರಿಗೆ ಭಕ್ತಿಯ ಮಾರ್ಗವನ್ನು ತೋರಿ ನಾನಾ ಪವಾಡಗಳನ್ನು ತೋರಿಸಿದ ಅತಿವರ್ಯರಾದ ವ್ಯಾಸರಾಯರೇ ಗುರು ರಾಘವೇಂದ್ರ ಸ್ವಾಮಿಗಳ ಮೂರನೇ ಜನ್ಮ.

Also read: ಶ್ರೀ ರಾಘವೇಂದ್ರ ಸ್ವಾಮಿ ಗುರುಗಳ ಮೂಲ ವೃಂದಾವನದ ಹಿನ್ನೆಲೆಯ ಬಗ್ಗೆ ನಿಮಗೆಷ್ಟು ಗೊತ್ತು..?

ಹೀಗೆ ದೇವಲೋಕದಲ್ಲಿ ಒಂದು ಜನ್ಮ, ಭೂಲೋಕದಲ್ಲಿ ಮೂರು ಜನ್ಮವಾದನಂತರದ ಜನ್ಮವೇ ಗುರು ರಾಘವೇಂದ್ರ ಸ್ವಾಮಿಗಳ ಜನ್ಮ. ಹೀಗೆ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು. ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ಬಹಿಲಿಕ ರಾಜ ಹಾಗೂ ವ್ಯಾಸರಾಗಿ ಜನಿಸಿ ತದನಂತರ ವ್ಯಾಸರವತಾರದ ಬಳಿಕ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸಿ, ತಮ್ಮ ಬಳಿಗೆ ಬರುವ ಭಕ್ತಕೋಟಿಯ ಸಂಕಷ್ಟವನ್ನು ಪರಿಹರಿಸುತಿಹರು. ಅದಕ್ಕೆ ಭಕ್ತರು ರಾಯರನ್ನು ಪ್ರಹ್ಲಾದ – ವ್ಯಾಸಮುನಿಯೇ – ರಾಘವೇಂದ್ರ ಯತಿಯೇ ಎಂದು ಆರಾಧಿಸುವುದು.