ಶ್ರೀ ನರಸಿಂಹ ಜಯಂತಿ ವಿಶೇಷ

0
804

ಯಾವ ಸಮಯದಲ್ಲಿ ಆಚರಿಸಬೇಕು : ವೈಶಾಖಮಾಸ ಶುಕ್ಲ ಪಕ್ಷ ಚತುರ್ದಶಿಯ ದಿನದಂದು ಶ್ರೀ ನರಸಿಂಹ ದೇವರ ಜಯಂತಿಯನ್ನು ಆಚರಿಸಬೇಕು.

ಆಚರಣೆಯ ವಿಧಾನ :
ನಿರ್ಮಲಮನಸ್ಕರಾಗಿ ಬೆಳಿಗ್ಗೆ ಎದ್ದು ತನ್ನ ನಿತ್ಯಕರ್ಮಗಳನ್ನು ಮುಗಿಸಿ ಶುಚಯಾದ ವಸ್ತ್ರವನ್ನು ದರಿಸಿ ಶಕ್ತ್ಯಾನುಸಾರವಾಗಿ ಮನೆಯಲ್ಲಿಯೇ ಶ್ರೀ ನರಸಿಂಹ ದೇವರ ಪ್ರತಿಷ್ಠಾಪಿಸಿ ನನಾವಿಧವಾದ ಪುಷ್ಪಗಳಿಂದ ಅಲಂಕರಿಸಿ ರಂಗವಲ್ಲಿಯನ್ನು ಬಿಟ್ಟು ಜೊತೆಯಲ್ಲಿ ಲಕ್ಷ್ಮೀದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು.
ಆಚಾರ್ಯರನ್ನು ಕರೆಯಿಸಿ ಅವರಿಂದ ಷೋಡಶೋಪಚಾರ ಪೂಜೆಗಳನ್ನು ಕ್ರಮಬದ್ದವಾಗಿ ವೇದೋಕ್ತಮಂತ್ರಗಳಿಂದ ನರಸಿಂಹ ಮತ್ತು ಲಕ್ಷ್ಮೀದೇವಿಯನ್ನು ಪೂಜೆ ಮಾಡಿಸಬೇಕು. ನೈವೇದ್ಯಕ್ಕೆ ವಿಷ್ಣು ಪ್ರಿಯವಾದ ಪುಳಿಯೋಗರೆ, ಮೊಸರನ್ನವನ್ನು ಮಾಡಬೇಕು.

ನಂತರ ಬಂದ ಆಚಾರ್ಯರಿಗೆ ಧನದಾನ್ನವನ್ನು ಶಕ್ತ್ಯಾಸಾರವಾಗಿ ಕೊಟ್ಟು ಅವರಿಂದ ಆರ್ಶಿವಾದವನ್ನು ತೆಗೆದುಕೊಳ್ಳಬೇಕು. ಪೂಜೆಗೆ ಬಂದವರಿಗೂ ಪ್ರಸಾದವನ್ನು ಕೊಡಬೇಕು.

ಬಡವರಿಗೂ ಅಂಗವಿಕಲರಿಗೂ ಊಟವನ್ನು ಮಾಡಿಸಿ ಅವರಿಗೆ ಯಥಾಶಕ್ತಿ ಸಹಾಯವನ್ನು ಮಾಡಬೇಕು ಹೀಗೆ ಶ್ರೀ ನರಸಿಂಹ ಮತ್ತು ಲಕ್ಷ್ಮೀದೇವಿಯನ್ನು ಪೂಜಿಸಿದರೆ ಸಕಲ
ಸುಖಗಳನ್ನು ಅನುಭವಿಸಬಹುದು.
ಪಾಪವಿಮುಕ್ತರಾಗುವರು ಮತ್ತು ಈ ಪೂಜೆಯಿಂದ ಸಕಲವಾದ ಇಷ್ಟರ್ಥಗಳು ಹಿಡೇರುವುದು.
ಇದಕ್ಕೆ ಈ ಮಂತ್ರವನ್ನು ಜಪಿಸಿ

ಮಂತ್ರ
ಓಂ ನೃಸಿಂಹಾಯ ವಿದ್ಮಹೇ
ವಜ್ರನಖಾಯ ಧೀಮಹಿ
ತನ್ನಃ ಸಿಂಹಃ ಪ್ರಚೋದಯಾತ್

ಓಂ ಮಹಾದೇವ್ಯೈ ಚ ವಿದ್ಮಹೇ
ವಿಷ್ಣು ಪತ್ನ್ಯೈಚ ಧೀಮಹಿ
ತನ್ನೋ ಲಕ್ಷ್ಮೀಃ ಪ್ರಚೋದಯಾತ್

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
೯೮೪೫೩೭೧೪೧೬
ಸುಣ್ಣದಕೇರಿ . ಮೈಸೂರು