ರಾಯರು ಅನುಗ್ರಹ ಮಾಡಿದರೂ ಗುರುತಿಸುವ ಶಕ್ತಿ ನಮಗಿರೊಲ್ಲ… ಅದಕ್ಕೆ ಈ ಕಥೆಯೇ ಸಾಕ್ಷಿ…

0
4528

Kannada News | Karnataka Temple History

ಒಮ್ಮೆ ಒಬ್ಬ ಮಂತ್ರಾಲಯಕ್ಕೆ ಸೇವೆಗೆಂದು ಹೋಗಿರುತ್ತಾರೆ. ಮೂರುದಿನ ಭಕ್ತಿಯಿಂದ ಸೇವೆಮಾಡುತ್ತಾರೆ. ಮೂರನೇ ದಿನ ರಾತ್ರಿ ಮಲಗಿದಾಗ ಆತನ ಕನಸಿನಲ್ಲಿ ರಾಯರು ಬಂದರಂತೆ. ರಾಯರೇ ಕನಸಿನಲ್ಲಿ ಬಂದು ಕೇಳಿದರಂತೆ ನೀನು ನನ್ನ ಸೇವೆ ಯಾಕೆ ಮಾಡಲಿಕ್ಕೆ ಬಂದಿರುವೆ? ಅಂತ ಕೇಳಿದರಂತೆ. ಅದಕ್ಕೆ ಉತ್ತರವಾಗಿ ಅವರು ಹೇಳಿದರು “ಸ್ವಾಮಿ ನಾನು ಕಷ್ಟಕಾಲದಲ್ಲಿ ಯಾರದೋ ಬಳಿ ಮೂರು ಸಾವಿರ ರೂಪಾಯಿ ಸಾಲಮಾಡಿರುವೆ ಅದನ್ನ ತೀರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಏನಾದರೂ ಮಾಡಿ ನನಗೆ ಅನುಗ್ರಹ ಮಾಡಿ ಎಂದು ಕೇಳಿಕೊಂಡಂತೆ”.

ಆಗ ರಾಯರು ಕನಸಿನಲ್ಲೇ ಅವರಿಗೆ ಹೇಳಿದರಂತೆ “ಏನು ವಿಚಾರ ಮಾಡಲಿಕ್ಕೆ ಹೋಗಬೇಡ, ಒಬ್ಬ ನಿನ್ನ ಪಕ್ಕದಲ್ಲೇ ಮಲಗಿದ್ದಾನೆ ನೋಡು ಅವನ ಹತ್ತಿರದಲ್ಲಿ ಒಂದು ಬ್ಯಾಗ್ ಇದೆ, ಅದರಲ್ಲಿ ಮೂರು ಸಾವಿರ ರೂಪಾಯಿ ಇದೆ ಅದನ್ನು ತೆಗೆದುಕೊಂಡು ಹೋಗು ಎಂದರಂತೆ”. ಅವರ ಮಾತುಗಳನ್ನು ಕೇಳಿ ಆತನಿಗೆ ಆಶ್ಚರ್ಯ. ಆದರೂ ರಾಯರ ಮೇಲೆ ಆತನಿಗೆ ಅಪಾರ ವಿಶ್ವಾಸ. ರಾಯರು ಹೇಳಿದ್ದಾರೆ ಎಂದು ಅವನು ಪಕ್ಕದಲ್ಲೇ ಮಲಗಿರುವ ವ್ಯಕ್ತಿಯ ಬ್ಯಾಗಿಗೆ ಕೈ ಹಾಕಿ ಆ ದುಡ್ಡನ್ನು ತೆಗೆದುಕೊಂಡು ಓಡಲಿಕ್ಕೆ ಶುರುಮಾಡಿದ. ಹೀಗೆ ದುಡ್ಡು ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮಲಗಿರುವ ವ್ಯಕ್ತಿಗೆ ಎಚ್ಚರವಾಗಿ ನನ್ನ ದುಡ್ಡು ಕದ್ದುಕೊಂಡು ಹೋಗುತ್ತಿದ್ದಾನೆ ಎಂದು ಆತನ ಹಿಂದೆ ಬೆನ್ನಟ್ಟಿಹೋಗಿ ಕೊನೆಗೆ ಅವನನ್ನು ಹಿಡಿದು ನನ್ನ ದುಡ್ಡನ್ನು ಕದ್ದುಕೊಂಡು ಓಡಿಹೋಗುತ್ತಿರುವೆ ಎಂದು ಜೋರು ಮಾಡಿ ಕೇಳುತ್ತಾನೆ. ಆಗ ಆತ ಇಲ್ಲ ಸ್ವಾಮಿ ನಾನು ನಿಮ್ಮ ದುಡ್ಡನ್ನು ಕದ್ದುಕೊಂಡಿಲ್ಲ ರಾಯರು ಹೇಳಿದ್ದಾರೆ ನನಗೆ ಸ್ವತಃ ರಾಯರೇ ಈ ಬ್ಯಾಗಿನಲ್ಲಿ ದುಡ್ಡಿದೆ ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ. ರಾಯರು ಹೇಳಿದ್ದನ್ನ ಕೇಳಿದ್ದೀನಿ ನಾನು ಕಳ್ಳ ಅಲ್ಲ ಎಂದರಂತೆ. ಅದಕ್ಕೆ ಆ ವ್ಯಕ್ತಿ ನೀನು ಸುಳ್ಳು ಹೇಳುತ್ತಿರುವೆ ರಾಯರು ಎಲ್ಲಾದರೂ ಕಳ್ಳತನ ಮಾಡಲಿಕ್ಕೆ ಹೇಳುತ್ತಾರಾ…ಸುಳ್ಳು ಹೇಳುತ್ತಿದ್ದಿ ಅಂತ ಬೈದು ಆತನಿಂದ ದುಡ್ಡನ್ನು ಕಸಿದುಕೊಂಡು ಹೋಗಿ ಆತ ಪುನಃ ಮಲಗಿದನಂತೆ.

ಯಾರು ದುಡ್ಡು ಕಸೆದುಕೊಂಡು ಹೋಗಿ ಮಲಗಿರುತ್ತಾನೆ ಆತನ ಕನಸಿನಲ್ಲಿ ಮತ್ತೆ ರಾಯರು ಬಂದರಂತೆ. ರಾಯರು ಬಂದು ಆತನನ್ನು ಕೇಳಿದರಂತೆ “ನೀನು ಯಾಕೆ ನನ್ನ ಸೇವೆ ಮಾಡಲಿಕ್ಕೆ ಬಂದಿರುವೆ ಅಂತ ಕೇಳಿದರಂತೆ? ಆಗ ಆತ ಸ್ವಾಮಿ ನನ್ನ ಒಂದು ಕಾಲು ಸರಿ ಇಲ್ಲ ನಡೆದಾಡುವಾಗ ನಾನು ಕಾಲನ್ನು ಎಳೆದು ಎಳೆದು ಹಾಕುತ್ತೇನೆ. ಹೆಜ್ಜೆ ಸರಿಯಾಗಿ ಇಡಲಿಕ್ಕೆ ಬರ್ತಾ ಇಲ್ಲ ಅದಕೋಸ್ಕರ ನಿಮ್ಮ ಸೇವೆ ಮಾಡಿದರೆ ಕಾಲು ಬರುತ್ತದೆ ಅಂತ ಬಂದಿದ್ದೇನೆ ಅಂತ ಹೇಳಿದರಂತೆ. ಆಗ ರಾಯರು ಹೇಳಿದರಂತೆ “ಎಂತಾ ವಿಚಿತ್ರ ವ್ಯಕ್ತಿ ನೀನು, ನಿನಗಾಗಲೇ ಕಾಲು ಕೊಟ್ಟಿದ್ದೀನಿ ಕಾಲಿಲ್ಲ ಅಂದರೆ ಅವನು ನಿನ್ನ ದುಡ್ಡು ಹೊತ್ತಿಕೊಂಡು ಹೋದಾಗ ಓಡೋಡಿ ಹೋಗಿ ಆತನನ್ನು ಹೇಗೆ ಹಿಡಿದುಕೊಳ್ಳಲಿಕ್ಕೆ ಸದ್ಯ ಎಂದು ವಿಚಾರ ಮಾಡಿದ್ದೀಯಾ ಅನಂದರಂತೆ. ಅದಕ್ಕೆ ಅವನಿಗೆ ಆಶ್ಚರ್ಯ ವಾಯಿತಂತೆ. ಸ್ವಾಮಿ ನೀನು ಕಾಲುಕೊಟ್ಟಿದ್ದೇ ನಾನು ವಿಚಾರಮಾಡಲಿಲ್ಲ ಎಂದರಂತೆ. ನಿಮ್ಮ ಈ ಅನುಗ್ರಹಕ್ಕೆ ನನ್ನ ಧನ್ಯವಾದಗಳು ಅಂದರಂತೆ. ಅದಕ್ಕೆ ರಾಯರು ನಾನು ಅನುಗ್ರಹ ಮಾಡಿದ್ದೇನೋ ನಿಜ ಅದಕ್ಕೆ ನನಗೇನು ಕೊಡುತ್ತೀಯಾ ಅಂತ ಕೇಳಿದರಂತೆ? ಆಗ ಆತ ನನ್ನ ಬಳಿ ಇರುವುದು ಮೂರು ಸ್ವೀರ ರೂಪಾಯಿ ಅದನ್ನೇ ನಿಮಗೆ ಕಾಣಿಕೆಯಾಗಿ ಕೊಡುತ್ತೇನೆ ಸ್ವಾಮಿ ಎಂದರಂತೆ. ಇದನ್ನ ಕೇಳಿದ ರಾಯರು ನಾನು ಆಗಲೇ ಅದನ್ನ ತೆಗೆದುಕೊಂಡು ಆತನಿಗೆ ಕೊಟ್ಟಿದ್ದೆ, ವಾಪಸ್ ಅವನಿಗೆ ಹೋಗಿ ಕೊಟ್ಟು ಬಾ ಅಂದರಂತೆ..!

source: 4.bp.blogspot.com

ಈ ರೀತಿಯಾಗಿ ರಾಯರು ಯಾರು ಯಾರಿಗೆ ಅದ್ಭುತವಾದ ಅನುಗ್ರಯ ರಾಯರು ಮಾಡುತ್ತಾರೆ ಅನ್ನುವುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಅದಕ್ಕೆ ಹೇಳುವುದು ರಾಯರು ಅನುಗ್ರಹ ಮಾಡಿದರೂ ಗುರುತಿಸುವ ಶಕ್ತಿ ನಮಗಿರೊಲ್ಲ.

Also read: ರಾಘವೇಂದ್ರ ಸ್ವಾಮಿಗಳ ಮಹಿಮೆ ತಿಳಿದು ಈ ರಾಘವೇಂದ್ರ ಸ್ತೋತ್ರವನ್ನು ನಿತ್ಯ ಪಠಿಸಿ, ರಾಯರ ಅನುಗ್ರಹದಿಂದ ನಿಮ್ಮೆಲ್ಲಾ ಕಷ್ಟಗಳು ದೂರವಾಗುತ್ತವೆ..