ಸಾವಿರಾರು ವರ್ಷಗಳ ಇತಿಹಾಸವಿರುವ ಗುಹಾಂತರ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಜೀವಮಾನದಲ್ಲೊಮೆಯಾದರೂ ಭೇಟಿ ನೀಡಲೇಬೇಕು..

0
824

ನಮ್ಮ APP – ಅನ್ನು ಇಂದೇ ಡೌನ್ಲೋಡ್ ಮಾಡಿಕೊಳ್ಳಿ.. ಇಲ್ಲಿ ಕ್ಲಿಕ್ ಮಾಡಿ…

ಸುಮಾರು ೨೦೦೦ ವರ್ಷಗಳ ಪುರಾತನ ಯೋಗಪೀಠವಿರುವ ಕೃತಯುಗದಿಂದಲೂ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಋಷಿಯೂನಿಗಳು ತಪಗೈದ, ಜೀವಂತ ಸಮಾಧಿಯಾದ ಪರಮ ಪವಿತ್ರವಾದ ನಿಸರ್ಗ ನಿರ್ಮಿತ ಗುಹಾಂತರ ದೇವಾಲಯ ಅದುವೇ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವಿನಲ್ಲಿರುವ ರಾಮಲಿಂಗೇಶ್ವರ ಗುಹಾಂತರ ದೇಗುಲ.

ಮೇಲ್ನೊಳಕ್ಕೆ ಗುಹೆಯ ಇರುವಿಕೆ ಅಷ್ಟಾಗಿ ಗೋಚರಿಸದಿದ್ದರೂ ಒಳಹೊಕ್ಕರೆ ಒಂದು ವಿಶಾಲವಾದ ಸುಮಾರು ೫೦೦ ರಿಂದ ೬೦೦ ಜನರಸ್ತು ಜನರು ಆಸೀನರಾಗಬಹುದಂತಹ ದೊಡ್ಡ ಗುಹೆ ಕಾಣಸಿಗುತ್ತದೆ.

ಸುಮಾರು ೩೮ ವರ್ಷಗಳ ಹಿಂದೆ ಆಂಧ್ರದ ಟೇಕಲ್ ಪ್ರಾಂತ್ಯದ ರಮಾನಂದ ಸ್ವಾಮಿಗಳು ದೇಶ ಸಂಚಾರ ಕೈಗೊಂಡಿದ್ದಾಗ ಅವರ ಕಣ್ಣಿಗೆ ಬಿದ್ದದ್ದು ಮುಳ್ಳು, ಗಿಡ ಗಂಟಿಗಳಿಂದ, ಹಾವೂ ಮುಂಗಸಿ ಮೊದಲಾದ ವಿಷಜಂತುಗಳ ವಾಸದಿಂದ ಮುಚ್ಚಿಹೋದಂತಹ ಈ ಭವ್ಯವಾದ ಗುಹೆ. ಈ ಗುಹೆಯ ಒಳಹೊಕ್ಕು ಸ್ವಾಮಿಗಳು ವಿಸ್ಮಿತರಾಗಿ ಅಲ್ಲೇ ವಿಶ್ರಮಿಸಿಕೊಳ್ಳುತ್ತಿದ್ದಾಗ ಸಮಾಧಿಯೊಳಗಿಂದ ಋಷಿವರ್ಯರೊಬ್ಬರ ಅಶರೀರವಾಣಿಯೊಂದು ಈ ಸ್ಥಳದ ಮಹಿಮೆಯನ್ನು ತಿಳಿಸಿ ಅವರಿಗೆ ಇಲ್ಲಿಯೇ ವಾಸ್ತವ ಹೂಡುವಂತೆ ಆಜ್ಞಾಪಿಸಿ ಹನ್ನೊಂದು ವರ್ಷಗಳ ತರುವಾಯ ಅವರನ್ನೂ ಇಲ್ಲಿಯೇ ಜೀವಂತ ಸಮಾಧಿಯಾಗಬೇಕೆಂದೂ ಹೇಳಿದರಂತೆ.

ನಂತರ ಮರಿಯಪ್ಪ ಸ್ವಾಮಿಗಳ ಅಭಯಹಸ್ತದ ನೆರವಿನಿಂದ ರಮಾನಂದ ಸ್ವಾಮಿಗಳು ಇಲ್ಲಿ ದೊರೆತ ಶಿವಲಿಂಗ, ನದಿಯ ವಿಗ್ರಹ ಹಾಗು ಚಂಡಿಕೇಶ್ವರನನ್ನು ಪ್ರತಿಷ್ಠಾಪಿಸಿದರು. ಶ್ರೀ ರಾಮರ ಭಕ್ತರಾಗಿದ್ದ ಮರಿಯಪ್ಪ ಸ್ವಾಮಿಗಳ ಅಪೇಕ್ಷೆಯಂತೆ ಶ್ರೀ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವಿಗ್ರಹಗಳ ಜೊತೆ ಗಣಪತಿ, ರಾಜರಾಜೇಶ್ವರಿಯ ಮೂರ್ತಿಗಳನ್ನೂ ಪ್ರತಿಷ್ಠಾಪಿಸಿದರು. ಅಂದಿನಿಂದ ಈ ನಿಸರ್ಗ ನಿರ್ಮಿತ ಗುಹಾಂತರ ದೇಗುಲವು ಹೊರಜಗತ್ತಿಗೆ ಶ್ರೀ ರಾಮಲಿಂಗೇಶ್ವರ ಗುಹಾಂತರ ದೇಗುಲವೆಂದು ಪರಿಚಿತವಾಯಿತು.

ಪ್ರಸ್ತುತ ಶ್ರೀ ಶ್ರೀ ಬಾಲ ಗಂಗಾಧರೇಶ್ವರ ಸ್ವಾಮಿಗಳ ಆಶ್ರಯದಲ್ಲಿ ಆ ಗುಹಾಂತರ ದೇವಾಲಯದ ನಿತ್ಯದ ಆಸ್ತಿಕ ಚಟುವಟಿಕೆಗಳು ನಡೆಯುತ್ತಿದ್ದು, ನಿತ್ಯ ಅಭಿಷೇಕ, ಪೂಜೆ ಶಿವರಾತ್ರಿ ಮತ್ತು ಕಾರ್ತಿಕ ಸೋಮವಾರದಂದು ವಿಶೇಷ ಪೂಜಾ ಕೈಂಕರ್ಯಗಳು ಜರಗುತ್ತವೆ. ವಿಶೇಷವಾಗಿ ತಿಂಗಳ ಮೊದಲ ಭಾನುವಾರದಂದು ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮೀ ಪೂಜೆಯು ಅಪಾರ ಭಕ್ತ ಸಮ್ಮುಖದಲ್ಲಿ ನಡೆಯುತ್ತದೆ.

ಐಟಿ ಬಿಟಿ ಕಂಪನಿಗಳಿಂದ ತುಂಬಿಹೋದ ಬೆಂಗಳೂರು ಮಹಾನಗರದಲ್ಲಿ ಗವಿ ಗಂಗಾಧರೇಶ್ವರ ಸ್ವಾಮೀ ದೇಗುಲ ಬಿಟ್ಟರೆ ಮತ್ತೊಂದು ಗುಹಾಂತರ ದೇಗುಲವಿದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಮ್ಮೆಯಾದರೂ ನಗರವಾಸಿಗಳು ಇಲ್ಲಿಗೆ ಬಂದು ಪುಣ್ಯ ಪುರುಷರ ಇರುವಿಕೆಯಿಂದ ಪಾವನಗೊಂಡಿರುವ ಗುಹಾಂತರ ದೇಗುಲದಲ್ಲಿ ಆಸೀನರಾಗಿರುವ ಹರಿ ಹರರ ದರ್ಶನ ಮಾಡಿಕೊಂಡು ಪುನೀತರಾಗಬೇಕು.

ನಮ್ಮ APP – ಅನ್ನು ಇಂದೇ ಡೌನ್ಲೋಡ್ ಮಾಡಿಕೊಳ್ಳಿ.. ಇಲ್ಲಿ ಕ್ಲಿಕ್ ಮಾಡಿ…