ಬಹುಭಾಷಾ ನಟಿ, ಸೂಪರ್ ಸ್ಟಾರ್ ಶ್ರೀದೇವಿ ಇನಿಲ್ಲ…!!

0
528

Kannada News | Karnataka News

ಬಹುಭಾಷಾ ನಟಿ ಶ್ರೀದೇವಿ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. ಭಾರತ ಚಿತ್ರರಂಗ ಕಂಡ ಮಹಿಳಾ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಶ್ರೀದೇವಿ ಮಾಡುವೆ ಸಮಾರಂಭಕ್ಕೆಂದು ದುಬೈಗೆ ತೆರಳಿದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಸಂಬಂಧಿ ಒಬ್ಬರು ತಿಳಿಸಿದ್ದಾರೆ.

ಶ್ರೀದೇವಿ, ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದಾಗ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ, ಅವರಿಗೆ 54 ವರ್ಷ ವಯಸ್ಸಾಗಿತ್ತು. ಇವರು ರೆಬಲ್ ಸ್ಟಾರ್ ಅಂಬರೀಶ್, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸಿದ್ದರು.

ಸೂಪರ್ ಸ್ಟಾರ್ ಶ್ರೀದೇವಿ ಅವರು ದಕ್ಷಿಣಭಾರತ ಮತ್ತು ಹಿಂದಿ ಚಿತ್ರರಂಗದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚಿಗೆ ತಮಿಳಿನ ಪುಲಿ, ಹಿಂದಿಯ ಮಾಮ್ ಮತ್ತು ಇಂಗ್ಲಿಷ್ ವಿಂಗ್ಲೀಷ್ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರುಳಿದ್ದರು. ಅವರ ಇಂಗ್ಲಿಷ್ ವಿಂಗ್ಲೀಷ್ ಚಿತ್ರ ಹಲವು ಭಾಷೆಗಳಲ್ಲಿ ಡಬ್ ಆಗಿತ್ತು ಮತ್ತು ತುಂಬಾ ಹೆಸರು ಮಾಡಿತ್ತು.

ಕೇವಲ 4 ರ ಪ್ರಾಯದಲ್ಲಿಯೇ ಕಂಧಾನ್ ಕರುಂನಯ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿ 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದ ಮೂಲಕ ಬಾಲಿವುಡ್‍ಗೆ ಪರಿಚಿತವಾದರು . ಶ್ರೀದೇವಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಫೇಮಸ್ ಆಗಿದ್ದರು.

ಶ್ರೀದೇವಿ ಎಲ್ಲ ನಟಿಯರನ್ನು ಹಿಂದಿಕ್ಕಿ ಸೂಪರ್ ಸ್ಟಾರ್ ಆಗಿ, 80 ರ ದಶಕದಲ್ಲಿ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು. ಆದರೆ, 1995 ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.

ಅವರ ಅಪ್ರತಿಮ ನಟನೆಗೆ ಮೆಚ್ಚಿ ಮತ್ತು ಅವರ ಕಲಾಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. ಶ್ರೀದೇವಿ ಅವರ ಈ ಹಠಾತ್ ನಿಧನಕ್ಕೆ ಎಲ್ಲ ಚಿತ್ರರಂಗದ ನಟ ನಟಿಯರು ಸಂತಾಪ ಸೂಚಿಸಿದ್ದಾರೆ. ಶ್ರೀದೇವಿಯವರ ಸಾವು ಭಾರತ ಚಿತ್ರರಂಗಕ್ಕೆ ತುಂಬಲಾಗದ ನಷ್ಟವೇ ಸರಿ.

Also Read: ಶಾಕಿಂಗ್ ಸುದ್ದಿ: ಖಾಸಗಿ ಆಸ್ಪತ್ರೆಗಳು ಜನರಿಂದ 1700% ಅಧಿಕವಾಗಿ ಹಣ ಸ್ವೀಕರಿಸುತ್ತಿದ್ದಾರೆ ಎನುತ್ತೆ ಈ ಹೊಸ ವರದಿ..