ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಗಾಂಧೀಜಿ ಮೊಮ್ಮಮಗ ನೀವೇನು ಗಾಂಧಿ ಕುಟುಂಬದವರ ಎಂದು ರಾಹುಲ್ ಗೆ ಪತ್ರ ಬರೆದ ಶ್ರೀಕೃಷ್ಣ ಕುಲಕರ್ಣಿ..!

0
1332

ಹೌದು ಇವತ್ತಿಗೂ ಎಷ್ಟೋ ಜನ ತಿಳಿಕೊಂಡಿದರೆ ಗಾಂಧೀಜಿ ಕುಟುಂಬದವರು ಅಂದ್ರೆ ಸೋನಿಯಾ ಗಾಂಧಿ ಕುಟುಂಬ ಎರಡು ಒಂದೇ ಅಂತ ಎಷ್ಟೋಜನ ತಿಳಿದುಕೊಂಡಿದ್ದಾರೆ. ಆದ್ರೆ ಗಾಂಧಿ ಕುಟುಂಬನೇ ಬೇರೆ ಮತ್ತು ಸೋನಿಯಾಗಾಂಧಿ ಕುಟುಂಬನೇ ಬೇರೆ ಅನ್ನೋದು ಗೊತ್ತಿರಲಿ. ಪದೇ ಪದೇ ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮತ್ತು ಹಲವು ವಿಚಾರಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರು ಬಳಕೆ ಮಾಡಲಾಗುತಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿ ಮೊಮ್ಮಗ ಶ್ರೀಕೃಷ್ಣ ಕುಲಕರ್ಣಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರೆ.

ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಇದೆ ಮೊದಲ ಬಾರಿಗೆ ಗಾಂಧೀಜಿ ಮೊಮ್ಮಗ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರದ ಪಿತಾಮಹನ ಹತ್ಯೆಯನ್ವು ಆರ್ಎಸ್ಎಸ್ ಮಾಡಿದೆಯೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.ಗಾಂಧಿ ಕುಟುಂಬಕ್ಕೆ ನೀವು ಸೇರದವರು ನೀವು ಯಾಕೆ ಗಾಂಧೀಜಿ ಹೆಸರಲ್ಲಿ ಜನರು ಮೂರ್ಖನನ್ನಾಗಿ ಮಾಡಬಾರದು ಎಂದು ರಾಹುಲ್ ಗಾಂಧಿಯನ್ನು ಶ್ರೀಕೃಷ್ಣ ಕುಲಕರ್ಣಿ ಕೇಳಿದ್ದಾರೆ.

ಶ್ರೀಕೃಷ್ಣ ಕುಲಕರ್ಣಿ ಬರೆದಿರುವ ಬಹಿರಂಗ ಪತ್ರದಲ್ಲಿ ಕುಲಕರ್ಣಿಯವರು, ಈ ಹಿಂದೆ ನಡೆದ ಘಟನೆಯಿಂದ ಕುಟುಂಬವು ಮುಂದೆ ಸಾಗಿದೆ ಎಂದು ಹೇಳಿದ್ದಾರೆ ಮತ್ತು ಇವರು ತುಂಬ ಕಠಿಣ ಶಬ್ದಗಳನ್ನು ಬಳಸಿ ಈ ವಿಚಾರವಾಗಿ ಹೇಳಿದರೆ.

ಗಾಂಧಿಯವರ ಹತ್ಯೆಯನ್ನು ಆರ್ ಎಸ್ಎಸ್ ಮಾಡಿಸಿದೆಯೆಂಬ ಹೇಳಿಕೆಯು ಮತ್ತು ರಾಜೀವ್ ಗಾಂಧಿ ಯನ್ನು ತಮಿಳರು ಕೊಂದಿದ್ದಾರೆ” ಎಂಬ ಹೇಳಿಕೆಯಂತೆ ಆಗಿದೆಯೆಂದು ಮಾರ್ಮಿಕವಾದ ಮಾತುಗಳಿಂದ ರಾಹುಲ್ ಗಾಂಧಿಯನ್ನು ಪ್ರಶ್ನೆ ಮಾಡಿದ್ದಾರೆ.

ಯಾವುದೇ ಕೆಲ ವ್ಯಕ್ತಿಗಳು ಒಂದು ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಮೂಲಕ ತಮ್ಮ ಪತ್ರದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾಥೂರಾಮ್ ಗೋಡ್ಸೆ ಆರ್ ಎಸ್ಎಸ್ ಗೆ ಸೇರಿದಿದ್ದರೂ ಸಹ, ಈ ಸಮುದಾಯವು ಮಹಾತ್ಮನನ್ನು ಕೊಂದಿದೆ ಎಂದು ಅರ್ಥವಲ್ಲ ಎಂದೂ ಹೇಳಿದರು‌.

“ಆದ್ದರಿಂದ ದಯವಿಟ್ಟು ಈ ರೀತಿಯಾದ ಚೇಷ್ಟೆಯನ್ನು ನಿಲ್ಲಿಸಿರಿ. ಗಾಂಧಿ ಹೆಸರನ್ನು ಅವಕಾಶವಾದಕ್ಕೆ ಬಳಸುವುದನ್ನು ನಿಲ್ಲಿಸಿ. ನೀವು ಗಾಂಧಿ ಕುಟುಂಬದಿಂದ ಬಂದವರಾಗಿಲ್ಲ. ನೀವು ಭಾರತದಲ್ಲಿ ತುಂಬಾ ಜನರನ್ನು ಮೋಸಗೊಳಿಸಿದ್ದೀರಿ. ಈಗ ಅದನ್ನು ನಿಲ್ಲಿಸಿ, ” ಎಂದು ತಮ್ಮ ಆಕ್ರೋಶವನ್ನು ತಮ್ಮ ಪತ್ರದಲ್ಲಿ ಬರೆದು ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡಿದ್ದಾರೆ.