ಉಗ್ರದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಯ ಮಗನನ್ನು ಎತ್ತಿಕೊಂಡು ಕಣ್ಣೀರು ಹಾಕಿದ ಹಿರಿಯ ಅಧಿಕಾರಿಗಳ ಫೋಟೋ ದೇಶದ ಜನರಿಗೆ ಕಣ್ಣಿರು ತರಿಸಿದೆ..

0
344

ದೇಶದಲ್ಲಿ ಉಗ್ರರ ಅಟ್ಟಹಾಸಕ್ಕೆ ಹಲವಾರು ಯೋಧರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಗಡಿ ನಾಡಿನಲ್ಲಿ ದಿನನಿತ್ಯವೂ ಕದನ ನಡೆಯುತ್ತಾನೆ ಇದೆ. ಇದರಲ್ಲಿ ಪ್ರತಿನಿತ್ಯವೂ ಉಗ್ರರನ್ನು ಹೊಡೆದು ಹಾಕುತ್ತಿರುವ ಯೋಧರು ನೂರಾರು ಪಾಕಿಸ್ತಾನ ಸಾಕಿದ ಉಗ್ರರನ್ನು ಕೊಂದು ಹಾಕಿದ್ದಾರೆ. ಅದರಂತೆ ಜಮ್ಮು-ಕಾಶ್ಮೀರದ ಅನಂತ್‍ನಾಗ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಭಾನುವಾರ ಮೃತರಾದ ಅರ್ಷದ್ ಖಾನ್ ಎಂಬ ಪೊಲೀಸ್ ಅಧಿಕಾರಿಯ ಮೃತಪಟ್ಟಿದ್ದಾರೆ. ಇದರಿಂದ ಇಡಿ ಪೊಲೀಸ್ ಇಲಾಖೆ, ಸೇರಿದಂತೆ ಸ್ನೇಹಿತರು ಕುಟುಂಬದವರು ಸಂತಾಪ ಸೂಚಿಸಿದ್ದಾರೆ. ಈ ವೇಳೆಯಲ್ಲಿ ಸಹ ಉದ್ಯೋಗಿಯನ್ನು ಕಳೆದುಕೊಂಡ ಹಿರಿಯ ಅಧಿಕಾರಿಯೊಬ್ಬರು ತೋರಿದ ದುಃಖ ವೈರಲ್ ಆಗಿದೆ.

ಹೌದು ಅನಂತ್‍ನಾಗ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಇನ್ಸ್ ಪೆಕ್ಟರ್ ಅರ್ಷದ್ ಖಾನ್ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಅವರ ಮಗನನ್ನು ಹೊತ್ತು ಪೊಲೀಸ್ ವೊಬ್ಬರು ಕಣ್ಣೀರಿಡುತ್ತಿರುವ ಭಾವುಕ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅನಂತ್ ನಾಗ್ ನ ಸದಾರ್ ಪೊಲೀಸ್ ಸ್ಟೇಷನ್ನಿನ ಸ್ಟೇಷನ್ ಹೌಸ್ ಆಫೀಸರ್(SHO) ಆಗಿದ್ದ ಖಾನ್, ಜೂನ್ 12 ರಂದು ಅನಂತ್ ನಾಗ್ ನಲ್ಲಿ ನಡೆದ ಉಗ್ರದಾಳಿಯಲ್ಲಿ ಗಂಭೀರವಾಗಿ ಗಾಯಗೊಂದಿದ್ದರು. ಅವರನ್ನು ಕೂಡಲೆ ದೆಹಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 16 ರಂದು ಮೃತರಾದರು.

Also read: ಪುಲ್ವಾಮಾ ದಾಳಿಯಲ್ಲಿ ಅದೆಷ್ಟೋ ಸೈನಿಕರ ಪ್ರಾಣ ಉಳಿಸಿದ ಯೋಧ ಇಕ್ಬಾಲ್; ಪಾರ್ಶ್ವವಾಯು ಪೀಡಿತ ಮಗುವಿಗೆ ತೋರಿಸಿದ ಮಾನವಿತೆಗೆ ಬಂತು ಮೆಚ್ಚುಗೆಯ ಹೊಳೆ..

ಅವರ ಅಂತ್ಯ ಸಂಸ್ಕಾರ ಸೋಮವಾರ ನಡೆದಿದ್ದು, ಈ ಸಂದರ್ಭದಲ್ಲಿ ಅವರ 4 ವರ್ಷದ ಮಗ ಉಹ್ಬಾನ್ ನನ್ನು ಖಾನ್ ಅವರ ಸಹೋದ್ಯೋಗಿ ಹಸೀಬ್ ಮುಘಲ್ ಎಂಬ ಪೊಲೀಸರೊಬ್ಬರು ಎತ್ತಿಕೊಂಡಿದ್ದು, ಅವರ ಮುಖದಲ್ಲಿ ದುಃಖ ಉಮ್ಮಳಿಸುತ್ತಿರುವ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 40 ವರ್ಷ ವಯಸ್ಸಿನ ತಂದೆಗೆ ಉಹ್ಬಾನ್ ಕೊನೆಯ ನಮನ ಸಲ್ಲಿಸಿದರು. ಪತ್ನಿ, ತಂದೆ-ತಾಯಿ, ಇಬ್ಬರು ಮಕ್ಕಳು ಮತ್ತಿ ಓರ್ವ ಸಹೋದರನನ್ನು ಖಾನ್ ಅಗಲಿದ್ದಾರೆ. ಖಾನ್ ಅವರ ಇನ್ನೋರ್ವ ಪುತ್ರ ಕೇವಲ 18 ತಿಂಗಳಿನವನಾಗಿದ್ದು, ಆತನನ್ನು ಅಂತ್ಯ ಸಂಸ್ಕಾರಕ್ಕೆ ಕರೆದುಕೊಂಡು ಬಂದಿರಲಿಲ್ಲ.

Also read: ಕಾಮಾಲೆ ರೋಗದಿಂದ ಸಾಯುವ ಸ್ಥಿತಿಯಲ್ಲಿದ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ CRPF ಯೋಧರು..

ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಪ್ರತಿ ದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿಯೇ ಅನಂತ್‍ನಾಗ್ ನಗರದ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಎಸ್‍ಎಚ್‍ಒ ಆಗಿದ್ದ ಅರ್ಷದ್ ಖಾನ್ ಹುತಾತ್ಮರಾಗಿದ್ದಾರೆ.