ಎಸ್ ಎಸ್ ಬಿ -ಯಲ್ಲಿ ವಿವಿಧ ಇನ್ಸ್ ಪೆಕ್ಟೆರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
444

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸಶಸ್ತ್ರ ಸೀಮಾ ಬಲ ವಿವಿಧ 156 ಹುದ್ದೆಗಳನ್ನು ಭರ್ತಿಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮಾರ್ಚ್ 28,2019 ರ ಒಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಇನ್ಸ್ಪೆಕ್ಟರ್,ಸಬ್-ಇನ್ಸ್ಪೆಕ್ಟರ್, ಸುಬೇದಾರ್ ಮೇಜರ್ (ಸಿಸ್ಟರ್-ಇನ್ -ಚಾರ್ಜ್), ಸಬ್ – ಇನ್ಸ್ಪೆಕ್ಟರ್(ರೇಡಿಯೋಗ್ರಾಫರ್) ಇನ್ಸ್ಪೆಕ್ಟರ್(ಜ್ಯೂನಿಯರ್ ಹಿಂದಿ ಟ್ರಾನ್ಸ್ಲೇಟರ್) ಸಬ್-ಇನ್ಸ್ಪೆಕ್ಟರ್(ಮೊಟಾರ್ ಟ್ರಾನ್ಸ್ ಪೋರ್ಟ್),ಸಬ್ ಇನ್ಸ್ಪೆಕ್ಟರ್(ಮೆಕ್),ಇನ್ಸ್ಪೆಕ್ಟರ್ ಜನರಲ್(ವರ್ಕ್ಸ್),ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ವರ್ಕ್ಸ್), ಡೆಪ್ಯುಟಿ ಕಮಾಂಡೆಂಟ್(ಇಂಜಿನಿಯರ್),ಸೀನಿಯರ್ ಇನ್ಸ್ಟ್ರಕ್ಟರ್(ಮೌಂಟೇನಿಯರಿಂಗ್),ಸೀನಿಯರ್ ಫೀಲ್ಡ್ ಆಫೀಸರ್(ಮೌಂಟೇನಿಯರಿಂಗ್) ಚೀಫ್ ವೆಟರಿನರಿ ಆಫೀಸರ್, ಎಕ್ಸಿಕ್ಯೂಟಿವ್ ಇಂಜಿನಿಯರ್.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮ,ಪದವಿ ಅಥವಾ ಮಾನ್ಯತೆ ಸಂಸ್ಥೆಯಿಂದ ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಗರಿಷ್ಟ 52 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಫಿಸಿಕಲ್ ಫಿಟ್ನೆಸ್, ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ ಮತ್ತು ಮೆಡಿಕಲ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿಗಳು ತಾವು ಸಹಿ ಮಾಡಿದ ಅರ್ಜಿಯ ಪ್ರತಿ ಜೊತೆಗೆ ಐಡಿ ಪ್ರೂಫ್, ಜನನ ಪ್ರಮಾಣ ಪತ್ರ ಮತ್ತು ಶೈಕ್ಷಣಿಕ ಪ್ರಮಾಣಪತ್ರ ಮತ್ತು ಜಾತಿ
ಪ್ರಮಾಣಪತ್ರ ಮತ್ತು ದೃಢೀಕರಿಸಿದ ಪ್ರತಿಗಳು ಮುಂತಾದವುಗಳನ್ನು ಅಂಚೆ ಮೂಲಕ ಕಳುಹಿಸಬೇಕು.

ಅಂಚೆ ವಿಳಾಸ:
ಅಸಿಸ್ಟೆಂಟ್ ಡೈರೆಕ್ಟರ್,
ಡೈರೆಕ್ಟೊರೇಟ್ ಜನರಲ್,
ಸಶಸ್ತ್ರ ಸೀಮಾ ಬಲ, ಈಸ್ಟ್ ಬ್ಲಾಕ್ V,
ಆರ್.ಕೆ.ಪುರಂ, ನವದೆಹಲಿ-110066.

ಹೆಚ್ಚಿನ ಮಾಹಿತಿಗಾಗಿ: https://drive.google.com/open?id=1Hf-KEQ0gYpVsjrLT6up6NDIKAOOB7-RY ಕ್ಲಿಕ್ ಮಾಡಿ.

Also read: ರೈಲ್ವೆ ಇಲಾಖೆಯಲ್ಲಿ ಉದ್ಯೋಗದ ನಿರಿಕ್ಷೆಯಲ್ಲಿದ್ದಿರಾ.. ಹಾಗಾದ್ರೆ ಇಲ್ಲಿದೆ ನೋಡಿ ಸಿಹಿ ಸುದ್ದಿ; ಭಾರತೀಯ ರೈಲ್ವೆ ಇಲಾಖೆಯಲ್ಲಿ 4 ಲಕ್ಷ ಉದ್ಯೋಗಾವಕಾಶ..