ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 1600 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
209

ಇಂಜಿನಿಯರ್ ಪದವಿದರರಿಗೆ ಸುವರ್ಣಾವಕಾಶ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 1600 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಫೆಬ್ರವರಿ 25,2019 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

Also read: ಭಾರತೀಯ ರೈಲ್ವೆ (RRB) 1.3 ಲಕ್ಷ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಜ್ಯೂನಿಯರ್ ಇಂಜಿನಿಯರ್

ಸಂಸ್ಥೆ (Organisation): ಸ್ಟಾಫ್ ಸೆಲೆಕ್ಷನ್ ಕಮಿಷನ್

ಹುದ್ದೆಗಳು: ಜ್ಯೂನಿಯರ್ ಇಂಜಿನಿಯರ್ (ಸಿವಿಲ್), ಜ್ಯೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್), ಜ್ಯೂನಿಯರ್ ಇಂಜಿನಿಯರ್ (ಕ್ವಾಂಟಿಟಿ ಸರ್ವೇಯಿಂಗ್ ಮತ್ತು ಕಾಂಟ್ರಾಕ್ಟ್)

ವಿದ್ಯಾರ್ಹತೆ (Educational Qualification): ಬಿ.ಇ/ಬಿ.ಟೆಕ್

ಉದ್ಯೋಗ ಸ್ಥಳ (Job Location): ಭಾರತದೆಲ್ಲೆಡೆ

ವೇತನ (Salary Scale): ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400/- ರಿಂದ 1,12,400/-ರೂ ವೇತನವನ್ನು ನೀಡಲಾಗುವುದು.

ವಯೋಮಿತಿ: ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್ 1,2019ರ ಅನ್ವಯ ಗರಿಷ್ಟ 32ವರ್ಷ ವಯೋಮಿತಿಯೊಳಗಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.

ಸಾಮಾನ್ಯ ಅಭ್ಯರ್ಥಿ ಮತ್ತು ಓಬಿಸಿ ಅಭ್ಯರ್ಥಿಗಳು 100/- ರೂ ಶುಲ್ಕ ಪಾವತಿಸಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ ಅಭ್ಯರ್ಥಿಗಳು ಈ ಶುಲ್ಕ ವಿನಾಯಿತಿಯನ್ನು ಹೊಂದಿದ್ದಾರೆ. ಆನ್ ಲೈನ್ ಮೂಲಕ ಶುಲ್ಕ ಪಾವತಿಸಲು ಫೆಬ್ರವರಿ 27,2019 ಕೊನೆಯ ದಿನವಾಗಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ: https://ssc.nic.in/ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: https://karnatakacareers.in/wp-content/uploads/2019/01/apply-online-for-junior-engineer-posts-advt-details-fb02ec.pdf ಕ್ಲಿಕ್ ಮಾಡಿ.