SSLCಯಲ್ಲಿ ಮಗ ಪಾಸಾಗಿದ್ದಕ್ಕೆ ತಂದೆ ಏನ್ ಮಾಡಿದ ಗೊತ್ತ…!

0
775

ಖಂಡಿತ ಇಂತ ತಂದೆ ಮಗನ ನೀವು ಎಲ್ಲಿ ನೋಡಿಲ್ಲ ಅನ್ಸುತ್ತೆ ಯಾಕೆ ಅಂದ್ರೆ ಮಗ ಎಸ್‍ಎಸ್‍ಎಲ್‍ಸಿ ಯಲ್ಲಿ ಪಾಸ್ ಆಗಿದ್ದಕ್ಕೆ ತಂದೆ ಏನ್ ಮಾಡಿದ ಗೊತ್ತೇ ಅದ್ದೂರಿ ಮೆರೆವಣಿಗೆ ಮತ್ತು ಡಿಜೆ ಬ್ಯಾಂಡ್‍ನೊಂದಿಗೆ ತನ್ನ ಊರಿಗೆ ಬರಮಾಡಿಕೊಂಡಿದ್ದಾನೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಗ್ರಾಮದ ದೇವಪ್ಪ ಎಂಬವರ ಮಗ ಸೇಡಂ ಪಟ್ಟಣದ ಸಿದ್ದಾರ್ಥ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ.

ತನ್ನ ಮಗ ಫೇಲಾಗ್ತಾನೆ ಎಂದು ದೇವಪ್ಪ ಅಂದುಕೊಂಡಿದ್ದರು. ಆದ್ರೆ ಫಲಿತಾಂಶ ಬಂದ ನಂತರ ಅಚ್ಚರಿಗೊಂಡಿದ್ದರು. ಯಾಕಂದ್ರೆ ಫೇಲ್ ಆಗ್ತಾನೆ ಎಂದುಕೊಂಡಿದ್ದ ಮಗ ಶೇಕಡಾ 51ರಷ್ಟು ಅಂಕಗಳನ್ನ ಪಡೆದು ಪಾಸಾಗಿದ್ದ.

ಇದರಿಂದ ಪುಲ್ ಖುಷ್ ಆಗಿದ್ದ ದೇವಪ್ಪ ತನ್ನ ಮಗನನ್ನು ಅದ್ದೂರಿ ಮೆರೆವಣಿಗೆ ಡಿಜೆ ಮತ್ತು ಬ್ಯಾಂಡ್ ಮೂಲಕ ಗ್ರಾಮಕ್ಕೆ ಕರೆತಂದಿದ್ದಾರೆ.