ಜಿಲ್ಲಾವಾರು ಎಸ್.ಎಸ್..ಎಲ್.ಸಿ ಫಲಿತಾಂಶದಲ್ಲಿ ಕಳೆದ ಬಾರಿ 31ನೇ ಸ್ಥಾನದಲ್ಲಿದ್ದ ಹಾಸನವನ್ನು ಮೊದಲನೇ ಸ್ಥಾನಕ್ಕೆ ಬಂದ ಕಥೆ ಬಿಚ್ಚಿಟ್ಟ IAS ಅಧಿಕಾರಿ ರೋಹಿಣಿ ಸಿಂಧೂರಿ!!

0
1072

ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದೆ. ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ. 1.77 ರಷ್ಟು ಹೆಚ್ಚಾಗಿದೆ. ಈ ಸಲ ಶೇ. 73.70 ರಷ್ಟು ಫಲಿತಾಂಶ ಬಂದಿದ್ದು, ಶೇ. 79.59 ವಿದ್ಯಾರ್ಥಿನಿಯರು ಪಾಸಾಗಿದ್ದು, ಶೇ. 68.46 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಹಾಸನ ಜಿಲ್ಲೆ ಈ ಬಾರಿ ಹೊಸ ಇತಿಹಾಸ ಸೃಷ್ಟಿಸಿದೆ.

ಹೌದು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ರಾಜ್ಯದಲ್ಲೇ ಪ್ರಥಮ ಫಲಿತಾಂಶ ಪಡೆದು ಎಲ್ಲರ ಮೆಚ್ಚಿಗೆಗೆ ಕಾರಣವಾಗಿದೆ. ಇದಕ್ಕೆಲ್ಲಾ ಮುಕ್ಯ ಕಾರಣ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಕೆಲಸ ಕಾರ್ಯದಿಂದಾಗಿ ಈ ಬಾರಿ ಹಾಸನ ಜಿಲ್ಲೆ 10ನೇ ತರಗತಿ ಪರೀಕ್ಷೆಯಲ್ಲಿ ಶೇ.89.33 ಫಲಿತಾಂಶದೊಂದಿಗೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ. ಹಾಸನ ಜಿಲ್ಲೆಗೆ ಈ ಹಿಂದೆ 2014-15 ರಲ್ಲಿ 9ನೇ ಸ್ಥಾನ, 2015-16 ರಲ್ಲಿ 18ನೇ ಸ್ಥಾನ, 2016-17ರ ಅವಧಿಯಲ್ಲಿ 31ನೇ ಸ್ಥಾನ, 2017-18 ರಲ್ಲಿ 7ನೇ ಸ್ಥಾನಕ್ಕೆ ಏರಿದರೆ ಈ ವರ್ಷ ಪ್ರಥಮ ಸ್ಥಾನ ಪಡೆದಿದೆ.

ಹಾಗಾದರೆ ರೋಹಿಣಿ ಸಿಂಧೂರಿ ಮಾಡಿದ್ದೇನು..?

ಹಾಸನದಲ್ಲಿ ರೋಹಿಣಿ ಯವರು ಅಧಿಕಾರ ಸ್ವೀಕರಿಸಿದ್ದಾಗ ಒಟ್ಟಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆ 31ನೇ ಸ್ಥಾನವನ್ನು ಪಡೆದಿತ್ತು. ಇದನ್ನು ಅರಿತ ರೋಹಿಣಿಯವರು ಫಲಿತಾಂಶವನ್ನು ಹೆಚ್ಚಳ ಕಾರ್ಯವನ್ನು ತಮ್ಮ ಕೈಗೆ ಎತ್ತಿಕೊಂಡು ಮಕ್ಕಳ ವಿದ್ಯಾಭ್ಯಾಸವನ್ನು ಹೇಗೆ ಹೆಚ್ಚಿಸಬೇಕು ಎಂದು ಅರಿತು ಕಳೆದ 2 ವರ್ಷಗಳಿಂದ ಸತತವಾಗಿ ರೇಡಿಯೋ ಮೂಲಕ ಮಕ್ಕಳಿಗೆ ಪಾಠ, ಹೇಗೆ ಪರೀಕ್ಷೆಗೆ ಓದಬೇಕು, ಯಾವ ರೀತಿ ಬರೆಯಬೇಕು ಹೀಗೆ ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಪ್ರಯತ್ನದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕಠಿಣ ಪರಿಶ್ರಮದಿಂದ ಜಿಲ್ಲೆ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರೋಹಿಣಿ ಸಿಂಧೂರಿ ವಿದ್ಯಾರ್ಥಿಗಲಿಗೊಸ್ಕರ ಮಾಡಿರುವ ಕೆಲಸಗಳು ಯಾವುವು..?

  • ಮಕ್ಕಳಿಗೆ ಪಾಠ ಹೇಳುವುದು, ಹೇಗೆ ಪರೀಕ್ಷೆಗೆ ಓದಬೇಕು ಸಮಯದ ಸದುಪಯೋಗ ಹೇಗೆ ಪಡೆಯಬೇಕು, ಯಾವ ರೀತಿ ಬರೆಯಬೇಕು ಮುಂತಾದ ವಿಷಯಗಳ ಬಗ್ಗೆ ಕಾರ್ಯಕ್ರಮಗಳನ್ನು ರೇಡಿಯೋ ಮೂಲಕ ತಿಳಿಸುವುದು.
  • ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯ ಶಿಕ್ಷಕರಿಂದ ಶಿಕ್ಷಣ ನೀಡುವುದು.
  • ಶಾಲೆಗಳು ಆರಂಭಗೊಳ್ಳುವಾಗಲೇ ಸ್ಪೆಷಲ್ ಕ್ಲಾಸ್ ನೀಡಿ ಮಕ್ಕಳಿಗೆ ಆರಂಭದಲ್ಲೇ ತರಬೇತಿ ನೀಡುವುದು.

ರೋಹಿಣಿ ಸಿಂಧೂರಿ ಈ ಸಾಧನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದೇನು..?

2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಮಯದಲ್ಲಿ ಜಿಲ್ಲೆಯ ಎಸ್ಎವಸ್ಎ ಲ್ಸಿ ಫಲಿತಾಂಶ ನೋಡಿ ಬೇಸರಗೊಂಡು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಬಗ್ಗೆ ಚಿಂತಿಸಿ ಹಲವು ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಖಾಸಗಿ ಶಾಲೆಗಳ, ಮತ್ತು ಶಿಕ್ಷಕರ ಸಹಕಾರದಿಂದಾಗಿ ಈ ಬಾರಿ 31ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಏರಿಕೆ ಯಾಗಿದ್ದು ತುಂಬಾ ಸಂತಸತಂದಿದ್ದು, ಈ ಸಾಧನೆಗೆ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಪಬ್ಲಿಕ್ ಟಿವಿ ಜೊತೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.