ಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಕರ್ಷಕ ಕೇಕ್ ಪ್ರದರ್ಶನ!!! 3ಡಿ ಕೇಕ್’ನಲ್ಲಿ ಮೂಡಿಬಂದ ಅಣ್ಣಾವ್ರ ಕೇಕ್ ಪ್ರಮುಖ ಆಕರ್ಷಣೆ !!!

0
610

ನಗರದ ಕಂಠೀರವ ಕ್ರೀಡಾಂಗಣ ಸಮೀಪದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೇಕ್ ಪ್ರದರ್ಶನದಲ್ಲಿ ವಿವಿಧ ವಿನ್ಯಾಸ, ಗಾತ್ರ, ಬಣ್ಣ ಬಣ್ಣದ ಕೇಕ್ ಪ್ರದರ್ಶನ ಕ್ಕಿಡಲಾಗಿದೆ.

ಬೆಂಗಳೂರಿನಲ್ಲಿ ಸತತ 43 ವರ್ಷಗಳಿಂದ ನಡೆಸಲಾಗುತ್ತಿರುವ ವಾರ್ಷಿಕ ಕೇಕ್ ಪ್ರದರ್ಶನ ಡಿ. 15ರಿಂದ ಜ. 1ರವರೆಗೆ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ. ಸಿ.ರಾಮಚಂದ್ರನ್ ಅವರು ಪ್ರತಿವರ್ಷವೂ ಕೇಕ್ ಪ್ರದರ್ಶನವನ್ನು ಅತ್ಯುತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಈ ಬಾರಿಯ ವಿಶೇಷ ಆಕರ್ಷಣೆ ಏನೆಂದರೆ ರಾಜವಂಶದವರು ಬಳಸುತ್ತಿದ್ದ ಹಾಗೂ ಮದುವೆಮನೆಯಲ್ಲಿ ಮದುಮಗಳು ತನ್ನ ತವರುಮನೆಯಿಂದ ಗಂಡನ ಮನೆಗೆ ಹೋಗಲು ಬಳಸುತ್ತಿದ್ದ ಭಾರತೀಯ ಡೋಲಿ ಅಥವಾ ಪಲ್ಲಕ್ಕಿ ಮಾದರಿಯ ಕೇಕ್ ಪ್ರಮುಖವಾದದ್ದು.

ಶಂಕರ್ ನಾಗ್ ಟ್ರಸ್ಟ್ ಸುಮಾರು 5.7 ಅಡಿ ಉದ್ದವಿರುವ,150 ಕೆ.ಜಿ. ತೂಕದ ವರನಟ ಡಾ.ರಾಜ್‌ಕುಮಾರ್ ಮಾದರಿಯ 3ಡಿ ಕೇಕ್ ‘ಮಯೂರ’ ಚಿತ್ರದ ರಾಜ್‌ಕುಮಾರ್ ಮಾದರಿ ಕೇಕ್ ಅಭಿಮಾನಿಗಳನ್ನು ಸೆಳೆಯುತ್ತಿದೆ.

145 ಕೆ.ಜಿ. ತೂಕ, 6.5 ಅಡಿ ಎತ್ತರ, 5 ಅಡಿ ಉದ್ದ, 4 ಅಡಿ ಅಗಲವಿರುವ ಈ ಕೇಕ್ ತಯಾರಿಸಲು ಅವ್ರಿಲ್, ಶ್ರೀಕಾಂತ್, ಮಹೇಶ್ 21 ದಿನ ಶ್ರಮಿಸಿದ್ದಾರೆ. 1,200 ಕೆಜಿ ತೂಕದ ಗೇಟ್ ವೇ ಆಫ್ ಇಂಡಿಯಾ, 180 ಕೆ.ಜಿ. ತೂಕದ ಪಾಂಡಾ, 60 ಕೆ.ಜಿಯ ಪ್ಯಾಲೆಟ್, 50 ಕೆ.ಜಿ.ಯ ಗಂಧರ್ವ ಲೋಕದ ಮದುವೆ ಅರಮನೆ, 65 ಕೆ.ಜಿಯ ಮತ್ಸ್ಯಕನ್ಯೆ, 85 ಕೆ.ಜಿ.ಯ ಫುಟ್ಬಾಲ್ ಮಾದರಿಯ ಕೇಕ್​ಗಳಲ್ಲದೆ, ಆಂಗ್ರಿ ಬರ್ಡ್, ಗೂಳಿ ಮತ್ತು ಕರಡಿ, ಐಫೆಲ್ ಟವರ್, ಸ್ಕೂಟರ್ ಮುಂತಾದ ಪರಿಕಲ್ಪನೆಯ ಕೇಕ್​ಗಳು ಪ್ರದರ್ಶನದಲ್ಲಿವೆ.

ಕೇಕ್ ಪ್ರದರ್ಶನದಲ್ಲಿ ಶಾಪಿಂಗ್, ಊಟ, ಕೇಕ್ ಪ್ರಿಯರಿಗಾಗಿ 72 ಮಳಿಗೆಗಳನ್ನು ತೆರೆಯಲಾಗಿದೆ. 23 ಬಗೆಯ ಕೇಕ್ ಕಲಾಕೃತಿಗಳನ್ನು ನೋಡುತ್ತಲೇ ಶಾಪಿಂಗ್ ಮಾಡಬಹುದು, ಬೇಕಾದ ಕೇಕ್ ಖರೀದಿ ಮಾಡಿ, ಸವಿಯಾದ ಊಟ ಸವಿಯಲು ಕೂಡ ಅವಕಾಶವಿದೆ. ಇನ್ನೇನು ತಡ ಅತ್ಯಾಕರ್ಷಕ ಕೇಕ್ ಪ್ರದರ್ಶನಕ್ಕೆ ನೀವು ತಪ್ಪದೆ ಭೇಟಿ ಕೊಡಿ..